ಹೊರಬಿದ್ದ ದ್ವಿತೀಯ ಪಿಯುಸಿ ಫಲಿತಾಂಶ/ ಮರುಪರೀಕ್ಷೆಗೆ ದಿನಾಂಕ ಪ್ರಕಟ

ಹೊರಬಿದ್ದ ದ್ವಿತೀಯ ಪಿಯುಸಿ ಫಲಿತಾಂಶ/ ಮರುಪರೀಕ್ಷೆಗೆ ದಿನಾಂಕ ಪ್ರಕಟ


ದ್ವಿತೀಯ ಪಿಯುಸಿ ಫಲಿತಾಂಶ ರಾಜ್ಯಾದ್ಯಂತ ಹೊರಬಿದ್ದಿದ್ದು, 81.15% ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ 6,98,378 ವಿದ್ಯಾರ್ಥಿಗಳಲ್ಲಿ 5,52,690 ವಿದ್ಯಾರ್ಥಿಗಳು ಪಾಸ್ ಆಗಿದ್ದು, 1,45,688 ವಿದ್ಯಾರ್ಥಿಗಳು ಅನ್ನುತ್ತೀರ್ಣರಾಗಿದ್ದಾರೆ. ಒಟ್ಟು 18.85% ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ


ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, ಅನ್ನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿದೆ. ಮರು ಪರೀಕ್ಷೆಗೆ ಹೆಸರು ನೋಂದಾವಣೆ ಮಾಡಲು 1 ವಾರಗಳ ಕಾಲಾವಕಾಶ ನೀಡಲಾಗಿದೆ.


ಏಪ್ರಿಲ್ 10 ರಿಂದ ಎಪ್ರಿಲ್ 16ರವೆಗೆ 1 ವಾರಗಳ ಕಾಲ ಹೆಸರು ನೋಂದಣಿಗೆ ಅವಕಾಶ ನೀಡಿದ್ದು ಅನ್ನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಕಾಲೇಜು ಅಥವಾ ಪರೀಕ್ಷಾ ಮಂಡಳಿಯ ಅಧಿಕೃತ ಪೋರ್ಟಲ್ https://karresults.nic.in/ ನಲ್ಲಿ ಹೆಸರು ನೋಂದಾವಣೆ ಮಾಡಬಹುದು.


ಪೂರಕ ಪರೀಕ್ಷೆ 1 ವಿಷಯಕ್ಕೆ 140 ರೂ. ಎರಡು ವಿಷಯಗಳಿಗೆ 270 ರೂ ಮತ್ತು 3 ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 400 ರೂ ಶುಲ್ಕ ಪಾವತಿಸಬೇಕು. ರೀ ವಾಲ್ಯೂವೇಷನ್ ಅರ್ಜಿ ಸಲ್ಲಿಸಲು ಇಚ್ಚಿಸುವವರು ಪ್ರತೀ ವಿಷಯಕ್ಕೆ 175 ರೂ ನಂತೆ ಶುಲ್ಕ ಪಾವತಿ ಮಾಡಬೇಕು ಎಂದು ಮಂಡಳಿ ತಿಳಿಸಿದೆ

Admin

Leave a Reply

Your email address will not be published. Required fields are marked *

error: Content is protected !!