ಕೊರೋನ ಸೋಂಕಿನ ಬಹುಮುಖ್ಯ ಲಕ್ಷಣ ಮೂಗುಸೋರುವಿಕೆಯನ್ನು ಕ್ಷಣದಲ್ಲೇ ತಡೆಯಿರಿ..!

ಕೊರೋನ ಸೋಂಕಿನ ಬಹುಮುಖ್ಯ ಲಕ್ಷಣ ಮೂಗುಸೋರುವಿಕೆಯನ್ನು ಕ್ಷಣದಲ್ಲೇ ತಡೆಯಿರಿ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

ಮೂಗುಸೋರುವಿಕೆಯನ್ನು ಕ್ಷಣದಲ್ಲೇ ತಡೆಯಿರಿ

ಕೊರೋನ ಸೋಂಕಿನ ಬಹುಮುಖ್ಯ ಲಕ್ಷಣ ಮೂಗುಸೋರುವುದು.ಇದು ಸೋಂಕಿತನಲ್ಲಿ ರೋಗ ಉಲ್ಬಣಿಸುತ್ತಿರುವುದನ್ನು ಸೂಚಿಸುತ್ತದೆ ಮತ್ತು ಇನ್ನೊಬ್ಬರಿಗೆ ಸುಲಭವಾಗಿ ಹರುಡುವ ಹಂತವನ್ನು ಸೂಚಿಸುತ್ತದೆ.

ಈ ಹಂತದ ಎಚ್ಚರಿಕೆಗಳನ್ನು ನೋಡೋಣ:

ಏನು ಮಾಡಬಾರದು??

• ಆಂಟಿ ಹಿಸ್ಟಮಿನ್ ಮಾತ್ರೆಗಳಿಂದ ನೆಗಡಿಯನ್ನು ನಿಲ್ಲಿಸಬಾರದು-ಇದರಿಂದ ಮೂಗುಸೋರುವಿಕೆ ನಿಂತು ಪುಪ್ಪುಸಗಳಲ್ಲಿ ಕಫ ಸಂಚಯವಾಗಿ, ಆ ಕಫದಲ್ಲಿ ವೈರಾಣುಗಳು ಯಥೇಚ್ಛವಾಗಿ ವೃದ್ಧಿಯಾಗುತ್ತವೆ.
• ಹಾಗೆಂದು ಸೋರುವ ಮೂಗಿನಿಂದ ಇನ್ನೊಬ್ಬರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ನಿಮಗೆ ತಿಳಿದ ಮಾಸ್ಕ್ , ಕರವಸ್ತ್ರ ಬಳಕೆ…ಮುಂತಾದ ವಿಧಾನಗಳನ್ನು ಅನುಸರಿಸಿ.

ಏನು ಮಾಡಬೇಕು??

• ಸೋರುವ ಮೂಗಿನಿಂದ ಕ್ಷಣದಲ್ಲಿ ಬಿಡುಗಡೆ ಹೊಂದಲು ಹೀಗೆ ಮಾಡಿ.
ಶುದ್ಧ ಅರಿಶಿಣದ ಕೊಂಬಿನ ತುದಿಯನ್ನು ಸುಡಬೇಕು. ಆಗ ಅಗರಬತ್ತಿಯಂತೆ ನೀಳವಾಗಿ ಬರುವ ಹೊಗೆಯನ್ನು ಒಂದು ಅಥವಾ ಎರಡು ಬಾರಿ ಆಳವಾಗಿ ಮೂಗಿನಿಂದ ಎಳೆದುಕೊಳ್ಳಬೇಕು.
ಆ ಕ್ಷಣದಲ್ಲೇ ಮೂಗಿನಿಂದ ನೀರು ಸೋರುವುದು ನಿಂತುಬಿಡುತ್ತದೆ.

