ಚರಿತ್ರಾರ್ಹ ಚಿತ್ರಕ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-27..!

ಚರಿತ್ರಾರ್ಹ ಚಿತ್ರಕ ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-27..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-27

ಚರಿತ್ರಾರ್ಹ ಚಿತ್ರಕ”

25)ಚಿತ್ರಕ (Plumbago zeylanica):
(ಚಿತ್ರ ಮೂಲ)

“ಚಿತ್ರಕ”ದ ಬೇರು ಅತ್ಯಂತ ತೀಕ್ಷ್ಣವಾಗಿದ್ದು “ಅಗ್ನಿ, ಅಗ್ನಿಕ, ಜ್ಯೋತಿ, ದಹನ, ವನ್ಹಿ, ಶಿಖಿ” ಎಂಬ ಬೆಂಕಿಗೆ ಸಮಾನವಾದ ಪರ್ಯಾಯ ನಾಮಗಳನ್ನು ಹೊಂದಿದೆ. ಇದರ ತೀಕ್ಷ್ಣತೆ ಎಷ್ಟೆಂದರೆ, ಗರ್ಭಿಣಿಯರ ಸೊಂಟಕ್ಕೆ ಈ ಬೇರಿನ ಸ್ವಲ್ಪ ಭಾಗವನ್ನು ಕಟ್ಟಿದರೂ ಸಹ ಗರ್ಭಸ್ರಾವ, ಗರ್ಭಪಾತ ಮಾಡುವಷ್ಟು ಬಲಶಾಲಿ ದ್ರವ್ಯವಾಗಿದೆ.

ಸುಲಭದಲ್ಲಿ ಬಗೆಹರಿಯದ ಗಂಭೀರ ರೋಗಗಳನ್ನು (ಕಫಜನ್ಯ ರೋಗಗಳು: ಉದಾಹರಣೆಗೆ:ಆಮವಾತ, ಚರ್ಮದ ಬಿಳುಪು ಅಥವಾ ತೊನ್ನು, ಅರ್ಶಸ್ ಅಥವಾ ಮೂಲವ್ಯಾಧಿ……) ತನ್ನ ಕಾರ್ಮುಖತೆಯಿಂದ ಗುಣಪಡಿಸುತ್ತದೆ.

ಪುಪ್ಪುಸಗಳ ಗಂಭೀರ ಮತ್ತು ಬಹಳ ಕಾಲದಿಂದ ಕಾಡುವ ಅನೇಕ ವ್ಯಾಧಿಗಳಲ್ಲಿ “ಚಿತ್ರಕದ ಬೇರಿ”ನಲ್ಲಿರುವ ತೀಕ್ಷ್ಣ ರಾಸಾಯನಿಕಗಳು ಎಷ್ಟೇ ಹಳೆಯದಾದರೂ ಸಮೂಲವಾಗಿ ರೋಗವನ್ನು ತಗೆದುಹಾಕುತ್ತವೆ.

“ಅಗ್ನಿ” ಎಂದು ಕರೆಸಿಕೊಳ್ಳುವ “ಚಿತ್ರಕ”ವು ಜೀವಕೋಶಗಳ ಹೊರಗೆ ಮತ್ತು ಒಳಗೆ ಅಂಟಿಕೊಂಡು ಬಹಳ ಕಾಲದಿಂದ ಇರಬಹುದಾದ ರೋಗಕಾರಕ ಅಂಶವನ್ನು ಅಲ್ಲಿಂದ ಸ್ಥಾನಚ್ಯುತಿಗೊಳಿಸಿ ಅದರ ಜೀವರಾಸಾಯನಿಕ ಸರಪಳಿಯನ್ನು ತುಂಡರಿಸಿ ಅದರ ಅಸ್ಥಿತ್ವವು ಇಲ್ಲದಂತೆ ಕರಗಿಸುತ್ತದೆ.

ವಿಶೇಷವಾಗಿ, ಅಂಟು ಅಂಟಾದ ಕಫವನ್ನು ಪುಪ್ಪುಸ ಮತ್ತು ಉಸಿರ್ನಾಳಗಳಿಂದ ಬೇರ್ಪಡಿಸಿ ಒಡೆದು ಕರಗಿಸುವ ಅನೇಕ ಸಿದ್ಧಯೋಗಗಳನ್ನು ಆಯುರ್ವೇದ ಆಚಾರ್ಯರು ಔಷಧಗಳ ರೂಪದಲ್ಲಿ ಹೇಳಿದ್ದಾರೆ.

