ನಿತ್ಯವೂ ಬಿಸಿನೀರು ಸೇವನೆ ಒಳ್ಳೆಯದೇ?

ನಿತ್ಯವೂ ಬಿಸಿನೀರು ಸೇವನೆ ಒಳ್ಳೆಯದೇ?

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

ಉತ್ತರ:
ಬಿಸಿ ನೀರು ಅನೇಕ ರೋಗಗಳನ್ನು ತಡೆಯುತ್ತದೆ, ಎಲ್ಲರೂ ನಿತ್ಯ ಸೇವಿಸುವುದು ಒಳ್ಳೆಯದಲ್ಲ ತಣ್ಣೀರು ಅತ್ಯಂತ ಶ್ರೇಷ್ಠ, ಆದರೆ ಕೇವಲ ಕೆಲವಸ್ಥೆವಗಳಲ್ಲಿ


ಅನಭಿಷ್ಯಂದಿ ಲಘು ತೋಯಂ ಕ್ವತಿಥ ಶೀತಲಮ್|
ಪಿತ್ತಯುಕ್ತೇ ಹಿತಂ ದೋಷೇ……….||
………ವ್ಯೂಷಿತಂ ತತ್ ತ್ರಿದೋಷಕೃತ್ ||

ಶೀತಂ ಮದತ್ಯಾಯ ಗ್ಲಾನಿ ಮೂರ್ಚಾ ಛರ್ದಿ ಶ್ರಮ ಭ್ರಮಾನ್ |
ತೃಷ್ಣಾ ಉಷ್ಣ ದಾಹ ಪಿತ್ತಾಸ್ರಕ್ ವಿಶೇಷಾಣಿ ಅಂಬು ನಿಯಚ್ಛತಿ ||

ಅಷ್ಟಾಂಗ ಹೃದಯ ಸೂತ್ರ, ಅಧ್ಯಾಯ-5

ಉಷ್ಣ ಜಲವು
“ಕಫ ದೋಷ”ದಲ್ಲೂ (ಹಸಿವೆಯಾಗದಿರುವುದು, ಮೈಭಾರ, ಮೆದಸ್ಸು ಅಥವಾ ಕೊಬ್ಬಿನ ಅಂಶ ಹೆಚ್ಚಾಗಿರುವುದು),
“ಕಫವಾತ” ದೋಷದಲ್ಲೂ (ಆಮವಾತ, ಅಜೀರ್ಣ, ಹೊಟ್ಟೆಯುಬ್ಬರ)
ಒಳ್ಳೆಯದು.

ಮತ್ತು
ಕಾಯಿಸಿ ಆರಿಸಿದ ನೀರು “ಪಿತ್ತವಾತ” ದೋಷ (ಗೌಟಿ ಸಂಧಿಶೂಲ, ಆರ್ಟರೀ ರಕ್ತನಾಳಗಳ ವಿಕಾರಗಳಾದ, ರಕ್ತದೊತ್ತಡ, ಫೆರಿಫೆರಲ್ ವೆಸ್ಕುಲಾರ್ ಕಾಯಿಲೆ, ಬ್ಲಾಕೇಜ್…)
“ಪಿತ್ತಕಫ” ದೋಷ (ವೇನಸ್ ರಕ್ತನಾಳಗಳ ವಿಕಾರವಾದ ವೆರಿಕೋಸಿಟಿ, ಡಿ.ವಿ.ಟಿ, ರಕ್ತಸ್ರಾವ, ಅಧಿಕ ಮುಟ್ಟು) ಇಂತಹ ರೋಗಗಳಲ್ಲಿ ನಿತ್ಯವೂ ಕುದಿಸುತ್ತಾ 1/5 ಅಂಶಕ್ಕೆ ಇಳಿಸಿ ತಾನಾಗೀ ಆರಿದ ನೀರು ಶ್ರೇಯಸ್ಕರ.

