ಶಿಕಾರಿಪುರ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿಗೆ ಜುಡೋ ಪಂದ್ಯಾವಳಿಯಲ್ಲಿ ಚಾಂಪಿಯನ್‌ಶಿಪ್..!

ಶಿಕಾರಿಪುರ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿಗೆ ಜುಡೋ ಪಂದ್ಯಾವಳಿಯಲ್ಲಿ ಚಾಂಪಿಯನ್‌ಶಿಪ್..!

ಶಿಕಾರಿಪುರ : ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನ ಆವರಣದಲ್ಲಿ ಶನಿವಾರ ಕುವೆಂಪು ವಿಶ್ವವಿದ್ಯಾಲಯದ ಅಂತರ್‌ ಕಾಲೇಜು ಜುಡೋ ಪಂದ್ಯಾವಳಿಯನ್ನು ಕುವೆಂಪು ವಿಶ್ವವಿದ್ಯಾಲಯ ದೈಹಿಕ‌ ನಿರ್ದೇಶಕರಾದ ಪ್ರೋ.ವಿರೂಪಾಕ್ಷ ಉದ್ಘಾಟಿಸಿದರು.

ಈ ವೇಳೆ ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕ್ರೀಡಾ ವಿದ್ಯಾರ್ಥಿಗಳು ಎರಡು ಬಂಗಾರದ ಪದಕ ಹಾಗೂ ಎರಡು ಬೆಳ್ಳಿಯ ಪದಕ ಪಡೆಯುವ ಮೂಲಕ ಕುವೆಂಪು ವಿವಿ ಅಂತರ ಕಾಲೇಜು ಜೂಡೋ ಪಂದ್ಯಾವಳಿಯ ಚಾಂಪಿಯನ್ ಪದವಿ ಪಡೆದಿದ್ದಾರೆ‌.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ
ಡಾ.ಅನಿಲ್ ಕುಮಾರ್ ಎ ಬಿ, ತೀರ್ಪುಗಾರರಾದ ಮಿಥುನ್, ಡಾ.ಕುಂಸಿ ಉಮೇಶ್,ಉಪನ್ಯಾಸರಾದ ಪ್ರೋ.ವಿನಯ್ ಕುಮಾರ್, ವಿವಿಧ ಕಾಲೇಜುಗಳ ದೈಹಿಕ ನಿರ್ದೇಶಕರು ವಿದ್ಯಾರ್ಥಿಗಳು ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!