ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸುಸ್ಥಿರ ಜೀವನೋಪಾಯಕ್ಕಾಗಿ ಹೈಟೆಕ್ ಅಣಬೆ ಉತ್ಪಾದನಾ ತಂತ್ರಜ್ಞಾನ ತರಬೇತಿಯನ್ನು ಶುಲ್ಕ ರೂ. 4000 ಹಾಗೂ ಬೇಕರಿ ಮತ್ತು ಮಿಠಾಯಿ (ಬಿಸ್ಕತ್‍ಗಳು ಮತ್ತು ಕೇಕ್‍ಗಳು) ತರಬೇತಿ ಶುಲ್ಕ ರೂ. 2000 ದಿನಾಂಕ 22-04-2024 ರಿಂದ 03-05-2024ರ ವರೆಗೆ 10 ದಿನಗಳ ಕೋರ್ಸ್‍ನ್ನು ಶಿವಮೊಗ್ಗದ ನವುಲೆಯ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಸಲಾಗುವುದು.

ನಿರ್ದಿಷ್ಟಪಡಿಸಿದ ವಿಷಯದ ಮೇಲೆ ಸಾಕ್ಷರತೆ ಮತ್ತು ಕನ್ನಡ ಅಥವಾ ಇಂಗ್ಲೀಷ್ ಜಾನ್ಞವನ್ನು ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ದಿನಾಂಕ 20-04-2024 ರೊಳಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ವಿಷಯ ನಿರ್ದೇಶಕಿ ಡಾ.ಸುಧಾರಾಣಿ ಎನ್, ಕೃಷಿ ವಿಜ್ಞಾನ ಕೇಂದ್ರ, ಮೊ.ಸಂ: 948202490, ಸಂಪರ್ಕಿಸಬಹುದೆಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

Admin

Leave a Reply

Your email address will not be published. Required fields are marked *

error: Content is protected !!