ಮಕ್ಕಳಿಗೆ ವಿದ್ಯಾಬ್ಯಾಸ ಕೊಡುವುದೇ ದೇವರ ಕೆಲಸ: ಸಚಿವ ಮಧು ಬಂಗಾರಪ್ಪ..!

ಶಿಕಾರಿಪುರ ತಾಲೂಕಿನ ಕಾಳೆನಹಳ್ಳಿ ಶಿವಯೋಗಾಶ್ರಮದಲ್ಲಿ ನಡೆದ ಶ್ರೀ ಲಿ.ರುದ್ರಮುನಿ ಮಹಾಸ್ವಾಮಿಜೀಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಧಾನಸೌಧದಲ್ಲಿ ಬರೆಯಲಾಗಿದೆ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಅದರೆ ನಿಜವಾಗಿಯೂ ಮಕ್ಕಳಿಗೆ ಶಿಕ್ಷಣ ನೀಡುವುದು ದೇವರ ಕೆಲಸ ಎಂದರು.

ಮಠಗಳು ಇದ್ದರೆ ಸಮೃದ್ಧಿ ಧಾರ್ಮಿಕ ಪ್ರಜ್ಞೆ ಬರುತ್ತದೆ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವಲ್ಲಿ ಮಠಗಳು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಮಠಗಳ ಶಿಕ್ಷಣ ನೀತಿ ಇಲಾಖೆ ಮಾದರಿ ಆಗಿದೆ ಎಂದರು.

ರಾಜ್ಯಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪ ಯಡಿಯೂರಪ್ಪನವರ ಮಹತ್ವದ ಕೊಡುಗೆ ಇದೆ ಇಬ್ಬರು ರಾಜಕೀಯವಾಗಿ ಸಿದ್ದಾಂತ ಬೇರೆ ಇದ್ದರೂ ಅಭಿವೃದ್ದಿ ವಿಷಯದಲ್ಲಿ ಇಬ್ಬರು ಒಂದೇ ಎಂದರು

ಶ್ರೀ ಕಾಳೆನಹಳ್ಳಿ ಕ್ಷೇತ್ರಕ್ಕೆ ನಾನು ಭಕ್ತನಾಗಿ ಇಂದಿನಿಂದ ಕ್ಷೇತ್ರದ ಯಾವುದೇ ಸೇವೆ ಇದ್ದರು ಶ್ರದ್ದಭಕ್ತಿಯಿಂದ ಮಾಡುತ್ತೇನೆ ಎಂದರು.

ಈ ವೇಳೆ ಮೂರುಸಾವಿರ ಮಢದ ಶ್ರೀಗಳು ಮಹಾಂತಸ್ವಾಮಿಜೀ,ಡಾ.ಸಿದ್ದಲಿಂಗ ಸ್ವಾಮಿಜಿ ಸಂಸದ ಬಿವೈ ರಾಘವೇಂದ್ರ,ಶಾಸಕ ಬಿವೈ ವಿಜಯೇಂದ್ರ ಎನ್ ವಿ ಈರೇಶ್ ಎಸ್ ಪಿ ನಾಗರಾಜ್ ಗೌಡ ಮತ್ತಿತ್ತರು ಇದ್ದರು.
News By: Raghu Shikari-7411515737