ಶಿಕಾರಿಪುರ ಪಟ್ಟಣ ಸ್ವಯಂ ಪ್ರೇರಿತ ಬಂದ್ ಯಶಸ್ವಿ..!
ಶಿಕಾರಿಪುರ: ಹಿಂದೂ ಸಮಾಜದ ಮೇಲೆ ನಡೆಯುತ್ತಿರು ದೌರ್ಜನ್ಯ ಖಂಡಿಸಿ ಜಾಗೃತ ನಾಗರೀಕ ವೇದಿಕೆ ಕರೆಗೆ ಶಿಕಾರಿಪುರ ಪಟ್ಟಣದ ವ್ಯಾಪಾರಿಗಳು ಸಾರ್ವಜನಿಕರು ಬೆಂಬಲ ನೀಡಿದ್ದು ಸ್ಬಯಂ ಪ್ರೇರಿತ ಬಂದ್ ಯಶಸ್ವಿಯಾಗಿದೆ.
ಇತ್ತೀಚಿಗೆ ತಾಲೂಕಿನ ಮಳಲಿಕೊಪ್ಪ ಗ್ರಾಮದ ಬಳಿ ಆಕ್ರಮ ಗೋಮಾಂಸ ಮತ್ತು ಚರ್ಮದ ಸಾಗಾಣಿಕೆ ವಿಚಾರ ಎರಡು ಕೋಮುಗಳ ನಡುವೆ ಗದ್ದಲ ಶುರುವಾಗಿದ್ದು ಪೋಲಿಸ್ ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ವಿಷಯ ಎರಡು ಎಫ್ ಐಆರ್ ದಾಖಲಾಗಿತ್ತು.
ಈ ವಿಷಯವಾಗಿ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸಲು ಜಾಗೃತ ನಾಗರೀಕ ವೇದಿಕೆ ಗೋ ಹತ್ಯೆ- ಹಿಂದುಗಳ ಮೇಲೆ ಹಲ್ಲೆ ಸುಳ್ಳು ಕೇಸ್ ದಾಖಲು ಖಂಡಿಸಿ ಸ್ವಯಂ ಪ್ರೇರಿತ ಬಂದ್ ಮತ್ತು ಪ್ರತಿಭಟನೆಗೆ ಕರೆ ನೀಡಿದ್ದರು.
ಶಿಕಾರಿಪುರದಲ್ಲಿ ಸ್ವಯಂ ಪ್ರೇರಿತ ಬಂದ್ ಕರೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಪಟ್ಟಣದ ಅಂಗಡಿ ಮುಂಗಟ್ಟುಗಳು ತೆರೆಯದೆ ಬೆಂಬಲ ಸೂಚಿಸಿದ್ದಾರೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಸರಿ ಶಾಲು ಬಾವುಟ ಗಳ ಮೂಲಕ ಬಸ್ ನಿಲ್ದಾಣದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ ಸಾಗಿ ಸಾಂಸ್ಕೃತಿಕ ಭವನದಲ್ಲಿ ಜಾಗೃತ ಸಭೆ ನಡೆಸಲಾಯಿತು.
ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಸಮಾಜದ ಯುವಕರು ವಿವಿಧ ಸಮುದಾಯದ ಮುಖಂಡರು ಹಿಂದು ಪರ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
News by: Raghu Shikari-7411515737