ಈ ವಿಧಾನವು ಅಂಟಿಹಿಸ್ಟಮಿನ್ ಮಾತ್ರೆಗಳಿಗಿಂತ ಅತ್ಯಂತ ಶ್ರೇಷ್ಠವಾಗಿದೆ. ಇಲ್ಲಿ ಕಫ ಸಂಚಯವಾಗುವುದಿಲ್ಲ ಮತ್ತು ಉಸಿರ್ನಾಳಗಳಲ್ಲಿ ಊತ ಉಂಟಾಗುವುದಿಲ್ಲ. “ಅರಿಶಿಣಕ್ಕೆ ವೈರಾಣು ನಿಯಂತ್ರಕ ಸಾಮರ್ಥ್ಯ ಮತ್ತು ನಮ್ಮ ಜೀವಕೋಶಗಳನ್ನು ರಕ್ಷಿಸುವ ಸಾಮರ್ಥ್ಯ” ಎರಡೂ ಇರುವುದರಿಂದ ಈ ವಿಧಾನವು ಅತ್ಯಂತ ಸಮರ್ಪಕವಾಗಿದೆ.

ದಿನಕ್ಕೆ ಎರಡರಿಂದ ಮೂರು ಬಾರಿ ಅಗತ್ಯಕ್ಕನುಸಾರ ಈ ವಿಧಾನವನ್ನು ಅನುಸರಿಸಬಹುದು.

ಹೊಗೆಯನ್ನು ಎಳೆದುಕೊಳ್ಳುವಾಗ ಎರಡು-ಮೂರು ಸೆಕೆಂಡುಗಳ ಕಾಲ ಮೂಗಿನಾಳದಲ್ಲಿ ಉರಿ ಬರುತ್ತದೆ. ಆದ್ದರಿಂದ 7 ವರ್ಷದೊಳಗಿನ ಮಕ್ಕಳ ಬಳಿಗೆ ಅರಿಶಿಣದ ಹೊಗೆ ಹರಡುವಂತೆ ಮಾಡಿದರೆ ಸಾಕು. ಅದಕ್ಕಾಗಿ, ಕೆಳಗಿನ ವಿಧಾನ ಅನುಸರಿಸಿ.


◆ತೆಳುವಾದ ಒಂದು ಚಿಕ್ಕ ಪಾತ್ರೆಯನ್ನು ಚೆನ್ನಾಗಿ ಕಾಯಿಸಿ ಅದರೊಳಗೆ ಶುದ್ಧ ಅರಿಶಿಣದ ಪುಡಿಯನ್ನು ಹಾಕಿ ಪಾತ್ರೆಯನ್ನು ಸ್ವಲ್ಪವೇ ಅಲುಗಾಡಿಸಿದರೆ ದಟ್ಟವಾದ ಹೊಗೆ ಬರುತ್ತದೆ. ಈ ಹೊಗೆಯನ್ನು ಮಗುವಿನ ಸುತ್ತ ಹಿಡಿದರೆ ಸಾಕು, ಮಗು ಸಹಜವಾಗಿ ಈ ಹೊಗೆಯನ್ನು ಎಳೆದುಕೊಳ್ಳುವುದರಿಂದ ಮೂಗು ಸೋರುವಿಕೆ ನಿಲ್ಲುತ್ತದೆ. ಹಾಗೆಯೇ ಅರಿಶಿಣದ ಈ ಹೊಗೆಯನ್ನು
ಮನೆತುಂಬ ನಿತ್ಯವೂ ಹಾಕಬಹುದು.

ೲೲೲೲೲೲೲೲೲೲೲೲೲೲೲೲ

ನಿತ್ಯವೂ ಆಯುರ್ವೇದಿಯ ಕಷಾಯವನ್ನು ಬಳಸಿ ಸೋಂಕಿನಿಂದ ಸಂರಕ್ಷಿಸಿಕೊಳ್ಳಿ.

•••••••••••••••••••••••••••••••••••••••••••••
ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!