ನಾವ್ಯಾಕೆ ಬೀದಿ ಬೀದಿ ಅಲೆಯುತ್ತಿದ್ದೆವೆ…!

ನಾವ್ಯಾಕೆ ಬೀದಿ ಬೀದಿ ಅಲೆಯುತ್ತಿದ್ದೆವೆ…!

ಪತ್ರಕರ್ತರ ಮಾನದಾಳದ ಮಾತು…….

ಮಾಧ್ಯಮಗಳು ಅಂದ್ರೆ ಇವತ್ತು ಮೂಗು ಮುರಿಯೋ ಮಂದಿನೇ ಜಾಸ್ತಿ. ತೋರಿಸಿದ್ದನ್ನೆ ತೋರಿಸ್ತಾರೆ. ಇವ್ರಿಗೆ ಮಾಡೋಕೆ ಬೇರೆನು ಕೆಲಸ ಇಲ್ಲ. ಬೇರೆಯವರ ಮನೆ ಹಾಳು ಮಾಡ್ತಾರೆ ಹಾಗೇ ಹೀಗೆ ಅಂತಾ ಪುಂಖಾನುಪುಂಖಾವಾಗಿ ಹೇಳ್ತಾನೆ ಇರ್ತಾರೆ.

ಆದ್ರೆ ನಾವು ಮಾಡುವ ಕೆಲಸ ಮಾತ್ರ ಯಾರಿಗೂ ಗೋತ್ತಾಗೋದೆ ಇಲ್ಲ.

ಇವತ್ತು ಕೊರೋನಾ ಎಂಬ ಮಹಾಮಾರಿ ಈಡಿ ವಿಶ್ವವನ್ನೆ ತಲ್ಲಣಗೊಳಿಸ್ತಾ ಇದೆ. ಭಾರತ ಅದ್ರಲ್ಲೂ ನಮ್ಮ ರಾಜ್ಯ ಕರ್ನಾಟಕ ಇದ್ರಿಂದ ಹೊರತೆನಲ್ಲ. ಕರ್ನಾಟಕದಲ್ಲಿ ಮಾರ್ಚ್ ೩೧ ವರೆಗೂ ಕೊರೋನಾ ಎಮರ್ಜೆನ್ಸಿ ಜಾರಿಯಲ್ಲಿದೆ.

Various press reporter hands with microphones and recorder in press interview. Politics, business, press interview, news, concept. Outline, linear, thin line art, hand drawn sketch design, simple style.

ಬಹುತೇಕ ಖಾಸಗಿ ಕಂಪನಿಗಳು work from home ಅಂತಾ ಇದ್ರೆ. ಇನ್ನೂ ಕೆಲವು ಕಂಪನಿಗಳು ರಜೆಯನ್ನೂ ಘೋಷಣೆ ಮಾಡಿವೆ. ಆದ್ರೆ ನಮಗೆ ಮಾತ್ರ ಯಾರು ರಜೆ ನೀಡಿಲ್ಲ. ಜನರೆಲ್ಲ ಬೀದಿಗೆ ಬರಲು ಹೆದರುತ್ತಿರುವ ಈ ಸಮಯದಲ್ಲೂ ನಾವು ಬೀದಿ ಬೀದಿ ಅಲೆದು ಅಲ್ಲಿ ಹೋಗಬೇಡಿ, ಹಾಗೇ ಮಾಡಬೇಡಿ, ಹೀಗೆ ಮಾಡಬೇಡಿ ಅಂತಾ ಬಡಿದುಕೊಳ್ತಾ ಇದ್ದಿವಿ. ನಿಜ ಕೆಲವರು ಹೇಳಿದ ಹಾಗೇ ನಾವು ಭಯ ಬೀಳಿಸ್ತಾ ಇದ್ದಿವಿ, ಆದ್ರೆ ಆ ಭಯದಿಂದ ನಮಗೆ ಲಾಭ ಆಗಲಿ ಅಂತಾ ಅಲ್ಲ. ಬದಲಾಗಿ ನಿಮಗೆ ಯಾವುದೇ ರೋಗ ಬರದಿರಲಿ ಅಂತ ನಿಮ್ಮ ಸಂಸಾರ ಬೀದಿಗೆ ಬೀಳದಿರಲಿ ಅಂತಾ..

