ಶಿವಮೊಗ್ಗ: ದೇಶದ ಪ್ರಸಿದ್ಧ ನಾಟಿ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ..!

ಶಿವಮೊಗ್ಗ: ದೇಶದ ಪ್ರಸಿದ್ಧ ನಾಟಿ ವೈದ್ಯ ನಾರಾಯಣ ಮೂರ್ತಿ ಇನ್ನಿಲ್ಲ..!

ನಾಟಿ ವೈದ್ಯ ಪದ್ಧತಿ ಮೂಲಕವೇ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದ ಮಲೆನಾಡು ಕುಗ್ರಾಮ ನರಸೀಪುರದ ನಾಟಿ ವೈದ್ಯ ನಾರಾಯಣ ಮೂರ್ತಿ ಅವರು ನಿನ್ನೆ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಎಂದಿನಂತೆ ಲವಲವಿಕೆಯಿಂದಲೇ ಇದ್ದ 80 ವರ್ಷದ ಹಿರಿಜೀವಕ್ಕೆ ತಡರಾತ್ರಿ ಎದೆನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ನರಸೀಪುರ ಎಂಬುದು ಸಾಗರ ತಾಲೂಕಿನ ಒಂದು ಸಣ್ಣ ಹಳ್ಳಿ. ಈ ಹಳ್ಳಿಯ ಬಗ್ಗೆ ವಿದೇಶಗಳಲ್ಲಿಯೂ ಮಾತನಾಡುವಂತೆ ಮಾತನಾಡಿದ್ದ ಕೀರ್ತಿ ನಾರಾಯಣ ಮೂರ್ತಿ ಅವರಿಗೆ ಸಲ್ಲುತ್ತದೆ.

ಕ್ಯಾನ್ಸರ್ ಸೇರಿದಂತೆ ಇತರೆ ಮಾರಕ ರೋಗಗಳಿಗೆ ಸಾಂಪ್ರದಾಯಿಕ ನಾಟಿ ಔಷಧ ನೀಡುವ ಮೂಲಕ ಮಾರಕ ರೋಗಗಳನ್ನು ಗುಣಪಡಿಸಿದ ಕೀರ್ತಿ ನಾರಾಯಣ ಮೂರ್ತಿ ಅವರಿಗೆ ಸಲ್ಲುತ್ತದೆ.

ಇವರ ಬಳಿ ನಾಟಿ ಔಷಧ ಪಡೆಯಲು ಅಂತರಾಜ್ಯ ಹಾಗೂ ವಿದೇಶಗಳಿಂದಲೂ‌ ಸಾವಿರಾರು ಜನರು ಪ್ರತಿದಿನ ಬರುತ್ತಿದ್ದರು ಎಂಬುದನ್ನು ಇವರ ಕೀರ್ತಿ ಏನು ಎಂಬುದನ್ನು ತೋರಿಸುತ್ತದೆ.

ಕಳೆದ ಕೆಲ ತಿಂಗಳಿನಿಂದ‌ ಕರೋನಾ ವೈರಸ್ ನಿಂದಾಗಿ ಇಡೀ ಪ್ರಪಂಚವೇ ತತ್ತರಿಸಿ ಹೋಗಿದೆ. ಈ ವೇಳೆಯಲ್ಲಿ ನಮ್ಮ ಸಾಂಪ್ರದಾಯಿಕ ನಾಟಿ ಔಷಧ ಪದ್ದತಿಯ ಮೂಲಕವೇ ಕರೋನಾ ನಿರ್ಮೂಲನೆಗೆ ಪ್ರಯತ್ನ ಆರಂಭಿಸಿದ್ದರು.

ಈ ಕುರಿತು ಹೆಚ್ಚಿನ ಅಧ್ಯಯನ ನಡೆಸುವ ವೇಳೆಯಲ್ಲಿಯೇ ನಾರಾಯಣ ಮೂರ್ತಿ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ಇಡೀ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ.

ನಾಟಿ ವೈದ್ಯ ಪದ್ಧತಿಯಿಂದ ಇಡೀ ಪ್ರಪಂಚದ ಗಮನ ಸೆಳೆದಿದ್ದಲ್ಲದೆ ವಿಜ್ಞಾನಿಗಳಿಗೂ ಸವಾಲಾಗಿದ್ದ ಹಲವು ರೋಗಗಳಿಗೆ ತಮ್ಮ ನಾಟಿ ವೈದ್ಯ ಪದ್ಧತಿಯ ಔಷಧ ನೀಡುವ ಮೂಲಕ ಆ ರೋಗ ಗುಣಪಡಿಸಿದ್ದ ನಾರಾಯಣ ಮೂರ್ತಿ ಅವರು ಇನ್ನಷ್ಟು ವರ್ಷ ಬದುಕಿ ಲಕ್ಷಾಂತರ ಜನರ ಬಾಳಿಗೆ ಹೊಸಬೆಳಕು ನೀಡಬೇಕಿತ್ತು ಎಂಬುದು ಜನರ ನೋವಿನ ನುಡಿಗಳಾಗಿವೆ.

Admin

Leave a Reply

Your email address will not be published. Required fields are marked *

error: Content is protected !!