ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-10

ಸರ್ವರೋಗ ನಿವಾರಕ ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-10

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-10

ನಮ್ಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿವರ್ಧಕ ಕಷಾಯದಲ್ಲಿನ 36 ಔಷಧಿ ದ್ರವ್ಯಗಳ ಮಾಹಿತಿಗಾಗಿ ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಸೂಚನೆ: ಈ 36 ದ್ರವ್ಯಗಳ ಸಂಯೋಜನೆಯ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾಣದಲ್ಲಿ ಯಾರೂ ಬಳಸಬೇಡಿ.

ಕಷಾಯದಲ್ಲಿನ ಘಟಕ ದ್ರವ್ಯ:

9)ಅಶ್ವಗಂಧ(Withania somnifera):
ಕೆಲವು ವರ್ಷಗಳ ಹಿಂದೆ H1N1 ಇನ್-ಫ್ಲೂ-ಎಂಜಾ ವೈರಾಣುವುನಿಂದ ಉಂಟಾದ ಶೀತ ಜ್ವರವು ಜಗತ್ತನ್ನು ಬಹುವಾಗಿ ಕಾಡಿದ್ದು ಎಲ್ಲರಿಗೂ ತಿಳಿದಿರುವುದೇ ಆಗಿದೆ.

ಅಶ್ವಗಂಧದಲ್ಲಿರುವ ರಾಸಾಯನಿಕವು H1N1 ಸೋಂಕನ್ನು ಸಮರ್ಥವಾಗಿ ನಿಭಾಯಿಸಿದ್ದನ್ನು ಸಹ ಜಗತ್ತು ತಿಳಿದಿದೆ.

ಪ್ರಸ್ತುತ ಜಗತ್ತಿನ ಮೇಲೆ ಎರಗಿರುವ ಕೊರೋನಾ ವೈರಾಣುವು ಸಹ ಉಸಿರಿಣಾಳವನ್ನೇ ಅವಲಂಭಿಸಿ ಮನುಷ್ಯನ ಜೀವದ ಮೇಲೆ ಆಟವಾಡುತ್ತಿದೆ.

ಮನುಷ್ಯನ ಶರೀರವನ್ನು ಪ್ರವೇಶಿಸಿದ ವೈರಾಣುವು ಜೀವಕೋಶದೊಳಗೆ ನುಗ್ಗಿ ತಾನು ವಿಭಜನೆಯಾಗಿ, ಸಾವಿರಾರು ಸಂಖ್ಯೆಯಲ್ಲಿ ವೃದ್ದಿಯಾಗಿ ಆಶ್ರಯ ಪಡೆದ ಜೀವಕೋಶವನ್ನು ಒಡೆದು ಹೊರಬರಬೇಕಾಗುತ್ತದೆ.

ಈ ಆಶ್ರಯೀ ಜೀವಕೋಶದ ಪೊರೆಯನ್ನು ಒಡೆಯಲು ಬೇಕಾಗುವ ರಾಸಾಯನಿಕವೇ Neuraminidase. ಇದು ವೈರಾಣುಗಳಿಂದ ತುಂಬಿದ ನಮ್ಮ ಜೀವಕೋಶಗಳ ಪೊರೆಯನ್ನು Sialic acid ನ ಸಹಾಯದಿಂದ ತೆಳುವಾಗಿಸಿ, ತುಂಡುತುಂಡಾಗಿಸಿ ಒಡೆದು ಹಾಕಿ ಅಸಂಖ್ಯ ವೈರಾಣುಗಳನ್ನು ಹೊರಕ್ಕೆ ಬಿಡುತ್ತದೆ.

ಹೊರಬಂದ ವೈರಾಣುಗಳು ಮತ್ತೆ ಹೊಸಜೀವಕೋಶಗಳ ಆಶ್ರಯ ಪಡೆದು ತಮ್ಮ ಸಂತತಿಯನ್ನು ಸಾವಿರದಿಂದ ಲಕ್ಷದವರೆಗೆ ವೃದ್ಧಿಗೊಳಿಸುತ್ತಾ ಸಾಗುತ್ತವೆ. ಇಲ್ಲಿ Neuraminidase ನ ಸಾಮರ್ಥ್ಯವನ್ನು ಇಲ್ಲದಂತೆ ಮಾಡುವಲ್ಲಿ ಅಶ್ವಗಂಧದಲ್ಲಿರುವ Withaferin ಎಂಬ ರಾಸಾಯನಿಕವು ಸಮರ್ಥವಾಗಿದೆ.

ಈ Withaferin ನಮ್ಮ ಜೀವಕೋಶಗಳ ಪೊರೆಯು ಸುಲಭವಾಗಿ ಪಡೆಯದಂತೆ ತಡೆಯುತ್ತದೆ. ಇದನ್ನು ಆಯುರ್ವೇದದಲ್ಲಿ “ರಸಾಯನ” ಎಂಬ ಶಬ್ಧದಿಂದ ಕರೆಯುತ್ತಾರೆ.

ಒಂದೊಮ್ಮೆ ಸೋಂಕು ಶರೀರವನ್ನು ಹೊಕ್ಕು, ಜೀವಕೋಶದೊಳಗೆ ಆಶ್ರಯ ಪಡೆದರೂ ಸಹ ಅದು ರಕ್ತಬೀಜಾಸುರನಂತೆ ನಮ್ಮ ಶರೀರವನ್ನು ವ್ಯಾಪಿಸದಂತೆ ತಡೆಯುವುದೇ ಅಶ್ವಗಂಧದ ಬಹು ದೊಡ್ಡ ಸಾಮರ್ಥ್ಯ.

ಹೆಚ್ಚಿನ ಮಾಹಿತಿಗಾಗಿ ಮತ್ತು ಈ ಸಂಶೋಧನೆಯ ಖಾಚಿತ್ಯತೆಗಾಗಿ ಲಿಂಕ್ ನೋಡಿ-

https://pubmed.ncbi.nlm.nih.gov/25627548/

ಕಷಾಯ ಚೂರ್ಣ ಬಳಸಲು ಇಚ್ಛಿಸುವವರು ಸಂಪರ್ಕಿಸಿ:
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute Ayurveda Research
Shimoga | Davanagere | Bengaluru | Kangra(H.P)

News By:Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!