ಶಿಕಾರಿಪುರ‌: ಮುಖ್ಯಮಂತ್ರಿ ನಿವಾಸದ ಬೀದಿಯ ವ್ಯಕ್ತಿಯೊಬ್ಬರಿಗೆ ಕರೋನ ಪಾಸಿಟಿವ್ ಸಿಎಂ ಗೃಹ ಕಛೇರಿ ಬಂದ್…!

ಶಿಕಾರಿಪುರ‌: ಮುಖ್ಯಮಂತ್ರಿ ನಿವಾಸದ ಬೀದಿಯ ವ್ಯಕ್ತಿಯೊಬ್ಬರಿಗೆ ಕರೋನ ಪಾಸಿಟಿವ್  ಸಿಎಂ ಗೃಹ ಕಛೇರಿ ಬಂದ್…!

ಶಿಕಾರಿಪುರ ಪಟ್ಟಣದ ಮಾಳೇರಕೇರಿ ಬೀದಿಯಲ್ಲಿರುವ ಮುಖ್ಯಮಂತ್ರಿಗಳ ಗೃಹ ಸಂಪರ್ಕ ಕಚೇರಿಯ 100 ಮೀಟರ್ ದೂರದಲ್ಲಿರುವ ಮನೆಯೊಂದರಲ್ಲಿ ರಾಜಸ್ಥಾನದಿಂದ ಆಗಮಿಸಿದ‌‌ ವ್ಯಕ್ತಿಯೊಬ್ಬರಿಗೆ ಇಂದು ಕರೋನಾ ಪಾಸಿಟಿವ್ ಬಂದಿದೆ.

ಈ ಹಿನ್ನಲೆಯಲ್ಲಿ ಈ ರಸ್ತೆಯನ್ನು ನಿಯಮದ ಪ್ರಕಾರ 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗುತ್ತದೆ

ಈ ಕಾರಣಕ್ಕಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿರುವ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಸಂಪೂರ್ಣವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ಮಾಡಲಾಗಿದೆ‌ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಅವರು ತಿಳಿಸಿದ್ದಾರೆ.

ತುರ್ತು ಕೆಲಸವಿದ್ದರೆ ದೂರವಾಣಿಯಲ್ಲಿ ಮಾತ್ರ ಸಂಪರ್ಕಿಸಲು ಅವಕಾಶವಿದೆ. ದಯಮಾಡಿ ಸಾರ್ವಜನಿಕರು, ಕಾರ್ಯಕರ್ತರು ಸಹಕರಿಸಲು ಶಿಕಾರಿ ನ್ಯೂಸ್ ಮೂಲಕ‌ ತಿಳಿಸಿದ್ದಾರೆ.

News by: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!