ಮಳೆಗಾಲದ ಮಾತು ಭಾಗ-3:ಮಳೆಗಾಲದ ಶ್ರೇಷ್ಠ ಪಂಚಕರ್ಮ ಚಿಕಿತ್ಸೆ..!

ಮಳೆಗಾಲದ ಮಾತು ಭಾಗ-3:ಮಳೆಗಾಲದ ಶ್ರೇಷ್ಠ ಪಂಚಕರ್ಮ ಚಿಕಿತ್ಸೆ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:- ಮಳೆಗಾಲದ ಮಾತು
ಭಾಗ-3

ಮಳೆಗಾಲದ ಶ್ರೇಷ್ಠ ಪಂಚಕರ್ಮ ಚಿಕಿತ್ಸೆ:

ಶರೀರದಲ್ಲಿ ಸಂಚಿತವಾದ ವಿಕೃತ ಮೂರೂ ದೋಷಗಳನ್ನೂ ಶಮನಗೊಳಿಸಲು ಸುಮಾರು 60 ದಿನಗಳ ಸಮಯ ಬೇಕಾಗುತ್ತದೆ. ಆದರೂ ಪೂರ್ಣ ಸ್ವಚ್ಛವಾದಂತಲ್ಲ, ಹಾಗಾಗಿ ಪ್ರತಿಯೊಬ್ಬರೂ ಶೋಧನರೂಪವಾಗಿ ಪಂಚಕರ್ಮ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅತ್ಯುತ್ತಮ

ಆಸ್ಥಾಪನಂ ಶುದ್ಧ ತನು ಜೀರ್ಣಂ………….
……ವ್ಯಕ್ತಾಮ್ಲ, ಲವಣ, ಸ್ನೇಹಂ, ಸಂಶುಷ್ಕಂ ಕ್ಷೌದ್ರವತ್ ಲಘು ||
-ಅ.ಹೃ.ಸೂತ್ರ ಸ್ಥಾನ-3

ಶುದ್ಧ ತನು:
ವಿರೇಚನದಿಂದ ಅಂದರೆ ಔಷಧಯುಕ್ತ ಬೇಧಿ ಚಿಕಿತ್ಸೆಯಿಂದ ತನುವನ್ನು(ಶರೀರವನ್ನು) ಶುದ್ಧ ಮಾಡಿಕೊಳ್ಳಬೇಕು.

ಇಲ್ಲಿ ವಿರೇಚನವು ದ್ರವರೂಪದಿಂದ ಸಂಚಿತವಾದ ಪಿತ್ತವನ್ನು ಹೊರ ಹಾಕುವುದಲ್ಲದೇ, ದೊಡ್ಡ ಕರುಳಿನಲ್ಲಿ ಸಂಚಯವಾಗಿ ಹೊಟ್ಟೆಯನ್ನು ಭಾರವಾಗುವಂತೆ ಅಥವಾ ಊದಿಕೊಳ್ಳುವ ಮಾಡುವ ವಾಯುವನ್ನೂ ಅನುಲೋಮ ಗತಿಯಿಂದ ಕೆಳಮುಖವಾಗಿ ಹೊರ ಹಾಕುತ್ತದೆ.

ನಂತರ

ಆಸ್ಥಾಪನ ಬಸ್ತಿ ಎಂಬ ಪಂಚಕರ್ಮ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು.

ಇದು ವಾತ ಉತ್ಪತ್ತಿ ಸ್ಥಾನವನ್ನೇ ಶುದ್ಧಿಗೊಳಿಸುತ್ತದೆ ಮತ್ತು ಕಫಹರ ಔಷಧಿಗಳಿಂದ ಬಸ್ತಿಯನ್ನು ಪ್ರಯೋಗಿಸುವ ಕಾರಣ ತ್ರಿದೋಷಗಳೂ ಸಹ ಸ್ವಸ್ಥಾನದಲ್ಲಿ ತಮ್ಮ‌ಸಹಜ ಕರ್ಮಗಳನ್ನು ನಿರ್ವಹಿಸುತ್ತವೆ.

ಈ ಚಿಕಿತ್ಸೆಯ ನಂತರದ ಆರೋಗ್ಯಾನುಭೂತಿಯನ್ನು ಅನುಭವಿಸಿಯೇ ಅರಿಯಬೇಕು. ಈ ಕಾಲದಲ್ಲಿ ವ್ಯಕ್ತಿಯ ಅನುಭವಕ್ಕೆ ಬರುವ ಕೆಲ ಸಂಗತಿಗಳನ್ನು ಗಮನಿಸಿ

• ಶರೀರ 5 ವರ್ಷ ಹಿಂದೆ ಸರಿದಷ್ಟು ಉತ್ಸಾಹ ಮತ್ತು ಕಾರ್ಯಕ್ಷಮತೆಯನ್ನು ತೋರುತ್ತದೆ.
• 5-10 ವರ್ಷಗಳ ಹಿಂದಿನಂತೆ ತೆಳ್ಳಗಿನ ಶರೀರ ನಿಮ್ಮದಾಗುತ್ತದೆ, ನಿಮ್ಮ ಸ್ನೇಹಿತರು ಇದನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ.

• ಹಸಿವು ಹೆಚ್ಚುತ್ತದೆ
• ಹೊಟ್ಟೆಯುಬ್ಬರ, ಭಾರ ಇಳಿದುಹೋಗುತ್ತದೆ.
• ಕೈ ಬೆರಳುಗಳ ಊತ ಕಡಿಮೆಯಾಗಿ, ಬಿಗಿ ಹಿಡಿತ ಸಾಧ್ಯವಾಗುತ್ತದೆ.
• ನಿಮ್ಮ ಪ್ರಾಕೃತ ವರ್ಣ ಮರಳಿ ಬರುತ್ತದೆ.
• ಸೋಂಕುಗಳು ಸುಲಭವಾಗಿ ಹರಡುವುದಿಲ್ಲ
• ಮುಖದ ಕಾಂತಿ, ಸ್ವರದ ಔದಾರ್ಯ ಹೆಚ್ಚುತ್ತದೆ.

ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research

Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!