ಪುಣೆದಹಳ್ಳಿಯಲ್ಲಿ ಗಣಪತಿ ಮೆರವಣಿಗೆ ನಿಲ್ಲಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದು ಯಾಕೆ ..?

ಪುಣೆದಹಳ್ಳಿಯಲ್ಲಿ ಗಣಪತಿ ಮೆರವಣಿಗೆ ನಿಲ್ಲಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದು ಯಾಕೆ ..?

ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮೇರವಣಿಗೆ ನಡೆಯುತ್ತಿದ್ದು
ಈ ವೇಳೆ ಪೋಲಿಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುಗೆ ವಾಗ್ವಾದ ನಡೆದಿದೆ.

ದೇವಸ್ಥಾನ – ಮಸೀದಿ ಎರಡು ಮುಖಾಮುಖಿ ಇದ್ದು ಮಸೀದಿ ಇರುವ ಕಾರಣಕ್ಕೆ ಪಟಾಕಿಗೆ ಡಿವೈಎಸ್ ಪಿ ಶಿವಾನಂದ ಅನುಮತಿ ನಿರಾಕರಿಸಿದ್ದಾರೆ.
ಈ ವೇಳೆ ಹಿಂದೂ ಜಾಗರಣಾ ವೇದಿಕೆ‌ ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರ ಪ್ರತಿಭಟನೆ ನಡು ರಾತ್ರಿಯಲ್ಲಿ ಪ್ರತಿಭಟನೆ ಕುಳಿತಿದ್ದಾರೆ.

ಪ್ರತಿಭಟನೆಯಲ್ಲಿ ಊರಿನ ಯುವಕರು ಮಹಿಳೆಯರು ಭಾಗಿಯಾಗಿದ್ದು ಪಟಾಕಿ ಹೊಡೆಯಲು ಅನುಮತಿ ನೀಡುವ ವರೆಗೂ ಧರಣಿ ನಡೆಸುವುದಾಗಿ ರಸ್ತೆಯಲ್ಲಿ ಗಣಪತಿ ಮೆರವಣಿಗೆ‌ ಸ್ಥಗಿತಗೊಳಿಸಿ ಧರಣಿ ಕುಳಿತಿದ್ದಾರೆ.

ಈ ವೇಳೆ ಪೋಲಿಸರು ಯುವಕರ ನಡುವೆ ಕಾನೂನು ಅನುಮತಿ ಕುರಿತು ವಾಗ್ವಾದ ನಡೆಡಿದೆ.‌

Admin

Leave a Reply

Your email address will not be published. Required fields are marked *

error: Content is protected !!