ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ ಬಿಲಾಲ್ ಸಾಮಿಲ್ ನಲ್ಲಿ ವಧೆ ಮಾಡಲು ತಂದಿದ ಒಂಟೆ ವಶ ..!

ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ ಬಿಲಾಲ್ ಸಾಮಿಲ್ ನಲ್ಲಿ ವಧೆ ಮಾಡಲು ತಂದಿದ ಒಂಟೆ ವಶ ..!

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಇರುವ ಬಿಲಾಲ್ ಎಂಬುವ ವ್ಯಕ್ತಿಗೆ ಸೇರಿದ ರೆಹಮಾನಿಯಾ ಸಾಮೀಲ್ ನಲ್ಲಿ ಒಂಟೆ ಪತ್ತೆಯಾಗಿದೆ.

ಬಕ್ರಿದ್ ಹಬ್ಬಕ್ಕೆ ಒಂಟೆಯನ್ನು ವಧೆ ಮಾಡುವ ಉದ್ದೇಶದಿಂದ ಒಂಟೆಯನ್ನು ಆಕ್ರಮವಾಗಿ ತಂದು ಇಡಲಾಗಿತ್ತು ಈ ಕುರಿತು ಗೌಜ್ಞಾನ್ ಪೌಂಡೆಷನ್ ನ ಸಂಜಯ್ ಕುಲಕರ್ಣಿ ಅವರು ಆನ್ಲೈನ್ ನಲ್ಲಿ ನೀಡಿದ ದೂರಿನ‌ ಮೇರೆಗೆ ಶಿರಾಳಕೊಪ್ಪ ಪಟ್ಟಣ ಪೋಲಿಸರು ದಾಳಿ ನಡೆಸಿ ಒಂಟೆಯನ್ನು ರಕ್ಷಿಸಿದ್ದಾರೆ.

ಬಿಲಾಲ್‌ ಎಂಬ ವ್ಯಕ್ತಿ ಈ‌ ರೀತಿ ಈ ಹಿಂದೆ ಆಕ್ರಮವಾಗಿ ಜಿಂಕೆ ಮರಿಯನ್ನು ತನ್ನ ಶಾಮಿಲ್‌ ನಲ್ಲಿ ಕಟ್ಟಿ ಹಾಕಿದ ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು ಮತ್ತೆ‌ ಒಂಟಿಯನ್ನು ತಂದು ಶಾಮಿಲ್‌ ನಲ್ಲಿ ಆಕ್ರಮವಾಗಿ ಇಡಲಾಗಿದೆ.

ಬಿಲಾಲ್ ಖಾನ್ ಶಿರಾಳ್ಕೊಪ್ಪ ಪಟ್ಟಣದಲ್ಲಿ ಪ್ರತಿ ವರ್ಷ ಬಕ್ರೀದ್ ಹಬ್ಬದ ಸಮಯದಲ್ಲಿ ಒಂಟೆಯನ್ನು ವದೆ ಮಾಡಿ ಅದರ ಮಾಂಸವನ್ನು ತಮ್ಮ ಬಾಂಧವರಿಗೆ ಹಂಚುತ್ತಾನೆ ಎಂಬುದಾಗಿ ತಿಳಿದು ಬಂದಿರುತ್ತದೆ.

ಶಿರಾಳ್ಕೊಪ್ಪ ಪೊಲೀಸ್ ಠಾಣೆ ಗುನ್ನೆ ನಂ 147/23 ಕಲಂ 11 prevention of cruelty to animals act.1960 ರೀತಿಯ ಪ್ರಕರಣ ದಾಖಲಿಸಿರುತ್ತಾರೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!