ಶಿವಮೊಗ್ಗ : ಎಲ್ಲೆಂದರಲ್ಲಿ ಉಗುಳಿದ್ರೆ ಬಿಳುತ್ತೆ ದಂಡ…!
ಶಿವಮೊಗ್ಗ ಮಹಾನಗರ ಪಾಲಿಕೆ ಮಾಸ್ಕ್ ಹಾಕದೆ ಓಡಾಡುವವರಿಗೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗಿಯುವವರಿಗೆ ದಂಡ ವಿಧಿಸುತ್ತಿದೆ.
ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡದಂತೆ ತಡೆಯಲು ಜಿಲ್ಲಾಡಳಿತದಿಂದ ಕ್ರಮ ಕೈಗೊಂಡಿದ್ದು ಮಾಸ್ಕ್ ಹಾಕದೆ ಸಂಚರಿಸಿದರೆ 100 ರೂಪಾಯಿ ದಂಡ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವವರಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಅರೋಗ್ಯ ನಿರೀಕ್ಷಕರು ದಂಡ ವಿಧಿಸುತ್ತಿದ್ದು ಇಂದು ಬೆಳಗ್ಗಿನಿಂದ ದಂಡ ಹಾಕುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಮಧ್ಯಾಹ್ನದ ಬಳಿಕ ನಿರಂತರವಾಗಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲು ಮುಂದಾಗಿದ್ದು
ಕರೋನಾ ಲಾಕ್ ಡೌನ್ ನಡುವೆಯೂ ಬೀದಿಗಿಳಿಯುತ್ತಿರುವವರಿಗೆ ಬಿಸಿ ಮುಟ್ಟಿಸಲು ಈ ಕ್ರಮ ಇದಾಗಿದೆ.