ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-5

ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-5

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-5

ನಮ್ಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿವರ್ಧಕ ಕಷಾಯದಲ್ಲಿನ 36 ಔಷಧಿ ದ್ರವ್ಯಗಳ ಮಾಹಿತಿಗಾಗಿ ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾದಲ್ಲಿ ಯಾರೂ ಬಳಸಬೇಡಿ.

ಕಷಾಯದಲ್ಲಿನ ಘಟಕ ದ್ರವ್ಯ:
5)ತ್ವಕ್(cinnamomum verum):
ದಾಲ್ಚಿನ್ನಿ ಮರದ ತೊಗಟೆಯನ್ನೇ ತ್ವಕ್ ಎಂದು ಕರೆಯುತ್ತಾರೆ.

ಭಾರತೀಯರ ಆಹಾರ ಪದ್ಧತಿಯಲ್ಲಿ “ತ್ವಕ್” ಒಂದು ಪ್ರಮುಖ ಸಾಂಬಾರ್ ಪದಾರ್ಥವಾಗಿರುವುದನ್ನು ನೋಡಿದರೆ ಬಹು ಕಾಲದಿಂದಲೂ ಈ ದೇಶದ ಸಾಮಾನ್ಯ ಪ್ರಜೆಗಳಿಗೂ ಆರೋಗ್ಯದ ಜ್ಞಾನ ಆಳವಾಗಿರುವುದನ್ನು ತೋರಿಸುತ್ತಿದೆ.

ನಿತ್ಯ ಆಹಾರದಲ್ಲಿ ಮಿತವಾಗಿ ಬಳಸುವ ತ್ವಕ್ ಒಂದು ಪರಿಣಾಮಕಾರಿ ಉಸಿರಿನಾಳದ ರೋಗನಿವಾರಕ ದ್ರವ್ಯವಾಗಿದೆ.

ಇದು ಕಟು+ಮಧುರ(ಖಾರ ಮತ್ತು ಸಿಹಿ) ಎರಡೂ ರಸಗಳನ್ನು ಹೊಂದಿದ್ದು ತನ್ನ ವಿಶೇಷ ಪ್ರಭಾವದಿಂದ ವಾತ ಮತ್ತು ಕಫಸ್ಥಾನಗಳನ್ನು ಒಟ್ಟೊಟ್ಟಿಗೆ ಆರೋಗ್ಯದಿಂದ ಇಡುತ್ತದೆ.

ಆಹಾರದ ಜೊತೆ ಜೊತೆಗೆ ಸಾಗುವ “ತ್ವಕ್”ನಲ್ಲಿರುವ ಔಷಧೀಯ ಗುಣಗಳು ಎಂಜೈಮ್ ಗಳನ್ನು ಜೀವಕೋಶಗಳ ಹಂತದವರೆಗೂ ಸುಸ್ಥಿತಿಯಲ್ಲಿಡುವ ಕಾರಣ ಅನಗತ್ಯ ಅಂಶಗಳನ್ನು ತುಂಡರಿಸಿ ಅವು ಜೀವಕೋಶಗಳನ್ನು ತಲುಪದಂತೆ ಮಾಡುತ್ತದೆ.

ಸಧ್ಯದ ವೈರಾಣು ಸೋಂಕಿನ ಪರಿಸ್ಥಿತಿಯಲ್ಲಿ ದೊಡ್ಡ ಕರುಳಿನ ಶ್ಲೇಷ್ಮ ಪೊರೆ(mucosal membrane of large intestine)ಯ ಆರೋಗ್ಯವನ್ನು ಕಾಪಾಡಿಕೊಳ್ಳವುದು ಮುಖ್ಯವಾಗಿದೆ.

ಪುಪ್ಪುಸದ ಸೋಂಕನ್ನು ತಡೆಯಲು, ನಿಯಂತ್ರಿಸಲು, ಹೆಚ್ಚಿಸಲು ಅಥವಾ ತೀವ್ರಗೊಳಿಸಲು ದೊಡ್ಡ ಕರುಳಿನ ಜೀವಪೊರೆಯ ಪಾತ್ರ ಮುಖ್ಯವಾದದ್ದು, ಸೋಂಕು ಬರುವ ಮೊದಲು, ಬಂದ ನಂತರವೂ ನಮ್ಮನ್ನು ರಕ್ಷಿಸುವುದು ದೊಡ್ಡ ಕರುಳಿನ ಈ ಮೃದುವಾದ ಜೀವಪೊರೆ.

