ಶಿಕಾರಿಪುರ: ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಹೃದಯಘಾತ..!

ಶಿಕಾರಿಪುರ ತಾಲೂಕಿನ ಕುಮದ್ವತಿ ಬಸ್ ಇಂದು ಶಿಕಾರಿಪುರ ದಿಂದ ಹೊನ್ನಾಳ್ಳಿಗೆ ಹೊಗುವ ಮಾರ್ಗದಲ್ಲಿ ಬಸ್ ಚಾಲನೆ ಮಾಡುವ ಸಮಯದಲ್ಲಿ ಇದ್ದಕ್ಕೆ ಇದ್ದಾಗೆ ಹೃದಯಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ.
ಶಿಕಾರಿಪುರ ತಾಲೂಕಿನ ಬಗನಕಟ್ಟೆ ನಿವಾಸಿ ಬಸ್ ಚಾಲಕ ಕುಮಾರ್ (32) ಮೃತ ಪಟ್ಟ ದುರ್ದೈವಿ ಎನ್ನಲಾಗಿದೆ ಅದೃಷ್ಟವಶಾತ್ ಬಸ್ ನಲ್ಲಿ ಪ್ರಯಾಣಿಕರು ಇದ್ದು ಕೆಂಗಟ್ಟೆ ಗ್ರಾಮದ ಬಳಿ ರಸ್ತೆಯ ಎಡಭಾಗದ ಮರಕ್ಕೆ ಗುದ್ದಿದ್ದು ಪ್ರಯಾಣೀಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ಬಸ್ ಚಾಲಕನ ಹೃದಯಘತದ ನೂವಿನಲ್ಲೂ ಬಸ್ ನಿಯಂತ್ರಣಿಸಲು ಪ್ರಯತ್ನಿಸಿದ್ದಾನೆ ಎಂದು ಪ್ರಯಾಣಿಕರು ತಿಳಿಸಿದ್ದು ಅದರೆ ಹೃದಯಘಾತದಿಂದ ಮೃತ ಪಟ್ಟಿದ್ದು ಬಸ್ ಚಾಲಕರು ಮಾಲೀಕರ ಸಂಘ ಸಂತಾಪ ಸೂಚಿಸಿದ್ದಾರೆ.
News By: Raghu Shikari