ಜೀವ ಉಳಿಸುವ ಜೀರಕ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-31

ಜೀವ ಉಳಿಸುವ ಜೀರಕ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-31

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-31

“ಜೀವ ಉಳಿಸುವ ಜೀರಕ”

30)ಜೀರಕ (Cumimum cyminum):(ಜೀರಿಗೆ)

ಆಧುನಿಕ ಆಹಾರ ಶೈಲಿಯಿಂದ ಶರೀರದಲ್ಲುಂಟಾಗುವ ವಿಷದಿಂದ ಅನೇಕ ರೀತಿಯ ಕ್ಯಾನ್ಸರ್ ಗಳು ಉಂಟಾಗುತ್ತಿವೆ. ಎಲ್ಲರ ಮನೆಯಲ್ಲಿ ನಿತ್ಯವೂ ತಪ್ಪದೇ ಬಳಸುವ ಜೀರಿಗೆಯು ಕ್ಯಾನ್ಸರ್ ಸೆಲ್ ಗಳು ಉಂಟಾಗುವುದನ್ನು ಗಣನೀಯವಾಗಿ ತಗ್ಗಿಸುತ್ತದೆ.

1992 ರಲ್ಲಿ ಆಹಾರ ಮತ್ತು ಅದರಲ್ಲಿನ ರಾಸಾಯನಿಕಗಳ ವಿಷಪರಿಣಾಮದ ಅಧ್ಯಯನಕ್ಕಾಗಿ ನಡೆದ ಸಂಶೋಧನೆಯಲ್ಲಿ “Bingo(A)pyrine” ಎಂಬ ರಾಸಾಯನಿಕದಿಂದ ಉಂಟಾಗುವ ಕ್ಯಾನ್ಸರ್ ಅನ್ನು ಜೀರಿಗೆಯು ತಡೆಯುತ್ತದೆ ಎಂದು ದೃಢೀಕರಿಸಲಾಗಿದೆ.
ಹಾಗೆಯೇ, “3-methyl 1-4-dimethyl lemino azo” benjene ರಿಂದ ಉಂಟಾಗುವ ಲಿವರ್ ಕ್ಯಾನ್ಸರ್ ಅನ್ನೂ ಸಹ ತಡೆಯುವ ಸಾಮರ್ಥ್ಯವನ್ನು ಜೀರಿಗೆಯು ಹೊಂದಿದೆ ಎಂದು ದೃಢೀಕರಿಸಲಾಗಿದೆ.

ಮೇಲಿನ ಎರಡೂ ರಾಸಾಯನಿಕಗಳು ಆಹಾರವು ಅತ್ಯಂತ ತೀವ್ರ ಉಷ್ಣತೆಯಲ್ಲಿ ಬೆಂದಾಗ ಬಿಡುಗಡೆಯಾಗುತ್ತವೆ. ಅಂದರೆ, ಪದಾರ್ಥಗಳನ್ನು ಕರಿಯುವಾಗ ಎಣ್ಣೆಯು ಅತ್ಯಂತ ಉಷ್ಣತೆಯ ಮಟ್ಟ ತಲುಪುವುದರಿಂದ ಈ ರೀತಿಯ ರಾಸಾಯನಿಕಗಳು ಬಿಡುಗಡೆಯಾಗುತ್ತವೆ.
ಆದ್ದರಿಂದ, ನಿತ್ಯವೂ ಕರಿದ ಪದಾರ್ಥವನ್ನು ಸೇವಿಸದಿರಲು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

ಇಂದಿನ ಸೋಂಕಿನ ಅವಸ್ಥೆಯಲ್ಲಿ ಜೀರಿಗೆಯು ವಿಷಯುಕ್ತ ರಾಸಾಯನಿಕವನ್ನು ಮೂಲದಲ್ಲೇ ತಡೆಯುವುದರಿಂದ ವ್ಯಾಧಿಯು ಉಲ್ಭಣವಾಗುವುದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.
ಹಾಗೆಂದು,
• ಜೀರಾ ಬಿಸ್ಕೆಟ್
• ಜೀರಾ ಸೋಡಾ
• ಜೀರಾ ಫ್ರಯ್ಡ್ ರೈಸ್………
ಇಂತಹುಗಳನ್ನು ಸೇವಿಸಿದರೆ ಅನಾರೋಗ್ಯವು ಕಟ್ಟಿಟ್ಟಬುತ್ತಿ. ಏಕೆಂದರೆ, ಇವುಗಳಲ್ಲಿ ಮೈದಾ, ಕಾರ್ಬೊನೇಟೆಡ್ ಜಲ, ಕರಿದ/ಹುರಿದ ಎಣ್ಣೆ ಇರವುದರಿಂದ ರೋಗನಿವಾರಣೆಯ ಬದಲು ರೋಗೋತ್ಪತ್ತಿ ಕಾರಕಗಳಾಗುತ್ತವೆ.

“ಜೀರಕ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

http://dx.doi.org/10.13005/bpj/800

“ಜೀರಕ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!