ಶಿಕಾರಿಪುರ: ತಾಲೂಕ್ ಪಂಚಾಯತ್ ಸಭೆಗೆ ಅಧಿಕಾರಿಗಳು ಗೈರು ಆಕ್ರೋಷಗೊಂಡ ಸದಸ್ಯರಿಂದ ಸಭೆ ಬಹಿಷ್ಕಾರ..!

ಶಿಕಾರಿಪುರ: ತಾಲೂಕ್ ಪಂಚಾಯತ್  ಸಭೆಗೆ ಅಧಿಕಾರಿಗಳು ಗೈರು ಆಕ್ರೋಷಗೊಂಡ ಸದಸ್ಯರಿಂದ ಸಭೆ ಬಹಿಷ್ಕಾರ..!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರು ಆಗಿರುವ ಕಾರಣದಿಂದ ಸಭೆಯನ್ನು ಬಹಿಷ್ಕರಿಸಿದ ಸದಸ್ಯರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಶಿಕಾರಿಪುರ ತಾಲ್ಲೂಕಿನ ವಿವಿಧ ಇಲಾಖೆಗಳ ಅನೇಕ ಉನ್ನತ ಆಡಳಿತ ಅಧಿಕಾರಿಗಳ ಗೈರು ಹಾಜರಾದ ಕಾರಣಕ್ಕೆ ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದಿದ್ದು ಬೆಳಿಗ್ಗೆ 11 ಗಂಟೆಗೆ ಆರಂಭಿಸಬೇಕಿದ್ದ ಸಭೆ 12 ಗಂಟೆಯಾದರೂ ಅಧಿಕಾರಿಗಳು ಸಭೆಯಲ್ಲಿ ಹಾಜರಾಗದ ಕಾರಣ ಸಭೆ ತಡವಾಗಿ ಆರಂಭವಾಯಿತು.

ಸದಸ್ಯರಾದ ಸುರೇಶ್ ನಾಯ್ಕ್, ಜಯಣ್ಣ ಪರಮೇಶ್ವರಪ್ಪ, ವಿಜಯಲಕ್ಷ್ಮಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ್ ಸಭೆಯಲ್ಲಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿ ಎಸ್ ಯಡಿಯೂರಪ್ಪರವರ ಕ್ಷೇತ್ರವಾಗಿದ್ದು  ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ರಸ್ತೆ ಚರಂಡಿ ಕುಡಿಯುವ ನೀರಿಗಾಗಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಅನೇಕ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ತಾಲೂಕಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಭೆಯನ್ನು ಕರೆಯಲಾಗುತ್ತದೆ ಅಧಿಕಾರಿಗಳು ಗೈರು ಆಗುವ ಮೂಲಕ ಮುಖ್ಯಮಂತ್ರಿ ಮೊಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಬಾರದೆ ಇರುವ ಕಾರಣಕ್ಕೆ ತಾ.ಪಂ ಇಓ ಪರಮೇಶ್ವರ್ ಅಧಿಕಾರಿಗಳ ಪರವಾಗಿ ಆಗಮಿಸಿದ ಸಿಬ್ಬಂಧಿಗಳಿಗೆ ಎಚ್ಚರಿಕೆ ನೀಡಿದ್ದು ಅಧಿಕಾರಿಗಳು ಗಂಭೀರ ಕಾರಣ ಇಲ್ಲದೇ ಸಭೆಗೆ ಗೈರು ಆಗಿರುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಮುಖ್ಯ ಅಧಿಕಾರಿಗಳನ್ನು ಕಳುಹಿಸದೇ ಸಿಬ್ಬಂಧಿಯನ್ನು ಕಳುಹಿಸಿದ ಕೆಲ ಅಧಿಕಾರಿಗಳೂ ಸೂಚನೆ ನೀಡಿದರು ಇನ್ನೂ ಮುಂದೆ ಈ ರೀತಿ ಮರಳುಕಳಿಸದಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದರು.

ಗದ್ದಲದ ನಡುವೆ ತಮಾಷೆ ಅಧಿಕಾರಿಗಳ ವಿರುದ್ದ ಕೂಗಾಡಿ ಸಭೆಯನ್ನು ಬಹಿಷ್ಕಾರಿಸಿ ಹೊರ ನಡೆಯುತ್ತಿದ್ದ ಮಾಜಿ ತಾ.ಪಂ ಅಧ್ಯಕ್ಷ ಹಾಲಿ ಸದಸ್ಯರಾದ ಪರಮೇಶ್ವರಪ್ಪ ಅವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ್ “ಮಾವ ಟೀ ಕುಡಿದು ಹೋಗು ಬಾ” ಟೀ ವೆಸ್ಟ್ ಆಗುತ್ತೆ ಎಂದು ಕಡೆದಿದ್ದು ಸಭೆಯಲ್ಲಿ ಗಂಭಿರವಾಗಿದ್ದ ಅಧಿಕಾರಿಗಳು ಎಲ್ಲಾ ಸದಸ್ಯರು ನಗುವಿನ ಕಾರಣವಾಯಿತ್ತು.

ಈ ಸಭೆಯಲ್ಲಿ ಅಧ್ಯಕ್ಷ ಶಂಭು ಆರ್ ಕೆ, ಉಪಾಧ್ಯಕ್ಷೆ ಪ್ರೇಮಾ ಲೋಕೇಶ್,ತಾ.ಪಂ ಸದಸ್ಯರಾದ ದ್ರಾಕ್ಷಯಣಮ್ಮ, ಗಾಯಿತ್ರಿಮ್ಮ,ಮಮತಾ, ವಿಯಜಲಕ್ಷ್ಮಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

News By: Raghu Shikari

Admin

Leave a Reply

Your email address will not be published. Required fields are marked *

error: Content is protected !!