ತಿರ್ಥಹಳ್ಳಿ :ದಟ್ಟ ಕಾಡಿನ ಆಗುಂಬೆ ಘಾಟಿನಲ್ಲಿ ಮಧ್ಯರಾತ್ರಿ ಒಂಟಿ ಮಗು ಪ್ರತ್ಯಕ್ಷ ಮುಂದೇನು ಆಯ್ತು ಗೋತ್ತ ಈ ಸ್ಟೋರಿ ಓದಿ..!

ತಿರ್ಥಹಳ್ಳಿ :ದಟ್ಟ ಕಾಡಿನ ಆಗುಂಬೆ ಘಾಟಿನಲ್ಲಿ ಮಧ್ಯರಾತ್ರಿ ಒಂಟಿ ಮಗು ಪ್ರತ್ಯಕ್ಷ ಮುಂದೇನು ಆಯ್ತು ಗೋತ್ತ ಈ ಸ್ಟೋರಿ ಓದಿ..!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ದಟ್ಟವಾದ ಕಾಡಿನ ನಡುವೆ ಘಾಟಿಯ ಏಳನೆಯ ತಿರುವಿನಲ್ಲಿ ಹೆಣ್ಣು ಮಗುವೊಂದು ಪತ್ತೆಯಾಗಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಆಗುಂಬೆ ಘಾಟಿಯಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ 7 ನೇ ತಿರುವಿನಲ್ಲಿ 5 ವರ್ಷದ ಹೆಣ್ಣು ಮಗು ಒಂದು ಅಳುತ್ತ ನಿಂತಿರುವುದನ್ನು ಮಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ ಕಾರಿನ ಕಾರು ಚಾಲಕ ನೋಡಿ ತಕ್ಷಣ ಇಳಿದು ಮಗುವನ್ನು ಕರೆದುಕೊಂಡು ಹೋಗಿ ಆಗುಂಬೆ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ.

ಮಗುವಿನ ಪೋಷಕರು ಯಾರು ಎಂದು ಪೋಲಿಸರು ಪತ್ತೆಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ  ಚಿಕ್ಕಮಂಗಳೂರು ಜಿಲ್ಲೆಯ ಎನ್ಆರ್ ಪುರ ಮೂಲದವರಾದ ಬೀನು ಎಂಬುವವರು ಕುಟುಂಬ ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು ಎನ್ನಲಾಗಿದೆ. ಪ್ರವಾಸದಿಂದ ವಾಪಾಸ್ಸು ಬರುವಾಗ ರಾತ್ರಿ ಸಮಯವಾಗಿದ್ದರಿಂದ ಗಾಡಿಯಲ್ಲಿ ಪೋಷಕರು ನಿದ್ರೆಗೆ ಜಾರಿದ್ದರು. ಹಿಂದಿನ ಡೋರ್ ಅಚಾನಕ್ ತೆರೆದಿದ್ದರಿಂದ ಮಗು ಏಳನೆಯ ಕ್ರಾಸ್ ನಲ್ಲಿ ಹೊರಗೆ ಬಿದ್ದಿದೆ.

ಆದರೆ ಪೋಷಕರು ನಿದ್ರೆಯಲ್ಲಿದ್ದರಿಂದ ಮಗು ಬಿದ್ದಿರುವುದು ತಿಳಿಯಲಿಲ್ಲ  ಗಾಡಿ ಹಾಗೆಯೇ ಮುಂದೆ ಚಲಿಸಿದೆ. ಆದರೆ ಎನ್ ಆರ್ ಪುರ ಹೋಗುವಾಗ ಮಾರ್ಗ ಮಧ್ಯೆ ಕೊಪ್ಪ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡ ಪೋಷಕರು ಮಗು ಆನ್ವಿ ಗಾಡಿಯಲ್ಲಿ ತಮ್ಮ ಜೊತೆ ಇಲ್ಲದಿರುವುದನ್ನು ಗಮನಿಸಿ ಗಾಬರಿಗೊಂಡು ತಕ್ಷಣ ಅದೆ ಮಾರ್ಗವಾಗಿ  ವಾಪಾಸು ಮಗುವನ್ನು ಹುಡುಕುತ್ತಾ ಬಂದಿದ್ದಾರೆ. ಬರುವಾಗ ಆಗುಂಬೆ ಫಾರೆಸ್ಟ್ ಗೇಟ್ನಲ್ಲಿ ಮಗು ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದೆ. ವಿಷಯ ತಿಳಿದ ಪೋಷಕರು  ಠಾಣೆಗೆ ತೆರಳಿದ್ದಾರೆ.

ಪೊಲೀಸರು ತಂದೆತಾಯಿಯರಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

News By: Raghu Shikari

Admin

Leave a Reply

Your email address will not be published. Required fields are marked *

error: Content is protected !!