ಮೊಳಕೆ ಕಾಳು ಆರೋಗ್ಯಕರವೋ?

ಮೊಳಕೆ ಕಾಳು ಆರೋಗ್ಯಕರವೋ?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ತಿಲಪಿಣ್ಯಾಕ ವಿಕೃತಿ……..ದೃಘ್ನ ದೋಷಲಂ ಗ್ಲಪನಂ ಗುರು |
ಅಷ್ಟಾಂಗ ಹೃದಯ ಸೂತ್ರ ಸ್ಥಾನ ಅಧ್ಯಾಯ-6/32-33, ಅನ್ನಸ್ವರೂಪ ವಿಜ್ಞಾನೀಯ ಅಧ್ಯಾಯ.

ದೃಷ್ಠಿಗೆ ಹಾನಿಮಾಡತಕ್ಕ, ಸರ್ವದೋಷ ಪ್ರಕೋಪ ಮಾಡುವಂತಹ, ಅಂಗಗಳ ಶಕ್ತಿಹ್ರಾಸ ಮಾಡತಕ್ಕ ಕೆಲವು ಆಹಾರಗಳನ್ನು ಹೇಳುತ್ತಾರೆ. ಇವು ಸೇವನೆಗೆ ಯೋಗ್ಯವಲ್ಲ.

• ಎಳ್ಳಿನ ಹಿಂಡಿಯಿಂದ ತಯಾರಾದ ಭಕ್ಷ್ಯಗಳು.

• ಒಣಗಿದ ತರಕಾರಿಗಳೂ, ಎಣ್ಣೆ, ತುಪ್ಪದಲ್ಲಿ ಹುರಿಯದೇ ತಿನ್ನುವ ಸೊಪ್ಪು ಪಲ್ಯಗಳು

• ಮೊಳಕೆ ಬರಿಸಿದ ಧಾನ್ಯಗಳು.
ಮತ್ತು

• ಹೆಸರು, ಉದ್ದುಗಳಿಂದ ಮಾಡಿದ ವಡೆಗಳು(ಉದ್ದು, ಹಲಸಂದಿ ವಡೆಗಳು)

ಇವೆಲ್ಲವೂ ಕೇವಲ ಪಚನಕ್ಕೆ ಭಾರ ಅಷ್ಟೇ ಅಲ್ಲ, ಇವು ಒಂದೊಮ್ಮೆ ಕರುಳಿನಲ್ಲಿ ಜೀರ್ಣವಾದಂತೆ ಕಂಡರೂ ರಕ್ತದಲ್ಲಿ ಪಚನವಾಗದೇ ರಕ್ತದುಷ್ಠಿಯನ್ನುಂಟುಮಾಡುತ್ತವೆ.

ಮೊಳಕೆ ಕಾಳು ಆರೋಗ್ಯಕರವೋ?

ಆಯುರ್ವೇದವು ದೋಷಕಾರಕ ಗುಂಪಿನ ಕೆಲವೇ ದ್ರವ್ಯಗಳಲ್ಲಿ ಮೊಳಕೆ ಬಂದ ಕಾಳುಗಳನ್ನು ಸೇರಿಸಿದೆ.

ಮೊಳಕೆ ಕಾಳಿನಲ್ಲಿರುವ ರಾಸಾಯನಿಕಗಳ ಆಧಾರದಲ್ಲಿ ವಿಜ್ಞಾನ ಅದನ್ನು ಅತ್ಯುತ್ತಮ ಎಂದಿದೆ!! ಆಶ್ಚರ್ಯ, ಮಣ್ಣಿನಲ್ಲೂ ಪೋಷಕಾಂಶಗಳು ಹೇರಳವಾಗಿವೆ!! ತಿನ್ನಲು ಸಾಧ್ಯವೇ?

ಆಹಾರ ಎಂದರೆ ನಮ್ಮ ಜೀರ್ಣಶಕ್ತಿ ಅದನ್ನು ಗುರುತಿಸಿ ಜೀರ್ಣಿಸಬೇಕೇ ಹೊರತು ಕೇವಲ ರಾಸಾಯನಿಕಗಳು ಆಧಾರದಲ್ಲಿ ಅಲ್ಲ.

ಮೊಳಕೆ ಕಾಳು, ಒಂದು ಹೊಸ ಜೀವಿ ಹೊರಬರುವ ಕ್ರಿಯೆ, ಅದರ ತಾಯಿ ಅದನ್ನು ಹೇಗೆ ರಕ್ಷಿಸಿರುತ್ತದೆ ಎಂದರೆ, ತನ್ನ ಸಂತತಿಗೆ ಬೆಳವಣಿಗೆ ಸಂದರ್ಭದಲ್ಲಿ ಯಾವ ಕ್ರಿಮಿಗಳಿಂದ ನಾಶವಾಗದಿರಲೆಂದು, ವಿಷಪೂರಿತ ಅಂಶವನ್ನು ಕಾಳಿನ ಸಿಪ್ಪೆ ಮತ್ತು ಮೊಳಕೆಯ ಹೊರಪೊರೆಯಲ್ಲೂ ಇಟ್ಟಿರುತ್ತದೆ. ಅದು ಸೇವನೆಗೆ ಯೋಗ್ಯವಲ್ಲ, ವಿಷಸಮಾನ(poisonous protein chain
ತಿಂದರೆ ಕರುಳುಗಳ ಎಂಜೈಮ್ ಗಳಿಗೆ ಜೀರ್ಣಿಸಲು ಸಾಧ್ಯವಾಗದೇ, ದೊಡ್ಡ ಕರುಳಿನಲ್ಲಿ ಗ್ಯಾಸ್ ಉಂಟಾಗಿ ಮಲಿಕ್ಯೂಲ್ ಗಳ ಅಣುವಿಭಜನೆ ಆಗಬೇಕಾಗುತ್ತದೆ.