ಹೌದು ನನ್ನದೊಂದು ನೇರವಾದ ಪ್ರಶ್ನೆಯಿದೆ ಮಾಧ್ಯಮಗಳ ಬಗ್ಗೆ ಮಾತಾನಾಡುವ ಮಹಾ ಪ್ರತಿಭೆಗಳಿಗೆ. ನಾವ್ಯಾಕೆ ನಿಮ್ಮನ್ನ ಉದ್ದಾರ ಮಾಡಬೇಕು..? ನಾವ್ಯಾಕೆ ನಿಮ್ಮ ಕಷ್ಟಗಳಿಗೆ ಸ್ಪಂದಿಸಬೇಕು..? ನಾವೇನು ಸರ್ಕಾರಿ ಅಧಿಕಾರಿಗಳೆ..? ಸರ್ಕಾರ ನಮಗೇನಾದ್ರು ವಿಶೇಷ ಸ್ಥಾನಮಾನ ನೀಡಿದೆಯಾ..? ಯಾವ ಮಣ್ಣಾಂಗಟ್ಟೆಯೂ ಇಲ್ಲ..

ಈ ದೇಶದ ಎಲ್ಲಾ ನಾಗರೀಕರಿಗೂ ಇರುವ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ( ಸಂವಿಧಾನದ ೧೯ ವಿಧಿ) ಆಡಿಯಲ್ಲೆ ನಾವು ಕೆಲಸ ಮಾಡ್ತಾ ಇರೋದು. ಹೀಗೆ ಏನು ಇಲ್ಲದಿದ್ರು ಯಾರೋ ಪುಣ್ಯಾತ್ಮ ಪುಕ್ಕಟೆಯಾಗಿ ಹೇಳಿದ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಪತ್ರಿಕೋದ್ಯಮ , ಪ್ರಜಾಪ್ರಭುತ್ವದ ಕಾವಲು ನಾಯಿ ಪತ್ರಿಕೋದ್ಯಮ ಅನ್ನೋ ಸಿದ್ದಾಂತಗಳಿಗೆ ಕಟ್ಟು ಬಿದ್ದು ಇವತ್ತಿಗೂ ನಾವೇಷ್ಟೇ ಖಾಸಗಿಯಾಗಿದ್ರು ಸೇವೆ ಅನ್ನೋ ಎರಡು ಪದವನ್ನ ಇನ್ನೂ ಜೀವಂತವಾಗಿ ಜೊತೆಯಲ್ಲೆ ಇಟ್ಟುಕೊಂಡಿದ್ದೆವೆ.

ಹೌದು ರೀ ನಿಜ ನಮ್ಮಲ್ಲೂ ನ್ಯೂನ್ಯತೆಗಳಿವೆ ನಮ್ಮಲ್ಲೂ ಕಪಟರಿದ್ದಾರೆ. ಆದರೆ ಅವೆಲ್ಲವನ್ನೂ ಮೀರಿ ನಾವು ನಮ್ಮ ಸೇವೆಯನ್ನ ಜನರಿಗೆ ನೀಡ್ತಾ ಇದ್ದೇವೆ. ಯಾವ ಖಾಸಗಿ ಸಂಸ್ಥೆಯೂ ಉಳಿಸಿಕೊಳ್ಳದ ಸೇವಾ ಮನೋಭಾವವನ್ನು ನಾವು ಉಳಿಸಿಕೊಂಡಿದ್ದೆವೆ. ಅದಕ್ಕೆ ಇವತ್ತು ಜನರೆಲ್ಲ ಮನೆ ಸೇರಿಕೊಂಡಿದ್ರು ನಾವು ಬೀದಿ ಬೀದಿ ಅಲೆಯುತ್ತಿರುವುದು. ನೆನಪಿರಲಿ ಸೈನಿಕರು ನಮಗಾಗಿ ಕಾಯುತ್ತಿದ್ದಾರೆ ಅವರಿಗೆ ಸರ್ಕಾರದ ಸೌಲಭ್ಯಗಳಾದ್ರು ಇವೆ.