ಕುದಿವ ನೀರನ್ನು ವಾತದಲ್ಲಿ 1/4 ಅಂಶಕ್ಕೆ
ಪಿತ್ತದಲ್ಲಿ 1/3 ಅಂಶಕ್ಕೆ
ಕಫದಲ್ಲಿ 1/2 ಅಂಶಕ್ಕೆ ಇಳಿಸಿ ಸೋಸಿ ಆರಿಸಿ ಕುಡಿಯಬೇಕು.
ಎರೆಡು ದೋಷಗಳ ಸಂಯೋಗದಲ್ಲಿ 1/5 ಅಂಶಕ್ಕೆ ಇಳಿಸುವುದು ಸೂಕ್ತ.


ಶರೀರದ ದೋಷಗಳ ಜೊತೆ ಮನಸ್ಸು ಕ್ಷೋಭೆಗೊಂಡರೆ ಉದಾ: ಮದ್ಯ ಕುಡಿದಾಗ, ಮೂರ್ಚೆ ಬಂದಾಗ, ವಾಂತಿ ತಡೆಯದೇ ಇರುವಾಗ, ತಲೆಸುತ್ತು ಇರುವಾಗ, ಅತ್ಯಂತ ಬಾಯಾರಿಕೆ ಇರುವಾಗ, ಶರೀರವೆಲ್ಲಾ ಉರಿ ಮತ್ತು ಬಿಸಿ ಬಿಸಿ ಅನಿಸುತ್ತಿರುವಾಗ, ರಕ್ತಸ್ರಾವ, ವಿಷದೋಷದಲ್ಲೂ, ಮತ್ತು ಕೇವಲ ಪಿತ್ತ ಇದ್ದು ಮನಸ್ಸಿನ ರಜೋಗುಣ ವೃದ್ಧಿಯಾಗಿ ನಿಯಂತ್ರಣ ತಪ್ಪಿದಾಗ, ಅತಿಯಾದ ಕೋಪ ಬರುತ್ತಿರುವಾಗ…

ಒಟ್ಟಾರೆ ಕೇವಲ ಪಿತ್ತ ಮತ್ತು ಅದರ ಮೇಲೆ ಅವಲಂಬಿತವಾದ ರಕ್ತ ದೂಷಿತಗೊಂಡಾಗ, ಶರೀರ ವಿಷಸದೃಷವಾಗುತ್ತದೆ. ಆಗ ಶಾಂತಿ ಕಳೆದು, ಮನೋವಿಕಾರ ವರ್ಧಿಸುತ್ತದೆ. ಆಗ ತಣ್ಣೀರು ಪರಮ ಶ್ರೇಷ್ಠ.

ಮುಖ್ಯಾಂಶಗಳು ದಯಮಾಡಿ ನೆನಪಿನಲ್ಲಿಡಿ:
ಮನಸ್ಸು ಯವುದೇ ಕಾರಣಕ್ಕೆ ಕ್ಷೋಭೆಗೊಂಡಾಗ, ವಾತಕಫ ದೋಷ ಇದ್ದರೂ ಬಿಸಿನೀರನ್ನು ಒಟ್ಟಾರೆ ತ್ಯಜಿಸಿ ತಣ್ಣೀರನ್ನೇ ಕೊಡಬೇಕು.

ಏಕೆಂದರೆ,
ಮನಸ್ಸು ಶರೀರವನ್ನು ಅತೀವೇಗವಾಗಿ ಮತ್ತು ಪ್ರಭಲವಾಗಿ ಉಷ್ಣಗೊಳಿಸುವ ಕಾರಣ ಮಾನಸಿಕ ಒತ್ತಡ ಇದ್ದಾಗ ಎಲ್ಲರಿಗೂ ಶೀತಜಲವೇ, ಶ್ರೇಷ್ಠ.

ಮನಸ್ಸು ಕ್ಷೋಭೆಗೊಳ್ಳದೇ ಶರೀರದ ಯಾವುದೇ ತೊಂದರೆ ಬಂದರೂ ಕಾಯಿಸಿ ಆರಿಸಿದ ನೀರು ಅಮೃತಸಮಾನ.

ವಿಶೇಷ ಎಂದರೆ ಬಾಯಾರಿಕೆ ಇಲ್ಲದೇ ಯಾವಾಗಲೂ ನೀರು ಕುಡಿಯಬಾರದು.

ಧನ್ಯವಾದಗಳು

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ-ದಾವಣಗೆರೆ

Admin

Leave a Reply

Your email address will not be published. Required fields are marked *

error: Content is protected !!