ಕುಂಸಿ ಬಳಿ ಎರಡು ಬಸ್ ಗಳ ನಡುವೆ ಭೀಕರ ಅಪಘಾತ 2 ಕ್ಕೂ ಹೆಚ್ಚು ಜನ‌ ಸ್ಥಳದಲ್ಲಿಯೇ ಸಾವು‌..!

ಕುಂಸಿ ಬಳಿ ಎರಡು ಬಸ್ ಗಳ ನಡುವೆ ಭೀಕರ ಅಪಘಾತ 2 ಕ್ಕೂ ಹೆಚ್ಚು ಜನ‌ ಸ್ಥಳದಲ್ಲಿಯೇ ಸಾವು‌..!

ಶಿವಮೊಗ್ಗ :ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಚಾಲಕ ಸೇರಿದಂತೆ ಹಲವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕುಂಸಿ ಬಳಿ ನಡೆದಿದೆ.

ಶಿಕಾರಿಪುರದಿಂದ ಶಿವಮೊಗ್ಗ ಹಾಗೂ ಶಿವಮೊಗ್ಗದಿಂದ ಶಿಕಾರಿಪುರ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, 10ಕ್ಕೂ ಹೆಚ್ಚು ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.

ಬಸ್ ಡಿಕ್ಕಿಯಾಗಿರುವ ರಭಸಕ್ಕೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಬಸ್‌ಗಳನ್ನು ಬೇರ್ಪಡಿಸಲಾಗಿದೆ ಎನ್ನಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!