ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೊಗುತ್ತೇನೆ:ನೂತನ ಶಾಸಕ ಬಿ ವೈ ವಿಜಯೇಂದ್ರ

ಶಿಕಾರಿಪುರ: ಪಟ್ಟಣದ ಮಂಗಳ ಭವನ ಬಳಿ ಬಿಜೆಪಿ ವತಿಯಿಂದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ನಡೆಸಲಾಯಿತು.
ಈ ವೇಳೆ ಮಾತನಾಡಿ ನೂತನ ಶಾಸಕ ಬಿವೈ ವಿಜಯೇಂದ್ರ ಅವರು ತಾಲೂಕಿನಲ್ಲಿ ತಂದೆ ಬಿ.ಎಸ್ ಯಡಿಯೂರಪ್ಪನವರು ಸಹೋದರ ಸಂಸದ ಬಿವೈ ರಾಘವೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಅವರ ಹಾದಿಯಲ್ಲಿ ನಾನು ತಾಲೂಕಿನ ಜನರ ಸೇವೆ ಮಾಡಲು ಬದ್ದನಾಗಿದ್ದು ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.

ನನ್ನ ಮೊದಲ ಚುನಾವಣೆಯಲ್ಲಿ ತಾಲೂಕಿನ ಹಿರಿಯ ಕಿರಿಯ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಜಯ ಗಳಿಸಲು ಸಹಕಾರ ನೀಡಿದ್ದಾರೆ ಇದು ಕಾರ್ಯಕರ್ತರ ಗೆಲುವು ಬಿಜೆಪಿ ಗೆಲುವು ಎಲ್ಲಾ ಮತದಾರರಿಗೆ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಮಾತನಾಡಿ ಪುತ್ರ ಬಿವೈ ವಿಜಯೇಂದ್ರರವರ ಮೊದಲ ಚುನಾವಣೆಯಲ್ಲಿ ತಾಲೂಕಿನ ಮತದಾರರು ಆರ್ಶಿವಾದ ಮಾಡಿ ಅವರಿಗೆ ಶಕ್ತಿ ನೀಡಿದ್ದೀರಿ ನಿಮ್ಮ ಎಲ್ಲಾ ಪ್ರೀತಿ ವಿಶ್ವಾಸ ಅಭಿಮಾನ ಅವರು ಉಳಿಸಿಕೊಂಡು ಹೊಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸದ ಬಿವೈ ರಾಘವೇಂದ್ರ, ಎಂಎಲ್ ಸಿ ರುದ್ರೆಗೌಡ,ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿಡಿ ಮೇಘರಾಜ್, ಮುಖಂಡರಾದ ಕೆ.ಎಸ್ ಗುರುಮೂರ್ತಿ, ಕೆ.ರೇವಣ್ಣಪ್ಪ, ಕೆ.ಹಾಲಪ್ಪ, ಚನ್ನವೀರಪ್ಪ, ಟಿ.ಎಸ್ ಮೋಹನ್,ಹೆಚ್ ಟಿ ಬಳಿಗಾರ್ ,ರಾಜಣ್ಣ ಕಬಾಡಿ,ರೇಖಾಬಾಯಿ ಮಂಜುಸಿಂಗ್, ವಿರೇಂದ್ರ ಪಾಟೀಲ್, ಇದ್ದರು.
News by: Raghu Shikari-7411515737