ಶಿವಮೊಗ್ಗ ಜಿಲ್ಲೆಯಿಂದ 23 ಮಂದಿಗೆ ಗಡಿಪಾರು ಪಟ್ಟಿ ಸಿದ್ದತೆ : ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್

ಶಿವಮೊಗ್ಗ ಜಿಲ್ಲೆಯಿಂದ 23 ಮಂದಿಗೆ ಗಡಿಪಾರು ಪಟ್ಟಿ ಸಿದ್ದತೆ : ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿದೆ . ಹಲವರ ಗಡಿಪಾರು ಮಾಡಲು ಪಟ್ಟಿ ಸಿದ್ಧತೆ ನಡೆಸಲಾಗಿದೆ . ಹಲವರ ಜಾಮೀನು ರದ್ಧತಿಗು ಕೋರ್ಟ್ ಗೆ ಮನವಿ ಸಲ್ಲಿಸಲು ಯೋಜಿಸಲಾಗಿದೆ

ಈ ಕುರಿತು ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು , ಜಿಲ್ಲೆಯಿಂದ 23 ಮಂದಿಯನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಪಟ್ಟಿ ಸಿದ್ಧಪಡಿಸಲಾಗಿದೆ . ಈಗಾಗಲೇ ಮೂರು ಮಂದಿಯನ್ನು ಗಡಿಪಾರಿಗೆ ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ ಎಂದು ತಿಳಿಸಿದರು .

ಜಾಮೀನಿನ ಮೇಲೆ ಹೊರಗೆ ಬಂದು ದುಷ್ಕೃತ್ಯಗಳನ್ನು ಎಸಗುತ್ತಿರುವವರ ವಿರುದ್ಧವು ಕಠಿಣ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಮುಂದಾಗಿದೆ . ‘ ಜಾಮೀನಿನ ಮೇಲೆ ಹೊರ ಬಂದು ಮತ್ತೆ ದುಷ್ಕೃತ್ಯಗಳನ್ನು ಮಾಡುತ್ತಿದ್ದರೆ , ಅಂತಹವರ ಪತ್ತೆ ಮಾಡಿ ಜಾಮೀನು ರದ್ದು ಮಾಡಲು ಸೂಚಿಸಲಾಗುವುದು ಎಂದು ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು .

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!