ಕೊರೋನಾಗೆ ಆಯುರ್ವೇದ ಚಿಕಿತ್ಸೆ. ಅಭಿನಂದಾರ್ಹ ವಿವೇಕಾನಂದ ಆಶ್ರಮದ ಸ್ವಾಮೀಜಿ..!

ಕೊರೋನಾಗೆ ಆಯುರ್ವೇದ ಚಿಕಿತ್ಸೆ. ಅಭಿನಂದಾರ್ಹ ವಿವೇಕಾನಂದ ಆಶ್ರಮದ ಸ್ವಾಮೀಜಿ..!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:-

ಶ್ರೀ ಗುರು ದಿವ್ಯ ಚೇತನ ಡಾ.ಎಂ.ಈಶ್ವರ ರೆಡ್ಡಿ ಅವರ ಶ್ರೀ ಚರಣಕ್ಕೆ ಅರ್ಪಣೆ.

ನಿನ್ನೆ ಸಂಜೆ ಟಿ.ವಿ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿ
10.06.2020 ರಂದು ಕೊರೋನಾ ಸೋಂಕಿಗೆ ಒಳಗಾಗಿದ್ದ ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವಿನಯಾನಂದ ಸರಸ್ವತಿ ಅವರಿಗೆ ಅಂದಿನಿಂದಲೇ ಆಯುರ್ವೇದ ಚಿಕಿತ್ಸೆ ಆರಂಭಿಸಲಾಗಿತ್ತು,

ಕೇವಲ ಒಂದು ವಾರದಲ್ಲಿ ಕೊರೋನಾ ಸೋಂಕಿನಿಂದ ಮುಕ್ತರಾಗಿ ಗುಣಮುಖರಾಗಿ 19.06.2020 ರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ನಮಗೆ ಆಯುರ್ವೇದ ಚಿಕಿತ್ಸೆಯೇ ಬೇಕೆಂದು ಸಂವಿಧಾನಾತ್ಮಕ ಹಕ್ಕನ್ನು ಉಲ್ಲೇಖಿಸಿ ಪಟ್ಟು ಹಿಡಿದದ್ದೂ ಅಲ್ಲದೇ. ಆಯುರ್ವೇದ ಚಿಕಿತ್ಸೆಯಿಂದ ಏನಾದರೂ ಅಪಾಯವಾದರೆ ನಾವೇ ಹೊಣೆ ಎಂಬ ದೃಢ ಲಿಖಿತ ಪತ್ರವನ್ನು ರವಾನಿಸಿ ಚಿಕಿತ್ಸೆ ಪಡೆದಿದ್ದರು.

ಈ ಧೈರ್ಯ ತೋರಿದ ಸ್ವಾಮಿ ವಿನಯಾನಂದಜೀ ಅವರು ಅಭಿನಂದನಾರ್ಹರು. ತನ್ಮೂಲಕ ಜಗತ್ತಿಗೆ ಒಂದು ದೃಢ ಸಂದೇಶವನ್ನು ರವಾನಿಸಿದರು.

ಕೊನೆಗೂ ಆಯುರ್ವೇದ ವಿಧಾನಗಳಿಂದಲೇ ಸಂಪೂರ್ಣ ಗುಣಮುಖರಾಗಿದ್ದು ಹೆಮ್ಮೆಯ ಸಂಗತಿ.

ಶ್ರೀ ಸದ್ಗುರು ಆಯುರ್ವೇದ ಧನ್ವಂತರಿ ನಿತ್ಯಚೇತನ ಡಾ.ಎಂ.ಈಶ್ವರ ರೆಡ್ಡಿಯವರ ಕೃಪಾಶೀರ್ವಾದದ ದೆಸೆಯಿಂದ ಆಯುರ್ವೇದದ ಎಲ್ಲಾ ಕೋನಗಳನ್ನೂ ಬಳಸಿ ಯಶಸ್ಸನ್ನು ಕಾಣಲಾಯಿತು.

ಇಲ್ಲಿ

  1. ಆಹಾರ
  2. ವಿಹಾರ
  3. ಔಷಧಿ

ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.

ಆಯುರ್ವೇದ ಎಂದರೆ ಕೇವಲ ಔಷಧವಲ್ಲ ಅದೊಂದು ಆರೋಗ್ಯಯುತ ಜೀವನ ವಿಧಾನ ಎಂಬ ನಮ್ಮ ಮತ ಸಾಬೀತಾಗಿದೆ.

ಅವರು ಔಷಧಗಳ ಜೊತೆ ಆಯುರ್ವೇದೋಕ್ತ ಆಹಾರ‌ವಿಧಿ, ನಿಯಮಿತ ವ್ಯಾಯಾಮ, ಪ್ರಣಾಯಾಮಗಳನ್ನು ಪಾಲಿಸುತ್ತಿದ್ದುದು ಇಲ್ಲಿ ಗಮನಿಸಲೇಬೇಕಾದ ಅಂಶವಾಗಿದೆ.

ವೈದ್ಯರಾಗಿ ನಮ್ಮ ಕರ್ತವ್ಯವನ್ನು ಶ್ರದ್ಧೆ ಭಕ್ತಿ ಮತ್ತು ಶ್ರೀ ಗರುವಿಗೆ ಅರ್ಪಣೆಯಿಂದ ಪೂರೈಸಲಾಗಿದೆ.
ಇನ್ನು ಇದನ್ನು ಅನುಸರಿಸಬೇಕಾದ ಕೆಲಸ ಜನಸಾಮಾನ್ಯರದ್ದು, ಮತ್ತು ಈ ಜಗತ್ತಿನದ್ದು.

ಆರೋಗ್ಯವಂತರಾಗಿರಲು ಆಹಾರ ವಿಹಾರ ಜೀವನ ಸದೃತ್(ಜೀವನ ಶೈಲಿ) ಕಾರಣ, ರೋಗ ಬಂದಾಗ ಆಯುರ್ವೇದ ಔಷಧ ಅತ್ಯಂತ ಸಮರ್ಥವಾಗಿ ಕೆಲಸಮಾಡುತ್ತದೆ.

ವಿಶ್ವಹೃದಯಾಶೀರ್ವಾದವಂ ಬಯಸಿ
-ಡಾ.ಮಲ್ಲಿಕಾರ್ಜುನ ಡಂಬಳ

ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!