ಶಿವಮೊಗ್ಗ-ಶಿಕಾರಿಪುರ -ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಫೆ.27ರಂದು ಶಂಕುಸ್ಥಾಪನೆ:ಸಂಸದ‌ ಬಿವೈ ರಾಘವೇಂದ್ರ

ಶಿವಮೊಗ್ಗ-ಶಿಕಾರಿಪುರ -ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ಫೆ.27ರಂದು ಶಂಕುಸ್ಥಾಪನೆ:ಸಂಸದ‌ ಬಿವೈ ರಾಘವೇಂದ್ರ

ಶಿವಮೊಗ್ಗ:ಮಲೆನಾಡಿನಿಂದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಲಿಸುವ ಉದ್ಧೇಶದಿಂದ ಶಿವಮೊಗ್ಗ-ಶಿಕಾರಿಪುರ -ರಾಣೆಬೆನ್ನೂರು ನಡುವಿನ ರೈಲ್ವೆ ಮಾರ್ಗಕ್ಕೆ ಒಪ್ಪಿಗೆ ದೊರೆತಿದ್ದು, ಇದಕ್ಕೆ ಫೆ.27ರಂದು ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು‌.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರೈಲ್ವೆ ಲೈನ್ ಬಿ ಕೆಟಗರಿಯಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

ಇದಕ್ಕೆ ಪೂರಕವಾಗಿ ಶಿವಮೊಗ್ಗ ಹಾಗೂ ರಾಣೆಬೆನ್ನೂರು ನಡುವಿನ ರೈಲ್ವೆ ಮಾರ್ಗದ ಕಾಮಗಾರಿ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಯಾವ ಮಾರ್ಗ?
ಶಿವಮೊಗ್ಗ-ಕೋಟೆ ಗಂಗೂರು-ರಾಮನಗರ-ಮಲ್ಲಾಪುರ- ಕೊರಲಹಳ್ಳಿ-ಶಿಕಾರಿಪುರ-ಮಾಸೂರು-ಹಲಗೇರಿ ಮೂಲಕ ರಾಣೆಬೆನ್ನೂರಿಗೆ ಈ ರೈಲ್ವೆ ಮಾರ್ಗ ನಿರ್ಮಾಣವಾಗಲಿದೆ. ಇದದಲ್ಲಿ ಹೊನ್ನಾಳಿ ತಾಲೂಕಿನ ಕೆಲವು ಪ್ರದೇಶಗಳೂ ಸಹ ಸೇರುತ್ತವೆ.

ಎಷ್ಟು ವೆಚ್ಚ?
ಈ ಮಾರ್ಗ ಅಭಿವೃದ್ಧಿಗಾಗಿ ಒಟ್ಟು 555 ಎಕರೆ ಭೂಮಿಯ ಅಗತ್ಯವಿದ್ದು, ಇದರಲ್ಲಿ 421 ಎಕರೆ ಖಾಸಗಿ, 84 ಎಕರೆ ಅರಣ್ಯ ಹಾಗೂ 48 ಎಕರೆ ಸರ್ಕಾರಿ ಭೂಮಿ ಸೇರಿದೆ. ಇದರ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರಕ್ಕಾಗಿ 68 ಕೋಟಿ ರೂ. ನಿಗದಿಯಾಗಿದ್ದು, ಒಟ್ಟು ಯೋಜನಾ ವೆಚ್ಚ 612 ಕೋಟಿ ರೂ. ಆಗಿದೆ.

ಎಲ್ಲಿಗೆ ಸಂಪರ್ಕ?
ಶಿವಮೊಗ್ಗ-ರಾಣೆಬೆನ್ನೂರು ರೈಲ್ವೆ ಮಾರ್ಗದಿಂದ ಹುಬ್ಬಳ್ಳಿಗೆ ಸಂಪರ್ಕ ಏರ್ಪಡಲಿದೆ. ಅಲ್ಲದೇ, ಮಹಾರಾಷ್ಟ, ಗುಜರಾತ್ ಸೇರಿದಂತೆ ನಾಲ್ಕು ರಾಜ್ಯಗಳ ಸಂಪರ್ಕ ಸುಲಭವಾಗಲಿದೆ.

ಕೋಚಿಂಗ್ ಡಿಪೋ
ಇನ್ನು, 76 ಕೋಟಿ ರೂ. ವೆಚ್ಚದಲ್ಲಿ ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಹಾಗೂ 21 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಸ್ಟೇಷನ್ ನಿರ್ಮಾಣವಾಗಲಿದೆ ಎಂದರು.

News By: Raghu Shikari-7411525737

Admin

Leave a Reply

Your email address will not be published. Required fields are marked *

error: Content is protected !!