70 ದಶಕದ ಅಂಬಾಸಿಡರ್ ಕಾರಿನಲ್ಲಿ ಆಗಮಿಸಿದ‌ ಬಿಎಸ್ ವೈ ಮೊದಲು ಬಳಸಿದ ಕಾರು ಯಾವುದು..?

70 ದಶಕದ ಅಂಬಾಸಿಡರ್ ಕಾರಿನಲ್ಲಿ ಆಗಮಿಸಿದ‌ ಬಿಎಸ್ ವೈ  ಮೊದಲು ಬಳಸಿದ ಕಾರು ಯಾವುದು..?

ಶಿಕಾರಿಪುರ :ಯಡಿಯೂರಪ್ಪ ತಾವು ಮೊದಲ ಸಲ ಬಳಸಿದ 70 ರ ದಶಕದ ಅಂಬಾಸಿಡರ್ ಕಾರನ್ನೇರಿ ತೋಟದ ಮನೆಯಿಂದ ದೇವಸ್ಥಾನದವರೆಗೆ ಬಿಎಸ್ ಯಡಿಯೂರಪ್ಪನವರು ಆಗಮಿಸಿದ್ದರು.

ಈ ಕಾರ್ ಅದೃಷ್ಟದ ಸಂಕೇತ ಎಂದು ಬಿ.ಎಸ್ ವೈ ಮತ್ತು ಕುಟುಂಬ ನಂಬಿಕೆ ಇದೆ ಯಡಿಯೂರಪ್ಪನವರು ಮೊದಲು ಸ್ವಂತಕ್ಕಾಗಿ ಇಷ್ಟಪಟ್ಟ ತೆಗೆದುಕೊಂಡಿದ್ದು ಇದೆ ಕಾರು ಅದ್ದರೆ ಮೊದಲು ಯಡಿಯೂರಪ್ಪನವರಿಗೆ ಕಾರು ನೀಡಿದವರು ಯಾರು ಗೊತ್ತಾ..?

ಬಿಎಸ್ ವೈ ಪ್ರಚಾರಕ್ಕೆ ಮೊದಲು ಕಾರು ನೀಡಿದ್ದು ಕಾಳೇನಹಳ್ಳಿ ಶಿವಯೋಗಿ ಮಂದಿರದ ಶ್ರೀಗಳು

ಹೌದ ಬಿಎಸ್ ಯಡಿಯೂರಪ್ಪನವರು ಮೊದಲು ಶಿಕಾರಿಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಆರಂಭಿಸಿದ ವೇಳೆ ಸೈಕಲ್‌ನಲ್ಲಿ ಕ್ಷೇತ್ರ ಸುತ್ತಾಡುತ್ತಿದ್ದರು ಈ‌ ವೇಳೆ
ಚುನಾವಣೆ ಸಂದರ್ಭದಲ್ಲಿ ಕಾಳೆನಹಳ್ಳಿ ಶಿವಯೋಗಿ ಮಂದರದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ತಮ್ಮ ಮಠದ ಅಂಬಾಸಿಡರ್ ಕಾರನ್ನು ನೀಡಿದ್ದರು.

ಬಿ.ಎಸ್ ಯಡಿಯೂರಪ್ಪನವರು ರಾಜಕೀಯ ಜೀವನಕ್ಕೆ ಅತೀ ಹೆಚ್ಚು ಧಾರ್ಮಿಕ ಮತ್ತು ನೈತಿಕ ಬೆಂಬಲ‌ ನೀಡಿದ್ದು ಕಾಳೆನಹಳ್ಳಿ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿಗಳು ಎಂದು‌ ಇಂದಿಗೂ ಅನೇಕರು ಮಾತನಾಡುತ್ತಾರೆ.

ನಂತರ ಅವರು 1973-74 ರ ವೇಳೆ ಈ ಅಂಬಾಸಿಡರ್ ಕಾರನ್ನು ಅರ್ಬನ್ ಬ್ಯಾಂಕ್ ನಲ್ಲಿ ಲೋನ್ ಪಡೆದು ಖರೀದಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟಿದ್ದರು ಈ ಕಾರು ನೋಡಿದರೆ ಇಡೀ ರಾಜ್ಯದಲ್ಲಿ ಇರುವಂತಹ ಬಿಜೆಪಿ ಕಾರ್ಯಕರ್ತರು ರೋಮಾಂಚನಗೊಳ್ಳುತ್ತಿದ್ದರು.

ಇಡೀ ಬಿಜೆಪಿಗೆ ಕಮಲದ ಗುರುತು ಚಿಹ್ನೆ ಆದರೆ ಯಡಿಯೂರಪ್ಪನವರ ಗುರುತು ಸಿಕೆಆರ್.45 ನಂಬರಿನ ಅಂಬಾಸಿಡರ್ ಕಾರ್ ಅಂತಹ ಒಂದು ಅವಿನಾಭಾವ ಇದೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.

ಬಿ‌.ಎಸ್ ಯಡಿಯೂರಪ್ಪನವರು ಯಾವಾಗಲೂ ಸಂಖ್ಯಾಶಾಸ್ತ್ರದ  ಮೇಲೆ ಬಲವಾದ ನಂಬಿಕೆ‌ ಇಟ್ಟವರು ಅದ್ದರಿಂದಲ್ಲೇ ಬಿ‌.ಎಸ್ ಯಡಿಯೂರಪ್ಪನವರ ಕುಟುಂಬದವರು ಬಳಸುವ ಎಲ್ಲಾ ಕಾರುಗಳ ಸಂಖ್ಯೆ 45 ಆಗಿರುತ್ತದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!