ಈ ಕ್ರಿಯೆ ನಿರಂತರ ಇದ್ದರೆ. ಅವಿಭಜಿತ ಮಾಲಿಕ್ಯೂಲ್ ಗಳು ರಸ ಮತ್ತು ರಕ್ತದ ಮೇಲೆ ದುಷ್ಪರಿಣಾಮ ಬೀರುತ್ತವೆ. ಅವು ಸಂಚಯವಾದರೆ ಆಮವಾತ, ವಾತರಕ್ತ ಎಂಬ ಸಂಧಿಗತ ವ್ಯಾಧಿಗಳು ಬರುತ್ತವೆ. ಆಮದೋಷ ಪ್ರಕೋಪಗೊಂಡರೆ, ಚರ್ಮದ ತೊಂದರೆಗಳೂ ಬರುತ್ತವೆ.

ರಕ್ತವು ಸರ್ವಾದಾ ಆಮ್ಲದಿಂದ ದೂರ ಇರುವ ದ್ರವ, ಇದಕ್ಕೆ ಆಮ್ಲಭಾವ ಬಂದ ತಕ್ಷಣ ಆಂತರಿಕೆ ವಾತಾವರಣವೇ ಬದಲಾಗುತ್ತದೆ, ಆಗ ಸರ್ವಶರೀರ ಸಂಚಾರಿ ಆಗಿರುವ ರಕ್ತ ಅನೇಕ ಅಂಗಗಳಿಗೆ ಸರಿಯಾದ ಆಹಾರ ಆಮ್ಲಜನಕ ಪೂರೈಸಲು ಸಾಧ್ಯವಾಗದೇ, ಗ್ಲಾನಿ ಅಂದರೆ ಅತ್ಯಂತ ದೌರ್ಬಲ್ಯ ಉಂಟುಮಾಡುತ್ತಿರುತ್ತದೆ.

ಆದರೆ ಆರಂಭದಲ್ಲೇ ಇದು ಕಂಡುಬರುವುದಿಲ್ಲ ಏಕೆಂದರೆ ಎಲ್ಲಾ ಧಾತುಗಳೂ ತಮ್ಮ ಪಚನಶಕ್ತಿ ಬಳಸಿ ರಕ್ಷಿಸಿಕೊಳ್ಳುತ್ತವೆ ಆದರೆ ಕಾಲಾಂತರದಲ್ಲಿ ಈ ಆಹಾರಗಳಿಂದ ಹಾನಿ ತಪ್ಪಿದ್ದಲ್ಲ.

ನೇತ್ರವು ಮಜ್ಜಾಧಾತುವಿನಿಂದ ಉಂಟಾದ ತೀಕ್ಷ್ಣ ಅವಯವ ಇದರಲ್ಲಿ ತೇಜಸ್ಸು ಪ್ರಖರವಾಗಿರುತ್ತದೆ, ಎಲ್ಲಾ ಇಂದ್ರಿಯಗಳು ತಮ್ಮ ಸಂಪರ್ಕಕ್ಕೆ ಬಂದ ಶಬ್ದಾದಿ ವಿಷಯಗಳನ್ನು ಗ್ರಹಿಸಿದರೆ ನೇತ್ರ ದೂರದ ವಸ್ತು ವಿಷಯಗಳನ್ನೂ ಗ್ರಹಿಸಬಲ್ಲದು, ಇದಕ್ಕೆ ಕಾರಣ ತೇಜಸ್ಸು. ಮೇಲಿನ ದ್ರವ್ಯಗಳು ತೇಜಸ್ಸನ್ನು ಹಾನಿಗೊಳಿಸುತ್ತವೆ. ನೇತ್ರ ಮಲಿನವಾಗುತ್ತದೆ. ದೃಷ್ಟಿ ಕ್ಷೀಣಿಸುತ್ತದೆ.

ಆಯುರ್ವೇದ ಸಲಹೆ ಪಾಲಿಸೋಣ ; ಆಸ್ಪತ್ರೆಗಳಿಂದ ದೂರ ಇರೋಣ.

ಜಗತ್ತಿನಲ್ಲಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚುವುದು ಆರೋಗ್ಯಕರ ಲಕ್ಷಣವೇ?

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ
.

News By: Raghu Shikari- 7411515737

Admin

Leave a Reply

Your email address will not be published. Required fields are marked *

error: Content is protected !!