ಕಾಳೆನಹಳ್ಳಿಯ ಶ್ರೀ ರುದ್ರಮುನಿ ಮಹಾಸ್ವಾಮೀಜಿಗಳ ಪುಣ್ಯಾರಾಧನೆ ಕಾರ್ಯಕ್ರಮ

ಕಾಳೆನಹಳ್ಳಿಯ ಶ್ರೀ ರುದ್ರಮುನಿ ಮಹಾಸ್ವಾಮೀಜಿಗಳ ಪುಣ್ಯಾರಾಧನೆ ಕಾರ್ಯಕ್ರಮ

ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯ ಶಿವಯೋಗಾಶ್ರಮದಲ್ಲಿ ಶನಿವಾರ ಶತಾಯುಷಿ ಕಾಯಕಯೋಗಿ ಪೂಜ್ಯ ಲಿಂಗೈಕ ರುದ್ರಮುನಿ ಮಹಾಸ್ವಾಮೀಜಿಗಳ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ ಎಂದು ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎನ್ ವಿ ಈರೇಶ್ ಮಾಹಿತಿ ನೀಡಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶ್ರೀ ರುದ್ರಮುನಿ ಮಹಾಸ್ವಾಮಿಗಳ 35ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಕಾಳೆನಹಳ್ಳಿ ಶಿವ ಯೋಗ ಮಂದಿರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಹಾರಾಜ ನಿರಂಜನ ಜಗದ್ಗುರು, ಡಾ. ಗುರು ಸಿದ್ದರಾಜ ಯೋಗೇಂದ್ರ ಮಹಾಸಂಸ್ಥಾನ 3000 ಮಠ ಹುಬ್ಬಳ್ಳಿ ಹಾಗೂ ದಿವ್ಯ ಸಮ್ಮುಖ ಸದಾಶಿವ ಮಹಾಸ್ವಾಮೀಜಿ ಮಹಾಸಂಸ್ಥಾನ ಉಕ್ಕೇರಿ ಮಠ ಪ್ರವಚನ ಕಾರ್ಯಕ್ರಮವನ್ನು ನಾಡಿನ ಪ್ರಖ್ಯಾತ ಪ್ರವಚನ ಯೋಗಿ ಪೂಜ್ಯ ಮಹಂತ ಸ್ವಾಮೀಜಿಯವರು ಮುದುಗಲ್ ಕಲ್ಯಾಣ ಆಶ್ರಮ ತಿಮ್ಮಾಪುರ, ಧ್ವಜಾರೋಹಣ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಯವರು ಗುರು ನಂಜೇಶ್ವರ ಮಠ ಕೂಡಲ ಇವರು ವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನೆರವೇರಿಸಲಿದ್ದು ಈ ವೇಳೆ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಗೌರವ ಪೂರ್ವಕ ಸನ್ಮಾನವನ್ನು ನಡೆಸಲಾಗುವುದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಳೇನಹಳ್ಳಿ ಶಿವಯೋಗಾಶ್ರಮದ ಕಾರ್ಯಧ್ಯಕ್ಷರಾದ ಮತ್ತು ಸಂಸದರಾದ ಬಿ ವೈ ರಾಘವೇಂದ್ರ ಅವರು ವಹಿಸಲಿದ್ದು ಕಾರ್ಯಕ್ರಮದ ಆಶಯ ನುಡಿಯನ್ನು ಶಾಸಕ ಬಿ ವೈ ವಿಜಯೇಂದ್ರ ನಡೆಸಲಿದ್ದಾರೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಅವರು ಉಪಸ್ಥಿತರಿಲ್ಲರಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಳೇನಹಳ್ಳಿ ಕಪ್ಪನಹಳ್ಳಿ ಕೊಟ್ಟ ಹಾಗೂ ಶಿವಯೋಗಾಶ್ರಮದ ಭಕ್ತರಂದದವರು ಉಪಸ್ಥಿತರಿರಲಿದ್ದಾರೆ ವಿಶೇಷವಾಗಿ ಕಲಬುರ್ಗಿಯ ಕುರಿಕೋಟ ಮಠದ ಭಕ್ತವೃಂದದವರು ಪ್ರಸಾದ ಸೇವೆ ವಹಿಸಿಕೊಂಡಿದ್ದು ಉತ್ತರ ಕರ್ನಾಟಕ ಶೈಲಿಯ ಅಡುಗೆ ಪದಾರ್ಥವನ್ನು ತಯಾರಿಸಲಿದ್ದಾರೆ ವಿಶೇಷವಾಗಿ ಪ್ರಖ್ಯಾತಿ ಪಡೆದಿರುವ ಮಂಡಕ್ಕಿ ಕೂಡ ಭಕ್ತರಿಗೆ ಪ್ರಸಾದ ಸೇವೆಯನ್ನು ನೀಡಲಾಗುತ್ತದೆ ಸರ್ವ ಭಕ್ತಾದಿಗಳು ಆಗಮಿಸಿ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀಮಠದ ಪರವಾಗಿ ಸರ್ವರನ್ನು ಸ್ವಾಗತಿಸಿದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!