ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-4

ಅಮೃತ ಸಮಾನ ಆಯುರ್ವೇದ ಕಷಾಯ ಭಾಗ-4

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ
ಅಮೃತ ಸಮಾನ ಆಯುರ್ವೇದ ಕಷಾಯ
ಭಾಗ-4

ಶಿವಮೊಗ್ಗದ ಅಥರ್ವ ಆಯುರ್ಧಾಮ ಸಂಸ್ಥೆ ಸಿದ್ಧಪಡಿಸಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಿದ್ಧ ಗಿಡಮೂಲಿಕೆಗಳಿಂದ ತಯಾರಿಸಿದ 36 ಔಷಧಿ ದ್ರವ್ಯಗಳ ಮತ್ತು ಕಷಾಯ ಚೂರ್ಣದ ಮಾಹಿತಿಯನ್ನು ಪಡೆಯಲು ಈ ಲಿಂಕನ್ನು ಒತ್ತಿ.

https://hospitalfreelife.blogspot.com/2020/07/atharva-ayurveda-research-instituteis.html

ಸೂಚನೆ:
ಈ 36 ದ್ರವ್ಯಗಳ ಸಂಯೋಜನೆಯ ವಿಜ್ಞಾನದಲ್ಲಿ ಅಡಗಿದ ಸೂಕ್ತ ಪ್ರಮಾಣ ಮತ್ತು ಅವುಗಳ ಪರಿಣಾಮಗಳನ್ನು ಮನಗಾಣದೇ ದಯಮಾಡಿ ಸಿಕ್ಕ ಸಿಕ್ಕ ಪ್ರಮಾದಲ್ಲಿ ಯಾರೂ ಬಳಸಬೇಡಿ.

ಕಷಾಯದಲ್ಲಿನ ಘಟಕ ದ್ರವ್ಯ:
4) ಗುಡೂಚಿ/ಅಮೃತಬಳ್ಳಿ (tinospora cardifolia):
ಅತ್ಯಂತ ಪ್ರಭಾವಿ ದ್ರವ್ಯವಾದ “ಅಮೃತ ಬಳ್ಳಿ”ಯು ತನ್ನ ಪರ್ಯಾಯ ನಾಮದಲ್ಲೇ ತನ್ನೆಲ್ಲಾ ಗುಣಗಳನ್ನು ಹೇಳಿಕೊಳ್ಳುತ್ತದೆ.

ಅಮೃತ ಬಳ್ಳಿಯ ಪರ್ಯಾಯ ನಾಮಗಳು:
ಜ್ವರ ನಾಶಿನಿ
ಜ್ವರಾರಿ
ತಂತ್ರಿಕ
ದೇವನಿರ್ಮಿತ
ಕುಮಾರಿಕ
ಭೀಷಕ್ ಪ್ರಿಯ(ವೈದ್ಯಪ್ರಿಯ)
ವಯಸ್ಥಾ
ವರಾ
ವಿಶಾಲ್ಯಾ
ಶ್ಯಾಮ
ಸುರಕೃತ
ಸೋಮ
ಅಮೃತ
ಕುಂಡಲಿ
ಗರುಡ
ಚಕ್ರಾಗ್ನಿ
ಚಂದ್ರಹಾಸ

ಇವು ಕೇವಲ ಅಮೃತಬಳ್ಳಿಯ ರೂಢಿ
ನಾಮಗಳಾಗಿರದೇ ಅದರ ಕಾರ್ಮುಕತೆಯನ್ನು ಹೇಳುತ್ತವೆ.

ಅತ್ಯಂತ ಹೆಚ್ಚು ಮತ್ತು ಆಳವಾದ ಸಂಶೋಧನೆ ಮತ್ತು ಕ್ಲಿನಿಕಲ್ ಟ್ರಯಲ್ ಗಳನ್ನು ಹೊಂದಿರುವ ಅಮೃತ ಬಳ್ಳಿಯ ಎರಡು ಪ್ರಧಾನ ಕರ್ಮಗಳನ್ನು ಮಾತ್ರ ಇಲ್ಲಿ ಅಂದರೆ, ವೈರಾಣು ಸೋಂಕಿನ ಈ ಸಂದರ್ಭದಲ್ಲಿ ವ್ಯಕ್ತ ಪಡಿಸುತ್ತೇವೆ.

