ದೊಡ್ಡ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ: ಬಿವೈ ವಿಜಯೇಂದ್ರ

ದೊಡ್ಡ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ: ಬಿವೈ ವಿಜಯೇಂದ್ರ

ಶಿಕಾರಿಪುರ: ಯಡಿಯೂರಪ್ಪ ಚುನಾವಣಾ ನಿವೃತ್ತಿ ಬಳಿಕ ತಮ್ಮ ಸ್ವ ಕ್ಷೇತ್ರ ಶಿಕಾರಿಪುರದಿಂದ ಪುತ್ರ ಬಿವೈ ವಿಜಯೇಂದ್ರ ಅವರನ್ನ ಕಣಕ್ಕಿಳಿಸಿದ್ದಾರೆ. ವಿಜಯೇಂದ್ರ ಶಿಕಾರಿಪುರದಲ್ಲಿಂದು ನಾಮ ಪತ್ರ ಸಲ್ಲಿಸಿದರು.

ನಂತರ, ಮಾಧ್ಯಮಗಳಿಗೆ ಮಾತನಾಡಿದ ವಿಜಯೇಂದ್ರ, ಮೊದಲು ನಾನು ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ನಮಸ್ಕರಿಸಿ ನಂತರ ರಾಘವೇಂದ್ರ ಸ್ವಾಮಿ ಮಠಕ್ಕೆ ಹೋಗಿ ಪೂಜೆ ಸಲ್ಲಿಸಿದ್ದೇನೆ. ನಂತರ ನನ್ನ ನಾಮಪತ್ರ ಸಲ್ಲಿಸಿದ್ದೇನೆ ಎಂದರು.

ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಯುವಕರು ಮಹಿಳೆಯರು ಆಗಮಿಸಿದ್ದಾರೆ. ನಮಗೆ ಬೆಂಬಲ ನೀಡಿದ್ದಾರೆ. ನನ್ನ ಶಕ್ತಿ ಶಿಕಾರಿಪುರದಲ್ಲಿರುವ ನಮ್ಮ ಕಾರ್ಯಕರ್ತರ ಪಡೆ. ಸುಮಾರು 70ರ ದಶಕದಲ್ಲಿ ಇಲ್ಲಿನ ಜನ ನನ್ನ ತಂದೆಗೆ ಶಕ್ತಿಯನ್ನು ತುಂಬಿ ಬೆಂಬಲ ನೀಡಿ ಬೆಳೆಸಿದ್ದರು. ಅವರೆಲ್ಲ ಇಂದಿಗೂ ಕೂಡ ಅದೇ ಉತ್ಸಾಹದಲ್ಲಿ ನನಗೆ ಆಶೀರ್ವಾದ ಮಾಡಲು ಬರುತ್ತಿದ್ದಾರೆ. ಅದನ್ನು ನೋಡಿ ಖುಷಿ ಅನಿಸಿದೆ.
ಇದು ನನಗೆ ಶಕ್ತಿ ತುಂಬಿದೆ.

ಯುವಕರ ಒಂದು ಹೊಸ ಪಡೆ ನರೇಂದ್ರ ಮೋದಿ ನಾಯಕತ್ವವನ್ನು ಒಪ್ಪಿ ಹೊಸದಾಗಿ ಸೇರಿಕೊಂಡಿದೆ‌. ನನ್ನ ಅಣ್ಣ ಎಂಪಿ ರಾಘವೇಂದ್ರ ಅವರ ಕೆಲಸಗಳನ್ನು ಕೂಡ ಮೆಚ್ಚಿ ನಮ್ಮನ್ನು ಬೆಂಬಲಿಸಿದ್ದಾರೆ. ಬಹಳ ಮುಖ್ಯವಾಗಿ ಮತದಾರರು ಸದಾ ಕಾಲ ಪೂಜ್ಯ ತಂದೆಗೆ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ.

ರಾಘಣ್ಣನಿಗೂ ಆಶೀರ್ವಾದ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಕೂಡ ಶಿಕಾರಿಪುರ ಸರ್ವಾಂಗಿಣ ಅಭಿವೃದ್ಧಿಯ ದೃಷ್ಟಿಯಿಂದ ನನಗೂ ಕೂಡ ಆಶೀರ್ವಾದ ಮಾಡುತ್ತಾರೆ.

ದೊಡ್ಡ ಅಂತರದಲ್ಲಿ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು. ಶಿಕಾರಿಪುರ ಮಾತ್ರ ಸೀಮಿತ ಆಗುತ್ತದೆ ಅಥವಾ ರಾಜ್ಯದಲ್ಲೇ ಪ್ರವಾಸ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪ್ರವಾಸ ಮಾಡಿದ್ದೇನೆ ರಾಜ್ಯ ಅತ್ಯಂತ ಪ್ರವಾಸ ಮಾಡಲು ಕೂಡ ಸಮಯ ಕೊಡುತ್ತೇನೆ ಎಂದರು.

ಶಿಕಾರಿಪುರದಲ್ಲಿ ಯಾರು ನಮ್ಮ ಪ್ರತಿಸ್ಪರ್ಧಿ ಎಂದು ತಲೆಕೆಡಿಸಿಕೊಂಡಿಲ್ಲ. ಹಾಗಂತ ಚುನಾವಣೆಯನ್ನು ಹಗುರವಾಗಿ ಪರಿಗಣಿಸಿಲ್ಲ. ಚುನಾವಣೆಯನ್ನ ಸವಾಲಾಗಿ ಸ್ವೀಕರಿಸಬೇಕು. ಯಶಸ್ವಿಯಾಗುತ್ತೇವೆ. ಇದು ನನ್ನ ಮೊದಲ ಚುನಾವಣೆ. ರಾಜಕೀಯ ಜನ್ಮ ಯಡಿಯೂರಪ್ಪನವರಿಗೆ ನೀಡಿದ ತಾಲೂಕು ಇದು.

ಬಿಜೆಪಿಗೆ ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರಬೇಕು‌. ಅದರಂತೆ ಕಾರ್ಯಪ್ರವೃತ್ತರಾಗಿದ್ದೇವೆ. ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಸರ್ಕಾರ ಬರುವುದರ ಮೂಲಕ ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂಬ ಸಂಕಲ್ಪ ನಾವು ಮಾಡಿಕೊಂಡಿದ್ದೇವೆ. ಇದು ಜನರ ಅಪೇಕ್ಷೆ ಕೂಡ ಎಂದರು.

ನಂತರ ಬಹಿರಂದ ಸಮಾವೇಶ ನಡೆಸಲಾಯಿತು ಈ ಸಂದರ್ಭದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಎಂಟಿಬಿ ನಾಗರಾಜ್,ಆರಗ ಜ್ಞಾನೇಂದ್ರ, ಉಮೇಶ ಜಾದವ್, ಪಿ ರಾಜೀವ್,ನಟಿ ಶೃತಿ, ಸಂಸದ ಬಿವೈ ರಾಘವೇಂದ್ರ, ಭಾರತೀ ಶೆಟ್ಟಿ, ಸೇರಿದಂತೆ ಅನೇಕರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!