ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭ್ರಷ್ಟಾಚಾರ ಆರೋಪ ಹೊಂದಿರುವ ಬಿಎಸ್ ವೈ ಹೆಸರು ಬೇಡ:ರಾಘವೇಂದ್ರ ನಾಯ್ಕ್
ಶಿಕಾರಿಪುರ:ಭ್ರಷ್ಟಾಚಾರದ ಮೂಲಕ ಜೈಲಿಗೆ ಹೋಗಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬಾರದ್ದು ಎಂದು ತಾಲೂಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್ ಆಗ್ರಹಿಸಿದರು.
ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಜೈಲುವಾಸ ಅನುಭವಿಸಿದ ಕಳಂಕಿತ ವ್ಯಕ್ತಿಯ ಹೆಸರನ್ನು ಇಡುವುದು ಸೂಕ್ತವಲ್ಲ.
ಮುಖ್ಯಮಂತ್ರಿ ಬಸವರಾಜ ಬೋಮ್ಮಯಿ ಅವರು ಶಿವಮೊಗ್ಗದ ಕಾರ್ಯಕ್ರಮಯೊಂದರಲ್ಲಿ ಬಿ.ಎಸ್ ಯಡಿಯೂರಪ್ಪನವರ ಹೆಸರು ಇಡುವುದಾಗಿ ಘೋಷಣಡ ಮಾಡಿದ್ದು ಇದನ್ನು ನಾವು ಖಂಡಿಸುತ್ತೇವೆ ಎಂದರು.
ರಾಜಕೀಯ ಲಾಭಕ್ಕಾಗಿ ಸಾರ್ವಜನಿಕ ಆಸ್ತಿಗೆ ಭ್ರಷ್ಟಾಚಾರ ಆರೋಪ ಹೊಂದಿರುವ ವ್ಯಕ್ತಿ ಹೆಸರು ಇಡುವುದು ಕಪ್ಪು ಚುಕ್ಕೆ ಕಳಂಕ ಆಗಲಿದೆ ಎಂದರು.
ನಮ್ಮ ಜಿಲ್ಲೆಯ ಅನೇಕ ಮಹಾನ್ ವ್ಯಕ್ತಿಗಳು ನಾಯಕರು ಹೋರಾಟಗಾರರ ಹೆಸರನ್ನು ಇಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಯ್ಕ್ ,ಕುಮರ್ ನಾಯ್ಕ್, ಇದ್ದರು.
News by: Raghu Shikari-7411515737