ಅವುಗಳೆಂದರೆ, “ಜ್ವರನಾಶಕ ಗುಣ”
ಮತ್ತು
ಸರ್ವಧಾತು ರಕ್ಷಕ ಮತ್ತು ಪೋಷಕ ಸಾಮರ್ಥ್ಯವಾದ “ರಸಾಯನ ಗುಣ.”

ಅಮೃತ ಬಳ್ಳಿಯು ಗುರು-ಸ್ನಿಗ್ಧ ಗುಣವನ್ನು ಹೊಂದಿದ್ದು ತೀವ್ರ ಶಕ್ತಿಯನ್ನು ತನ್ನೊಳಗಿಟ್ಟುಕೊಂಡಿದ್ದರೂ ಪಚನವಾಗುವಾಗ ವಿಶೇಷವಾಗಿ “ಮಧುರ ಅಥವಾ ಸಿಹಿ ಭಾವವನ್ನು ತಾಳುತ್ತದೆ. ಇದೇ ಈ ದ್ರವ್ಯದ ವಿಶೇಷ. ಈ ಕಾರಣದಿಂದ ಇದು ಜ್ವರನಾಶಕವೂ ಹೌದು ಅದರೊಟ್ಟಿಗೆ ಸರ್ವಧಾತು ಪೋಷಕವೂ ಹೌದು.
ಇದಲ್ಲದೆ, ಅಜೀರ್ಣವನ್ನು, IBS ಅನ್ನು, ಆಮ್ಲಪಿತ್ತವನ್ನು, ಯಕೃತ್ ವಿಕಾರವನ್ನು ಹೋಗಲಾಡಿಸುತ್ತದೆ ಮತ್ತು ಮೆದುಳಿನ ನರಗಳಿಗೆ ಬಲವನ್ನು ಕೊಡುವ ಕಾರಣ ಮೇಧ್ಯ(ಬುದ್ಧಿಶಕ್ತಿ ವರ್ಧಕ)ವಾಗಿದೆ.

ಇರಲಿ,
ಪ್ರಸ್ತುತ ಜ್ವರ ನಿವಾರಕವಾಗಿ ಅಮೃತಬಳ್ಳಿಯು ಹೇಗೆ ಕೆಲಸ ಮಾಡುತ್ತದೆ ನೋಡೋಣ.

“ಜ್ವರ ಎಂಬುದು ಕೇವಲ ಶರೀರದ ತಪಾನದ ವೃದ್ಧಿಯಲ್ಲ.” ಅದು ಸರ್ವ ಶರೀರವನ್ನು ಸಂಚಾರ ಮಾಡುವ ರಸಧಾತುವಿನಲ್ಲಿ ಉಂಟಾಗುವ ತೀವ್ರತರ ಕ್ಷೋಭೆಯ ಲಕ್ಷಣ. ಆದ್ದರಿಂದಲೇ ಜ್ವರದಲ್ಲಿ ಸಂತಾಪ(temerature), ಅರತಿ(ಇಚ್ಛೆ ಇಲ್ಲದಿರುವಿಕೆ) ಮತ್ತು ಗ್ಲಾನಿ(ತೀರ್ವ ದುರ್ಬಲತೆ) ಈ ಮೂರೂ ಲಕ್ಷಣಗಳು ಇರುತ್ತವೆ ಎಂಬುದು ಆಚಾರ್ಯರ ಮತ. ಕೇವಲ ದೇಹದ ತಾಪಮಾನ ವೃದ್ಧಿಗೊಂಡಲ್ಲಿ ಅದು ಜ್ವರವಲ್ಲ.

