2000 ರೂಪಾಯಿ ನೋಟಿನ ಕಥೆ ಮುಗಿದರೂ ಕಾಫಿನಾಡಿನ ಯುವಕನ ಜೀವನ ಆ ನೋಟು ಅಜರಾಮರ

2000 ರೂಪಾಯಿ ನೋಟಿನ ಕಥೆ ಮುಗಿದರೂ ಕಾಫಿನಾಡಿನ ಯುವಕನ ಜೀವನ ಆ ನೋಟು ಅಜರಾಮರ

ಚಿಕ್ಕಮಗಳೂರು : ಆರ್.ಬಿ.ಐ. 2000 ಮುಖಬೆಲೆಯ ನೋಟುಗಳನ್ನ ಹಿಂಪಡೆಯುವಿಕೆಗೆ ದೇಶದ ಜನರಿಗೆ ಗಡುವು ನೀಡಿದೆ. ಇನ್ನೇಣು ಏಳೆಂಟು ತಿಂಗಳಲ್ಲಿ 2000 ರೂಪಾಯಿ ನೋಟಿಗೆ ಕೊನೆ ಮೊಳೆ ಕೂಡ ಬೀಳಲಿದೆ. ಆದರೆ, ಜಿಲ್ಲೆಯ ಕಳಸ ತಾಲೂಕಿನ ತೇಜು ಎಂಬ ಯುವಕನ ಬದುಕಲ್ಲಿ ಎಷ್ಟೆ ವರ್ಷಗಳು ಕಳೆದರು ಆ 2000 ರೂಪಾಯಿ ಮುಖಬೆಲೆಯ ನೋಡು ಹಚ್ಚಹಸಿರಾಗೇ ಇರಲಿದೆ. ಏಕೆಂದರೆ, ಆ ಯುವಕ ಪ್ರಧಾನಿ ಮೋದಿ ಮೇಲಿನ ಅಭಿಮಾನಕ್ಕಾಗಿ ತನ್ನ ಮದುವೆಯ ಆಮಂತ್ರಣ ಪತ್ರಿಕೆಯ ಫ್ರೆಂಡ್ಸ್ ಕಾರ್ಡ್‍ನ್ನ 2000 ರೂಪಾಯಿ ನೋಟಿ ರೀತಿಯಲ್ಲಿ ಮುದ್ರಣ ಹಾಕಿಸಿದ್ದ.

ಆ ಮದುವೆ ಆಮಂತ್ರಣ ಪತ್ರಿಕೆಯನ್ನ ನೋಡಿದರೆ 2000 ರೂಪಾಯಿ ನೋಟನ್ನ ನೋಡುವುದೇ ಬೇಡ ಅಷ್ಟು ಅಚ್ಚುಕಟ್ಟಾಗಿ ಮಾಡಿಸಿದ್ದರು. ನೋಟಿನಲ್ಲಿರುವ ನಂಬರ್, ನೋಟಿನ ಮಧ್ಯ ಭಾಗದಲ್ಲಿ ಇರುವ ಎಲ್ಲಾ ಭಾಷೆಯಲ್ಲಿ 2000 ರೂಪಾಯಿ ಎಂದು ಇರುವ ಜಾಗದಲ್ಲಿ ತನ್ನ ಹೆಸರಿನ ಜೊತೆ ಮದುವೆಯಾಗುವ ಹುಡುಗಿಯ ಹೆಸರನ್ನ ಹಾಕಿಸಿದ್ದರು.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಇರುವ ಜಾಗದಲ್ಲಿ ಲವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದು ಮಾಡಿಸಿದ್ದರು. ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿಜೀಯವರ ಫೋಟೋ ಇರುವ ಜಾಗದಲ್ಲಿ ವಧು-ವರರನ್ನ ಆಶೀರ್ವದಿಸುತ್ತಿರುವ ಗಣಪತಿಯ ಭಾವಚಿತ್ರವಿದೆ. ನೋಟಿನ ಮತ್ತೊಂದು ಬದಿಯಲ್ಲಿ ಸ್ಕ್ಯಾನರ್ ಕೂಡ ಇದ್ದು. ಅದನ್ನ ಸ್ಕ್ಯಾನ್ ಮಾಡಿದರೆ ಕಳಸ ತಾಲೂಕಿನ ಮದುವೆ ಮಂಟಪಕ್ಕೆ ಬರುವ ಮಾರ್ಗ ತೋರಿಸುವಂತಿತ್ತು.

ಸುಮಾರು 1500 ಕಾರ್ಡ್ ಮಾಡಿಸಿದ್ದ ಯುವಕ ಸ್ನೇಹಿತರಿಗೆಲ್ಲಾ ಅದೇ ಕಾರ್ಡ್ ಹಂಚಿದ್ದ. ಇದೀಗ ಆರ್.ಬಿ.ಐ. 2000 ನೋಟನ್ನ ಹಿಂಪಡೆಯುತ್ತಿರುವಂತೆ ಯುವಕ ತೇಜು ಸ್ನೇಹಿತರು ಆ ನೋಟಿನ ಇನ್ವಿಟೇಷನ್ ಕಾಡ್ ಕಳಿಸಿ ನೆನಪಿಸುತ್ತಿದ್ದಾರೆ. ಉಡುಪಿಯಲ್ಲಿ ಪ್ರಿಂಟ್ ಹಾಕಿಸಿದ್ದ ಈ ಕಾರ್ಡನ್ನ ಅಚ್ಚುಕಟ್ಟಾಗಿ ಪ್ರಿಂಟ್ ಹಾಕಿಕೊಡಲು ಉಡುಪಿಯ ಆಪ್‍ಸೆಟ್ ಪ್ರಿಂಟರ್‍ನವರು ಕೂಡ ವಾರಗಟ್ಟಲೇ ಟೈಂ ತೆಗೆದುಕೊಂಡಿದ್ದರು.

ಇನ್ನು ಮುಂದೆ ಅದೆಲ್ಲೆ ನೆನಪಷ್ಟೆ. ಮೋದಿ ಮೇಲಿನ ಅಭಿಮಾನಕ್ಕಾಗಿ ವಿಶೇಷವಾಗಿ ಮದುವೆ ಆಮಂತ್ರಣ ಕಾರ್ಡ್ ಮಾಡಿಸಬೇಕೆಂದು ಡಿಫರೆಂಟ್ ಆಗಿ ಕಾರ್ಡ್ ಮಾಡಿಸಿದ್ದ ಕಳಸ ತಾಲೂಕಿನ ಯುವಕನ ಬಾಳಲ್ಲಿ 2000 ರೂಪಾಯಿ ನೋಟು ಎಂದೆಂದೂ ಹಚ್ಚಹಸಿರಾಗಿರಲಿದೆ.

News By : Santhosh athigere

Admin

Leave a Reply

Your email address will not be published. Required fields are marked *

error: Content is protected !!