ಶಿವಮೊಗ್ಗ :ನಿನ್ನೆ ಜೈಲಿನಿಂದ ರಿಲೀಸ್ ಇಂದು ಮಾರ್ಡರ್ ರೌಡಿ ಶೀಟರ್ ಗಿರಿ ಭೀಕರ ಹತ್ಯೆ..!

ಶಿವಮೊಗ್ಗ: ಆರು ತಿಂಗಳ ಬಳಿಕ ಶಿವಮೊಗ್ಗದಲ್ಲಿ ರೌಡಿ ಶೀಟರ್ ಗಳ ನೆತ್ತರು ಹರಿದಿದೆ. ಕಳೆದ ಆರು ತಿಂಗಳಿನಿಂದ ಶಾಂತವಾಗಿದ್ದ ಶಿವಮೊಗ್ಗದ ಜನತೆ ಇಂದು ನಡೆದ ಭೀಕರ ಹತ್ಯೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ.
ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿಯ ತಮ್ಮ ರೌಡಿ ಶೀಟರ್ ಗಿರಿ ಭೀಕರ ಹತ್ಯೆಯಾಗಿದ್ದಾನೆ. ಶಿವಮೊಗ್ಗ ಗೋಪಾಳದ ಸಿದ್ದೇಶ್ವರ ಸರ್ಕಲ್ ಬಳಿ ಗಿರಿ ನಿಂತಿದ್ದಾಗ ದಾಳಿ ನಡೆಸಿದ ದುಷ್ಕರ್ಮಿಗಳು ಗಿರಿ ಮೇಲೆ ಮನಸೋಇಚ್ಛೆ ಚಾಕುವಿನಿಂದ ಚುಚ್ಚಿ ಹಂತಕರು ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡ ಗಿರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಳೆ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗಿದೆ. ಹಂದಿ ಅಣ್ಣಿ ಹಾಗೂ ಗಿರಿ ಮತ್ತು ಗ್ಯಾಂಗ್ ಶಿವಮೊಗ್ಗದ ಕುಖ್ಯಾತ ಪಾತಕಿಗಳಾಗಿದ್ದ ಲವ ಹಾಗೂ ಕುಶ ಎಂಬ ಸಹೋದರರನ್ನು ಹತ್ಯೆ ಮಾಡಿ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.
ಇದೀಗ ಹಂದಿ ಅಣ್ಣಿ ತಮ್ಮ ಗಿರಿಯೂ ಭೀಕರವಾಗಿ ಕೊಲೆಯಾಗಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
News by: Raghu Shikari