ಅಮೃತ ಬಳ್ಳಿಯಲ್ಲಿರುವ ಕಹಿ ರಸವು ರಸಧಾತುವಿನಲ್ಲಿರುವ ಉಷ್ಣಕಾರಕ ಅಂಶವನ್ನು ತುಂಡರಿಸುತ್ತದೆ ಮತ್ತು ಮಧುರ ವಿಪಾಕವು ಬಲವನ್ನು ಕೊಡುತ್ತದೆ. ಹೀಗಾಗಿ, ಗುಡೂಚಿಯು ಜ್ವರದ ಮೂರೂ ಲಕ್ಷಣಗಳನ್ನು ಕೇವಲ 24 ರಿಂದ 48 ನಿಮಿಷಗಳಲ್ಲಿ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.


ಸ್ಪಷ್ಟ ಕಾರಣಗಳು ಗೊತ್ತಾಗದ ಯಾವುದೇ ಜ್ವರದಲ್ಲಿ ಅಮೃತಬಳ್ಳಿಯನ್ನು ಸತ್ವದ ರೂಪದಲ್ಲಿ ಕೊಡಲಾಗುತ್ತದೆ.

ಸರ್ವ ಧಾತು ಪೋಷಕ “ರಸಾಯನ” ಗುಣವನ್ನು ನೋಡೋಣ-
ಅಮೃತ ಬಳ್ಳಿಯು ರಸ, ರಕ್ತಾದಿ ಸಪ್ತ ಧಾತುಗಳ ಉತ್ಪತ್ತಿಯ ಮಾರ್ಗದಲ್ಲಿ ಇರಬಹುದಾದ ಸಣ್ಣ ಸಣ್ಣ ತಡೆಗಳನ್ನು ಸಂಪೂರ್ಣವಾಗಿ ಮತ್ತು ಸಮರ್ಥವಾಗಿ ತೊಡೆದು ಹಾಕುತ್ತದೆ.

ಇದರಿಂದ ಶರೀರದ ಸರ್ವ ಜೀವಕೋಶಗಳೂ ತಮ್ಮ ತಮ್ಮ ಆಹಾರವನ್ನು ತಡೆ ಇಲ್ಲದೆ ಸಮರ್ಥವಾಗಿ ಹೀರಿಕೊಳ್ಳುತ್ತವೆ.
ಮಾನವನ ಇಂದಿನ ಬಹುದೊಡ್ಡ ಆರೋಗ್ಯದ ಸಮಸ್ಯೆಯೇ ಇದು!! ಉತ್ತಮೋತ್ತಮ ಆಹಾರವನ್ನು ಸೇವಿಸಿಯೂ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವುದಕ್ಕೆ ಮತ್ತು ಆ ಕಾರಣದಿಂದ ಸಣ್ಣ ಸಣ್ಣ ವೈರಸ್ ಗಳ ಸೋಂಕಿಗೆ ತುತ್ತಾಗುವ ಸಾಧ್ಯತೆಯನ್ನು ಹೊಂದಿರುವುದಕ್ಕೆ ಜೀವಕೋಶಗಳ ಈ ಅಸಾಮರ್ಥ್ಯವೇ (ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಇರುವ ದುರ್ಬಲತೆ) ಕಾರಣ.

ಹೀಗೆ ಗುಡೂಚಿಗೆ ಇರುವ “ಅಮೃತ” ಎಂಬ ಹೆಸರು ಅನ್ವರ್ಥವಾಗಿದೆ.

ಇದರ ಇನ್ನೂ ಅನೇಕಾನೇಕ ಮಹತ್ವಗಳನ್ನು ಹೇಳಲು ಪದಗಳ ಮಿತಿ ನಮ್ಮನ್ನಿಲ್ಲಿ ಕಟ್ಟಿಹಾಕುತ್ತಿದೆ.

https://www.ijcmas.com/7-1-2018/R.%20Pruthvish%20and%20S.M.Gopinatha.pdf

ಆಸಕ್ತರು ವಾಟ್ಸ್ ಅಪ್ ನಲ್ಲಿ ಸಂದೇಶಗಳನ್ನು ಕಳಿಸಬಹುದು
9148702645
9606616165
8105451356

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

News by: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!