ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ವಿರುದ್ಧ ಅವಿಶ್ವಾಸ ಪ್ರಭಾರಿ ಅಧ್ಯಕ್ಷರಾಗಿ ಷಡಕ್ಷರಿ..!
ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಆಗಿದ್ದು, 9 ನಿರ್ದೇಶಕರ ಬೆಂಬಲದೊಂದಿಗೆ ಮತ್ತೆ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಡಾ. ಆರ್.ಎಂ. ಮಂಜುನಾಥ ಗೌಡ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪರವಾಗಿ 9 ಮತಗಳೊಂದಿಗೆ, ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕಿದೆ.
ಉಪಾಧ್ಯಕ್ಷರಾಗಿದ್ದ ಷಡಕ್ಷರಿ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 13 ಸದಸ್ಯರಿದ್ದು ಈಗ ಗೌಡರ ಪಾಳಯ ಅಧಿಕಾರ ಹಿಡಿದಿದೆ.
ಚುನಾವಣೆ ಅಧಿಕಾರಿಯಾಗಿ ಜೆಸಿ ವೆಂಕಟಾಚಲಪತಿ ನೇತೃತ್ವದಲ್ಲಿ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. 9 ಜನ ಅವಿಶ್ವಾಸನಿರ್ಣಯದ ಪರ ಆದರೆ, ವಿರುದ್ಧ 3ಮತ ಚಲಾವಣೆ ಆಗಿದೆ.
ಷಡಾಕ್ಷರಿ, ದುಗ್ಗಪ್ಪಗೌಡ ವಿಜಯದೇವ್, ಯೋಗೀಶ್, ವೆಂಕಟೇಶ್, ಎಂ ಎಂ ಪರಮೇಶ್, ಸುಧೀರ್, ಎಸ್ಪಿ ದಿನೇಶ್, ಶ್ರೀಪಾದ್ ಸೇರಿ 9 ಜನ ಅವಿಶ್ವಾಸದ ಪರ ಮತ ಹಾಕಿದ್ದಾರೆ. ಅವಿಶ್ವಾಸ ಪರವಾಗಿ ಭೂಕಾಂತ್ ಚನ್ನವೀರಪ್ಪ, ಅಗಡಿ ಅಶೋಕ್ ಮತಚಲಾಯಿಸಿರುವುದಾಗಿ ತಿಳಿದು ಬಂದಿದೆ.
ಒಂದು ಮುಚ್ಚಿದ ಲಕೋಟೆಯಲ್ಲಿಡಲಾಗಿದೆ. ಒಟ್ಟು ಚುನಾಯಿತ ನಿರ್ದೇಶಕರು 13 ಜನ ಇದ್ದು ಇದರಲ್ಲಿ 9 ಜನ ಅವಿಶ್ವಾಸ ನಿರ್ಣಯದ ಪರ ಮತಚಲಾವಣೆ ಆಗಿದೆ. ಹೈಕೋರ್ಟ್ ಆದೇಶದ ಮೇರೆಗೆ ನಾಮನಿರ್ದೇಶಿತರ ಮತವನ್ನೂ ಪರಿಗಣಿಸಬೇಕೆಂಬ ನ್ಯಾಯಾಲಯದ ಆದೇಶದ ಪರ ಮುಚ್ಚಿದ ಲಕೋಟೆಯಲ್ಲಿ ಚಲಾವಣೆ ಮಾಡಲಾಗಿದೆ.
8 ಕ್ಕೂ ಹೆಚ್ಚು ಮತ ಅವಿಶ್ವಾಸ ಮತದ ಪರವಾಗಿ ಚಲಾವಣೆಯಾದ ಕಾರಣ ಮುಚ್ಚಿದ ಲಕೋಟೆಯ ಮತದಾನ ಲೆಕ್ಕಕ್ಕೆ ಬಾರದಂತಾಗಿದೆ. ಅವಿಶ್ವಾಸ ನಿರ್ಣಯಕ್ಕೆ ಜಯದೊರೆತಿದೆ. ಸಧ್ಯಕ್ಕೆ ಡಿಸಿಸಿ ಬ್ಯಾಕ್ ನ ಪ್ರಭಾರಿ ಅಧ್ಯಕ್ಷರಾಗಿ ಷಡಾಕ್ಷರಿ ಆಯ್ಕೆಯಾಗಿದ್ದಾರೆ.