ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಬಳಿ ಎಷ್ಟು‌ ಕಾರು, ಆಸ್ತಿ‌,ಹಣ, ಸಾಲ ಇಲ್ಲಿದೆ ಮಾಹಿತಿ…!

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಬಳಿ ಎಷ್ಟು‌ ಕಾರು, ಆಸ್ತಿ‌,ಹಣ, ಸಾಲ ಇಲ್ಲಿದೆ ಮಾಹಿತಿ…!

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾ‌ರ್ 40.04 ಕೋಟಿ ರೂಪಾಯಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ.

ಪತಿ ಶಿವರಾಜ್ ಕುಮಾರ್ ಬಳಿ 49 ಕೋಟಿ ರೂ. ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ತಿಳಿಸಿದ್ದು ಪತಿ- ಪತ್ನಿ ಬಳಿ ಒಟ್ಟು 89.04 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಶಿವರಾಜ್‌ಕುಮಾರ್ ಅವರಿಗೆ 3 ಕೋಟಿ ರೂಪಾಯಿ ಸಾಲ, 13.6 ಕೋಟಿ ರೂಪಾಯಿ ಅಡ್ವಾನ್ಸ್ ಸೇರಿ ಒಟ್ಟು 17 ಕೋಟಿ ಇದೆ. ಗೀತಾ ಶಿವರಾಜ್‌ಕುಮಾ‌ರ್ ಅವರದ್ದು 7 ಕೋಟಿ ರೂಪಾಯಿ ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ವಾರ್ಷಿಕ ಆದಾಯ 1.48 ಕೋಟಿ ರೂಪಾಯಿ ಎಂದು ಗೀತಾ ಅವರು ಹೇಳಿದ್ದು, ಶಿವಣ್ಣ ಆದಾಯ 2.97 ಕೋಟಿ ರೂ. ಎಂದು ತಿಳಿಸಲಾಗಿದೆ. ಶಿವರಾಜ್ ಕುಮಾರ್ ಬಳಿ 22,58,338, ಪತ್ನಿ ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕೈಯಲ್ಲಿದೆ. ಯಾವುದೇ ಪ್ರಕರಣಗಳು ಇಲ್ಲ ಎಂದು ತಿಳಿಸಿದ್ದಾರೆ.

ಗೀತಾ ಅವರ ಬಳಿ 1.07 ಕೋಟಿ ರೂಪಾಯಿ ಟೊಯೋಟಾ ಹೈಬ್ರಿಡ್‌ ಕಾರು, ಶಿವರಾಜ್ ಕುಮಾರ್ ಬಳಿ ಒಂದು ಟೊಯೋಟಾ ಫಾರ್ಚುನ‌ರ್, ಮಾರುತಿ ಎರ್ಟಿಗಾ ಹಾಗೂ ವೋಲ್ಲೋ ಎಸ್90 ಕಾರಿದೆ. ಇವುಗಳ ಮೌಲ್ಯ ಒಟ್ಟು 87.70 ಲಕ್ಷ ಎಂದು ಗೀತಾ ಅವರು ದಾಖಲು ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಬಳಿ 5.54 ಕೋಟಿ ರೂಪಾಯಿ ಹಾಗೂ ನಟ ಶಿವರಾಜ್ ಕುಮಾರ್ 18 ಕೋಟಿ ರೂ. ಚರಾಸ್ತಿ ಇದೆ ಎಂದು ತಮ್ಮ ಅಫಿಡೆವಿಟ್‌ನಲ್ಲಿ ತಿಳಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!