ವೈರಾಣು ಸೋಂಕಿತ ಪುಪ್ಪುಸವು ಅನಗತ್ಯ ಕಫದಿಂದ ವಿಮುಕ್ತವಾದರೆ ಸೋಂಕು ವರ್ಧಿಸಲು ಮತ್ತು ಪುಪ್ಪುಸವನ್ನು ತನ್ನ ಅಧೀನಕ್ಕೆ ತಗೆದುಕೊಳ್ಳುವುದು ಅಸಾಧ್ಯದ ಮಾತು. ಕಫವನ್ನೇ (ಅಂಟಾದ ಕಫ, ಬಾಯಿಯ ಜೊಲ್ಲು, ಉಗುಳು, ಮೂಗಿನಿಂದ ಸೋರುವ ಸಿಂಘಾಣ….) ಇಲ್ಲವಾಗಿಸಿದರೆ ಸೋಂಕು, ಪುಪ್ಪುಸಗಳನ್ನು ತನ್ನ ಆವಾಸ ಸ್ಥಾನವಾನ್ನಾಗಿಸಿಕೊಳ್ಳುವುದು ಬಹುದೂರದ ಮಾತು.

ಇದೇ ಉದ್ಧೇಶದಿಂದ ಆಚಾರ್ಯರು “ಚಿತ್ರಕಾದಿ ವಟಿ, ಚಿತ್ರಕ ಹರೀತಕಿ, ಚಿತ್ರಕಾಸವ” ಮುಂತಾದ ಯೋಗಗಳನ್ನು ಹೇಳಿದ್ದಾರೆ.

ಕೇವಲ ವಾಸನೆಯೊಂದರಿಂದಲೇ ಕಷ್ಟದ ಹೆರಿಗೆಯನ್ನು ಸುಲಭವಾಗಿಸುವ ಅಂದರೆ, ಗರ್ಭಸ್ಥ ಶಿಶುವನ್ನು ಕೆಲನಿಮಿಷಗಳಲ್ಲಿ ಸುಖಪ್ರಸವದಿಂದ ಹೊರತಗೆಯುವ ಸಾಮರ್ಥ್ಯದ “ಚಿತ್ರಕ”ಕ್ಕೆ ಅಂಟಿಕೊಳ್ಳುವ ಕಫವನ್ನು ನಿವಾರಿಸುವುದು ಕಷ್ಟಕರವೇನಲ್ಲ.

ಇದರ ಬೇರಿನ ಔಷಧಿ ಗುಣ ಎಷ್ಟು ಮಹತ್ವದ್ದೋ, ಅಷ್ಟೇ ಆಳ ಮತ್ತು ಗಂಭೀರ ಪರಿಣಾಮ ಬೀರುವಂಥದ್ದು.
ಉದಾಹರಣೆಗೆ: ಈ ಬೇರಿನ ತುಣುಕೊಂದನ್ನು ಒಂದೆರಡು ತಾಸುಗಳವರೆಗೆ ಕೈಯಲ್ಲಿ ಹಿಡಿದುಕೊಂಡರೂ ಸಾಕು ಅದು ಚರ್ಮವನ್ನು ಸುಟ್ಟುಬಿಡುತ್ತದೆ. ಹಾಗಾಗಿ, ವೈದ್ಯರ ಸಲಹೆಯಿಲ್ಲದೆ ಸ್ವಪ್ರಯೋಗಕ್ಕೆ ಯಾರೂ ಇಳಿಯಬಾರದು.

ಅಥರ್ವ ಸಂಸ್ಥೆಯು ತಯಾರಿಸಿದ 36 ಔಷಧಿ ಗಿಡಮೂಲಿಕೆಗಳ ಕಷಾಯ ಚೂರ್ಣವು ಕೊಡುತ್ತಿರುವ ಅದ್ಭುತ ಯಶಸ್ಸಿನಲ್ಲಿ, ಇದರಲ್ಲಿರುವ ಸೂಕ್ತಪ್ರಮಾಣದ “ಚಿತ್ರಕ ಮೂಲ” ವು ನಿರ್ಣಾಯಕ ಪಾತ್ರವನ್ನು ವಹಿಸಿದ್ದು, ನೂರಾರು ಜನರ ಸಂತೃಪ್ತ ಧನಾತ್ಮಕ ಅಭಿಪ್ರಾಯಗಳು “ಚಿತ್ರಕದ ಬೇರಿಗೆ” ಕ್ಕೆ ಸಲ್ಲುತ್ತದೆ.

“ಚಿತ್ರಕ”ದ ಸಂಶೋಧನಾತ್ಮಕ ವಿವರಣೆಗಳಿಗಾಗಿ ಈ ಕೆಳಗಿನ ಲಿಂಕ್ ನ್ನು ನೋಡಿ:

https://www.google.com/url?sa=t&source=web&rct=j&url=http://globalresearchonline.net/journalcontents/v30-2/20.pdf&ved=2ahUKEwiUuKOTxJ3rAhUFfH0KHXnCACgQFjADegQIARAB&usg=AOvVaw2rOr1w68k0bRq43O_NQ9v2

“ಚಿತ್ರಕ”ಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News By:Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!