ಒಬ್ಬ ರಾಜಕಾರಿಣಿ ಏನೋ ಒಳ್ಳೆಯದು ಮಾಡ್ತಾ ಇದ್ದಾನೆ ಅಂದ್ರೆ ಅವನ ಹತ್ತಿರ ಅಧಿಕಾರ ಇದೆ, ಆದರೆ ನಾವು ನಿಮ್ಮಂತೆ ಸಾಮಾನ್ಯರು ನಮಗೇ ನಿಮಗೇನಿದೆಯೋ ಅಷ್ಟೇ ಇರೋದು ಅದ್ರೂ ನಾವು ನಿಮಾಗಾಗಿ ಒಂಚೂರಾದ್ರು ಸೇವೆ ಮಾಡ್ತಾ ಇದ್ದಿವಿ.

ನಮ್ಮಲ್ಲೂ ನೂರಾರು ಕರುಣಾಜನಕ ಕತೆಗಳಿವೆ, ಇವತ್ತಿದ್ದ ಕೆಲಸ ನಾಳೆ ಇರಲ್ಲ ಜೀವನಕ್ಕೇನು ಅನ್ನೋ ಅಭದ್ರತೆ ಇದೆ. ಯಾರಿಗೂ ಒಳ್ಳೆಯದು ಮಾಡೋಕೆ ಹೋಗಿ ಬೀದಿಗೆ ಬಂದ ಅದೆಷ್ಟೊ ಪತ್ರಕರ್ತರಿದ್ದಾರೆ. ಅದರೆ ಇದಾವುದನ್ನು ನಾವು ಯಾರತ್ರಾನೂ ಹೇಳಲ್ಲ. ಇಷ್ಟೆಲ್ಲ ಇದ್ರೂ ಸಾವಿರ ಜನಕ್ಕೆ ನಮ್ಮಿಂದ ಒಳ್ಳೆಯದಾಗಿಲ್ಲ ಅಂದ್ರೂ ಪರ್ವಾಗಿಲ್ಲ ಮೂರು ಜನಕ್ಕಾದ್ರೂ ಒಳ್ಳೆಯದು ಮಾಡ್ತಾ ಇದ್ದಿವಿ.

ನೆನಪಿಟ್ಟುಕೊಳ್ಳಿ ನಿಮ್ಮಂತೆ ಸಾಮಾನ್ಯರಾದ ನಾವು ನಿಮಗಿಂತ ಒಂದು ಪರ್ಸೆಂಟ್ ಒಳ್ಳೆಯದನ್ನ ಜಾಸ್ತಿ ಮಾಡಿದ್ರೆ.. ಅದು ನಮಗೆ ಸಮಾಜದ ಬಗ್ಗೆ ಇರುವ ಕಾಳಜಿಯೇ ವಿನಃ ಇನ್ನಾವುದೋ ಲಾಭದ ಉದ್ದೇಶ ಅಲ್ಲ. ಇಷ್ಟೆಲ್ಲ ಇದ್ದಾಗಿಯೂ ನೀವು ಪತ್ರಕರ್ತರನ್ನ ಬಯ್ಯುವುದಾದರೆ ನಿಮ್ಮ ಯೋಗ್ಯತೆ ಏನು ಎಂದು ನೀವೆ ತಿಳಿದುಕೊಳ್ಳಿ. ನಾವು ಮಾತ್ರ ಏನೇ ಆದರೂ ಬೀದಿ ಬೀದಿ ಅಲೆಯುತ್ತಲೆ ಇರುತ್ತೆವೆ.

I am proud to say I am a journalist…..

ಕೃಪೆ: ಗಾಂಪರ ಗುಂಪು

Admin

Leave a Reply

Your email address will not be published. Required fields are marked *

error: Content is protected !!