ಮಣಿಪುರದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಶನ್ ಪ್ರತಿಭಟನೆ..!
ಶಿರಾಳಕೊಪ್ಪ: ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಹಾಗೂ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಅಮಾನವೀಯ, ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಕೃತ್ಯ ಎಂದು ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಶನ್ ಆಫ್ ಇಂಡಿಯಾ ವತಿಯಿಂದ ಪ್ರತಿಟನೆ ನಡೆಸಿದ್ದರು.
ಶಿರಾಳಕೊಪ್ಪ ಪಟ್ಟಣದ ಪತ್ರಿಭಟನಾ ಮೆರವಣಿಗೆ ನಡೆಸಿ ಈ ವೇಳೆ ಮಾತನಾಡಿದ ಅತೀಕ್ಉಲ್ ರೆಹಮನ್ ಕುಕ್ಕಿ ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳಿಗೆ ಅಗಿರುವ ಅವಮಾನ, ನೋವು ಮಾನಸಿಕ ಆಘಾತವನ್ನು ಊಹಿಸಲೂ ಸಾಧ್ಯವಿಲ್ಲ, ಈ ಕೃತ್ಯ ಗುಜರಾತ್, ಕೈರ್ಲಾಂಜಿ, ಹತ್ರಾಸ್, ಕುನನ್ ಪೋಶ್ಮೀರ ಮುಂತಾದ ಹೇಯ ಘಟನೆಗಳ ಮುಂದುವರಿದ ಭಾಗವಾಗಿದೆ ಮಣಿಪುರದಲ್ಲಿ ಸಂಘರ್ಷ ಆರಂಭಗೊಂಡು ಮೂರು ತಿಂಗಳಾಗಿದ್ದರೂ ಆಡಳಿತ ವ್ಯವಸ್ಥೆ ಕ್ರಮಕ್ಕೆ ಮುಂದಾಗದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.
ಸಂಘರ್ಷವನ್ನು ನಿಯಂತ್ರಣಕ್ಕೆ ತಂದು ಮಹಿಳೆಯರು ಹಾಗೂ ಮಕ್ಕಳು ನೆಮ್ಮದಿಯಿಂದ ಜೀವನ ನಡೆಸುವ ವ್ಯವಸ್ಥೆ ಸೃಷ್ಟಿಯಾಗಬೇಕಾಗಿದೆ ಮಣಿಪುರ ಕಳೆದೆರಡು ತಿಂಗಳು ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿಯ ಗಾಢ ಮೌನವೇ ಈ ಪರಿಸ್ಥಿತಿಗೆ ಕಾರಣ, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗದಿರುತ್ತಿದ್ದರೆ ಪ್ರಧಾನಿ ಈಗಲೂ ತಮ್ಮ ಜಾಣ ಮೌನವನ್ನು ಮುಂದುವರಿಸುತ್ತಿದ್ದಾರೆ
ಮಣಿಪುರದಲ್ಲಿ ಮೊದಲು ಶಾಂತಿ ಮರು ಸ್ಥಾಪಿಸಬೇಕು, ಮಹಿಳೆಯರ ಘನತೆಯನ್ನು ಕೇವಲ ಘೋಷಣೆಗಳಿಂದ ಕಾಪಾಡಲು ಸಾಧ್ಯವಿಲ್ಲ. ಇಡೀ ಸಂಘರ್ಷದ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಈ ಮೂಲಕ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಶನ್ ಒತ್ತಾಸಿದ್ದರು.
News By: Raghu Shikari-7411515737