ಶಿವಮೊಗ್ಗ: ಇಂದು ಒಂದೇ ದಿನ ಬರೋಬ್ಬರಿ 56 ಕರೋನ ಪಾಸಿಟಿವ್.. 500ರ ಗಡಿ ದಾಟಿದ ಸೋಂಕಿತ ಸಂಖ್ಯೆ..!

ಶಿವಮೊಗ್ಗ: ಇಂದು ಒಂದೇ ದಿನ ಬರೋಬ್ಬರಿ 56 ಕರೋನ ಪಾಸಿಟಿವ್.. 500ರ ಗಡಿ ದಾಟಿದ ಸೋಂಕಿತ ಸಂಖ್ಯೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 56 ಕರೋನ ಕೇಸ್ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 500 ಗಡಿದಾಟಿದೆ.

ಜಿಲ್ಲಾ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ 144 ಜನ, ಖಾಸಗಿ ಆಸ್ಪತ್ರೆಯಲ್ಲಿ 8 ಜನ ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ 182 ಜನ ಕೊರೋನ ಪಾಸಿಟಿವ್ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ.

ಇಂದು 18 ಜನ ಕೊರೋನ ಮುಕ್ತರಾಗಿ ಗುಣಮುಖರಾಗಿದ್ದು ಇದುವರೆಗೂ ಡಿಸ್ಚಾರ್ಜ್ ಆಗಿರುವವರ ಸಂಖ್ಯೆ 198 ಜನರೆಂದು ಜಿಲ್ಲಾ ಹೆಲ್ತ್ ಬುಲಿಟಿನ್ ತಿಳಿಸಿದೆ.

ಕೊರೋನ ಸೋಂಕಿತರ ಸಂಖ್ಯೆ 334 ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು. ಇಲ್ಲಿಯವರೆಗೆ 198 ಜನ ಗುಣಮುಖರಾಗಿದ್ದಾರೆ

ಒಟ್ಟು ಜಿಲ್ಲೆಯ ಸೋಂಕಿತರ ಸಂಖ್ಯೆ 541ಕ್ಕೆ ಏರಿಕೆಯಾಗಿದೆ ಎಂದು ಬುಲಿಟಿನ್ ನಲ್ಲಿ ಪ್ರಕಟಿಸಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!