ಮಹರ್ಷಿ ವಾಲ್ಮಿಕಿ ರಾಮಾಯಣ ನಮ್ಮ ಬದುಕಿಗೆ ದಾರಿದೀಪ: ಶಾಸಕ ಬಿವೈ ವಿಜಯೇಂದ್ರ

ಶಿಕಾರಿಪುರ: ಪಟ್ಟಣದ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮವನ್ನು ತಾಲೂಕ್ ಆಡಳಿತ ವತಿಯಿಂದ ನಡೆಸಲಾಯಿತು

ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಬಿವೈ ವಿಜಯೇಂದ್ರ ಮಾತನಾಡಿ ರಾಮಾಯಣ ನಮ್ಮ ಬದುಕಿಗೆ ದಾರಿ ದೀಪವಾಗಿದೆ ಮಹರ್ಷಿಗಳು ಒಬ್ಬ ಋಷಿಯಾಗಿ ಮಹಾಕವಿಯಾಗಿ ದಾರ್ಶನಿಕರಾಗಿ ಗುರುತಿಸಿಕೊಂಡವರು ಮಹರ್ಷಿ ವಾಲ್ಮಿಕಿ ಅವರು ಸೂರ್ಯ ಚಂದ್ರ ಇರುವ ವರೆಗೂ ಅವರ ಹೆಸರು ಉಳಿಯಲಿದೆ.

ಕರ್ನಾಟಕದ ಮಹಾ ನಾಯಕ ಮದಕರಿ ನಾಯಕ ಕನ್ನಡ ನಾಡನ್ನು ಉಳಿಸಲು ಹೋರಾಡಿದ ವೀರ ಶ್ರೇಷ್ಠ ನಾಯಕರನ್ನು ಕೊಟ್ಟಿರುವ ಕೀರ್ತಿ ವಾಲ್ಮಿಕಿ ನಾಯಕ ಸಮಾಜಕ್ಕೆ ಸಲ್ಲುತ್ತದೆ.
ವಾಲ್ಮಿಕಿ ಜಯಂತಿ ಆಚರಣೆಯನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಜಾರಿಗೆ ತಂದರು ನಮ್ಮ ಸರ್ಕಾರದ ಅವಧಿಯಲ್ಲಿ ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ ಸರ್ವ ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಾಲ್ಮಿಕಿ ಸಮಾಜದ ಅಧ್ಯಕ್ಷರಾದ ಹನುಮಂತಪ್ಪ, ತಹಶಿಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಇಓ ಪರಮೇಶ್ವರ, ಮುಖ್ಯಾಧಿಕಾರಿ ಭರತ್, ಉಪನ್ಯಾಸ ಸತೀಶ್, ಇದ್ದರು.
News By: Raghu Shikari-7411515737