A) “ತ್ವಕ್” ದೊಡ್ಡ ಕರುಳಿನ ಈ ಪೊರೆಯನ್ನು ಸಮೃದ್ಧವಾಗಿಸುವುದಲ್ಲದೇ, ಮಾನವನ ರೋಗ ನಿರೋಧಕ ಶಕ್ತಿಗೆ ಮತ್ತು ರಕ್ತದ ಸಾಮರ್ಥ್ಯಕ್ಕೆ ಬಲವನ್ನು ಕೊಡುವ ಅನೇಕ ಸಹಾಯಕ ಬ್ಯಾಕ್ಟೀರಿಯಾಗಳ ಬಹುದೊಡ್ಡ ಗುಂಪನ್ನು ಸಮೃದ್ಧವಾಗಿ ಪೋಷಿಸುತ್ತದೆ. ಈ ಮೂಲಕ ಪುಪ್ಪುಸದ ಸಾಮರ್ಥ್ಯ ಹಾಳಾಗದಂತೆ ಮತ್ತು ವೈರಾಣುವಿಗೆ ಸುಲಭವಾಗಿ ತುತ್ತಾಗದಂತೆ ರಕ್ಷಿಸುತ್ತದೆ.

B) ಇದರ ಸೇವನೆಯು ಎಂಜೈಮ್ ಗಳನ್ನು ಸಮೃದ್ಧವಾಗಿಡುವ ಕಾರಣ ಶರೀರದಲ್ಲಿ, ವಿಶೇಷವಾಗಿ ಪುಪ್ಪುಸದಲ್ಲಿ ಅನಗತ್ಯ ಕಫ ಶೇಖರಣೆಯಾಗುವುದನ್ನು ತಡೆದುಬಿಡುತ್ತದೆ. ಈ ಕಫವೇ ಸೋಂಕಿಗೆ ಆಹಾರವಾಗಿದ್ದು, ವೈರಾಣುವಿಗೆ ಆಹಾರ ಸಿಗದಂತೆ ಮಾಡಿಬಿಡುವುದರಿಂದ ಅದರ ದ್ವಿಗುಣತೆ ನಿಲ್ಲುತ್ತದೆ.

C) ಆವಿಯಾಗುವ ತೀಕ್ಷ್ಣತೈಲವನ್ನು ಹೊಂದಿರುವ “ತ್ವಕ್” ದ್ರವ್ಯವು ವೈರಾಣು ಅಥವಾ ಬ್ಯಾಕ್ಟೀರಿಯಾದ ಪೊರೆಯನ್ನು ತೀಕ್ಷ್ಣವಾಗಿ ಛೇಧಿಸುತ್ತದೆ. ಹೀಗೆ ಪೊರೆಯನ್ನು ಕಳೆದುಕೊಂಡ ಯಾವ ಜೀವಿಯೂ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು.

ಹೀಗೆ, ಮೂರು ವಿಧದಿಂದಲೂ ಸಂರಕ್ಷಿಸುವ ಗುಣವನ್ನು ಹೊಂದಿರುವ “ತ್ವಕ್” ಅನ್ನು ಭಾರತೀಯರು ಯಥೇಚ್ಛವಾಗಿ ಬಳಸುವ ಕಾರಣ ಈ ದೇಶದಲ್ಲಿ ಕೊರೋನಾ ರೋಗದಿಂದಾಗುತ್ತಿರುವ ಹಾನಿಯು ಕನಿಷ್ಠಮಟ್ಟದಲ್ಲಿದೆ.

“ತ್ವಕ್” ಬಳಸಿ ತಯಾರಿಸುವ ಆಯುರ್ವೇದ ಔಷಧಿಗಳು
1)ಸಿತೋಫಲಾದಿ ಚೂರ್ಣ
2)ತಾಲೀಸಾದಿ ಚೂರ್ಣ

ಈ ಎರಡೂ ಔಷಧಿ ದ್ರವ್ಯಗಳನ್ನು ಬಳಸಿ ಸಣ್ಣ ನೆಗಡಿಯಿಂದ ಹಿಡಿದು ಟಿ.ಬಿ ಯಂತಹ ಗಂಭೀರ ವ್ಯಾಧಿಗಳನ್ನೂ ಸಹ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ 20 ವರ್ಷಗಳಿಂದಲೂ ಯಶಸ್ವಿಯಾಗಿ ಚಿಕಿತ್ಸಿಸುತ್ತಿದ್ದೇವೆ.

ಈ ಸಂಶೋಧನೆಯ ಖಾಚಿತ್ಯತೆಗಾಗಿ ಲಿಂಕ್ ನೋಡಿ-

https://www.rjpbcs.com/pdf/2012_3(1)/80.pdf

ಆಸಕ್ತರು ವಾಟ್ಸ್ ಅಪ್ ನಲ್ಲಿ ಸಂದೇಶಗಳನ್ನು ಕಳಿಸಬಹುದು
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

news By: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!