|Shivamogga Airport| ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಐತಿಹಾಸಿಕ ಶ್ರೀಮಂತಿಕೆಯ ತವರು : ಪ್ರಧಾನಿ ನರೇಂದ್ರಮೋದಿ….!!!

ಶಿವಮೊಗ್ಗ: ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು ಇಲ್ಲಿನ ವನ್ಯಜೀವಿ, ನದಿ, ಪರ್ವತ ಶ್ರೇಣಿಗಳು, ಪಶ್ಚಿಮಘಟ್ಟ ಅದ್ಬುತವಾಗಿದೆ ಅತ್ಯಂತ ಆಕರ್ಷಕ ತಾಣಗಳಾಗಿವೆ.
ಜಿಲ್ಲೆಯು ಪ್ರಕೃತಿ ಸಂಸ್ಕೃತಿ, ಕೃಷಿ ಭೂಮಿ ಶ್ರೀಮಂತವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿಲ್ಲೆಯ ಗುಣಗಾನ ಮಾಡಿದ್ದಾರೆ.

ಶಿವಮೊಗ್ಗ ನಗರದ ಸೋಗಾನೆಯ ವಿಮಾನ ನಿಲ್ದಾಣ ಆವರಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವ ವಿಖ್ಯಾತ ಜೋಗ ಜಲಪಾತ, ಆನೆ ಬಿಡಾರ, ಸಿಂಹಾಧಾಮ, ಆಗುಂಬೆ ಸೂರ್ಯಾಸ್ತ ಸೇರಿದಂತೆ ಹಲವು ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಎಂದರು.

‘ಗಂಗಾ ಸ್ನಾನ–ತುಂಗಾ ಪಾನ’ ಎಂಬ ನಾಣ್ನುಡಿ ಪ್ರಸಿದ್ದವಾಗಿದಿದೆ ಗಂಗೆ ನದಿಯಲ್ಲಿ ಸ್ನಾನ ಮಾಡಿದ್ದಷ್ಟೇ, ತುಂಗಾ ನದಿ ನೀರು ಕುಡಿಯುವುದು ಕೂಡ ಮಹತ್ವದ್ದಾಗಿದೆ ಅಷ್ಟೊಂದು ಸಿಹಿಯಾದ ನೀರು ತುಂಗಾ ನದಿ ನೀರು ಎಂದರು.
ಜಿಲ್ಲೆಯ ಹೆಸರಾಂತ ಸಂಸ್ಕೃತ ಗ್ರಾಮ ಮತ್ತೂರು, ಸಾಗರದ ಸಿಗಂದೂರು ಚೌಡೇಶ್ವರಿ ಶ್ರೀಧರ್ ಸ್ವಾಮಿಗಳ ಆಶ್ರಮ, ಶಿವಮೊಗ ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಸೇರಿದಂತೆ ಹಲವು ಧಾರ್ಮಿಕ ತಾಣಗಳಾಗಿವೆ ಜಿಲ್ಲೆಯಲ್ಲಿವೆ.

ಬ್ರಿಟಿಷರ ವಿರುದ್ದ ‘ಏಸೂರು ಕೊಟ್ಟರು, ಈಸೂರು ಕೊಡೆವು’ ಎಂದು ಜಿಲ್ಲೆಯ ಈಸೂರು ಗ್ರಾಮದ ಗ್ರಾಮಸ್ಥರು ಹೋರಾಟ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಶಿವಮೊಗ್ಗದ ನೂತನ ವಿಮಾನ ನಿಲ್ದಾಣವು ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಹೊಸ ಅಭಿವೃದ್ದಿಗೆ ಮಾರ್ಗವಾಗಲಿದೆ ಎಂದರು.
ಮಲೆನಾಡು, ಪಶ್ಚಿಮಘಟಗಳ ಸಂಪರ್ಕ ಕಲ್ಪಿಸುವ ಉತ್ತಮ ಕೇಂದ್ರವಾಗಿ ಅಭಿವೃದ್ಧಿ ಆಗಲಿದೆ ಎಂದರು.
News by Raghu shikari-7411515737