ಶಿಕಾರಿಪುರದಲ್ಲಿ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಮಧು ಬಂಗಾರಪ್ಪ, ಬಿವೈ ವಿಜಯೇಂದ್ರ ಬಿವೈ ರಾಘವೇಂದ್ರ..!

ಶಿಕಾರಿಪುರ ತಾಲೂಕಿನಲ್ಲಿ ಒಂದೇ ವೇದಿಕೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಮಧು ಬಂಗಾರಪ್ಪ, ಬಿವೈ ರಾಘವೇಂದ್ರ ,ಬಿವೈ ವಿಜಯೇಂದ್ರ

ಶಿಕಾರಿಪುರ ತಾಲೂಕಿನ ಕಾಳೆನಹಳ್ಳಿಯ ಶಿವಯೋಗ ಮಂದಿರ ದಲ್ಲಿ ನಡೆದ ಶ್ರೀ ರುದ್ರಮುನಿ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿವೈ ರಾಘವೇಂದ್ರ , ಶಾಸಕ ಬಿವೈ ವಿಜಯೇಂದ್ರ ಚುನಾವಣೆ ನಂತರ ಇದೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಪಕ್ಷದ ಕಾರ್ಯಕ್ರಮ ಹೊರತು ಪಡಿಸಿ ಇದೆ ಮೊದಲ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಆಗಮಿಸಿದ್ದು ವೇದಿಕೆಯಲ್ಲಿ ಎಸ್ ಪಿ ನಾಗರಾಜ್ ಗೌಡ ಸೇರಿ ಅನೇಕ ಮುಖಂಡರು ಸ್ವಾಮಿಜಿಗಳು ಇದ್ದರು .
News by:Raghu shikari-7411515737