ಶಿಕಾರಿಪುರ ಅರಣ್ಯ ಕಛೇರಿ ಎದುರು ಬೆಳ್ಳಂಬೆಳಗ್ಗೆ ಬಿಜೆಪಿ ಪ್ರತಿಭಟನೆ..!

ಶಿಕಾರಿಪುರ ಅರಣ್ಯ ಕಛೇರಿ ಎದುರು ಬೆಳ್ಳಂಬೆಳಗ್ಗೆ ಬಿಜೆಪಿ ಪ್ರತಿಭಟನೆ..!

ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನ ರಥ ನಿರ್ಮಾಣಕ್ಕೆ ಮರ ಕಡಿಯಲು ಅನುಮತಿ ಕೇಳಿದರು 1 ವರ್ಷದಿಂದ ಅನುಮತಿ ನೀಡಿದ್ದಾರೆ ಆದರೆ ವರ್ಗಾವಣೆ ಪಾರ್ಮಿಟ್ ಅನುಮತಿ ನೀಡಿಲ್ಲ.

ಪಾರ್ಮೀಟ್ ಗಾಗಿ ಅಲೆದಾಡಿದರು ಅನುಮತಿ ನೀಡಿಲ್ಲ ಮಳೆಗಾಲ ಆರಂಭವಾಗಿದ್ದು ಮರಗಳು ಹಾಳಗುತ್ತದೆ ಎಂದು ದೇವಸ್ಥಾನ ಸಮಿತಿಯವರು ಮರಗಳನ್ನು ತೆಗೆದುಕೊಂಡು ಹೊಗುವ ವೇಳೆ ಅರಣ್ಯ ಅಧಿಕಾರಗಳು ದಾಳಿ ನಡೆಸಿ ದೇವಸ್ಥಾನ ಸಮಿತಿ ಅಧ್ಯಕ್ಷ ಪದಾಧಿಕಾರಿಗಳ‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಎಂಐಡಿಬಿ ಮಾಜಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಮಾತನಾಡಿ ಮರ ಕಡಿದು ವರ್ಗಾವಣೆ ಮಾಡಲು ಮುಂದಾದಗ ಅರಣ್ಯ ಅಧಿಕಾರಿಗಳು ಏಕ ಏಕಿ ಸುರಗಿಹಳ್ಳಿ ಗ್ರಾಮಸ್ಥರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಇದು ಆಡಳಿತ ಪಕ್ಷದ ಚಿತಾವಣೆ ಮೇಲೆ ಹಲ್ಲೆ ಮಾಡಿದ್ದಾರೆ ಕೂಡಲೇ ತನಿಖೆ ಆಗಬೇಕು ಹಲ್ಲೆ ಮಾಡಿದ ಅಧಿಕಾರಿಗಳನ್ನು ಅಮಾನತ್ತು ಮಾಡಲು ಒತ್ತಾಯಿಸಿದರು‌.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದೌರ್ಜನ್ಯ ಎಸಗಿರುವ ಅಧಿಕಾರಿಗಳ ಮೇಲೆ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಅಲ್ಲಿಯವರೆಗೆ ಪತ್ರಿಭಟನಾ ಧರಣಿ ನಡೆಸಲಾಗುವುದು ಎಂದರು.

ಈ ವೇಳೆ ತಾಲೂಕು ಬಿಜೆಪಿ ಮುಖಂಡರು ಕಾರ್ಯಕರ್ತರು ಸುರಗಿಹಳ್ಳಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!