ಸ್ಥಳದಲ್ಲೇ ಅಪರಾಧ ಹಿನ್ನಲೆ ಪತ್ತೆಗೆ ಶಿವಮೊಗ್ಗ ಪೋಲಿಸ್ ವಿನೂತನ ತಂತ್ರಜ್ಞಾನ

ಸ್ಥಳದಲ್ಲೇ ಅಪರಾಧ ಹಿನ್ನಲೆ ಪತ್ತೆಗೆ ಶಿವಮೊಗ್ಗ ಪೋಲಿಸ್ ವಿನೂತನ ತಂತ್ರಜ್ಞಾನ

ಶಿವಮೊಗ್ಗ: ಅನುಮಾನ ಬಂದ ವ್ಯಕ್ತಿಯ ಅಪರಾಧದ ಹಿನ್ನಲೆಯನ್ನು ಸ್ಥಳದಲ್ಲೆ ಪತ್ತೆಹಚ್ಚಲು ಶಿವಮೊಗ್ಗ ಪೋಲಿಸ್ ಬೆರಳಚ್ಚು ತಂತ್ರಜ್ಞಾನ ವಿನ್ಯಾಸಗೊಳಿಸಿದೆ.

ರಾತ್ರಿವೇಳೆ ಅಥವಾ ಅನುಮಾನವಾಗಿ ತಿರುಗುತ್ತಿರುವ ವ್ಯಕ್ತಿಗಳ ಅಪರಾಧ ಹಿನ್ನಲೆ ಪತ್ತೆ ಹಚ್ಚಲು MCCTNS ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು ಅನುಮಾನ ಬಂದ ವ್ಯಕ್ತಿಯ ಪ್ರಿಂಗರ್ ಪ್ರಿಂಟ್ ಸಾಧನದ ಮೂಲಕ ಬೆರಳನ್ನು ಸ್ಕ್ಯಾನ್ ಮಾಡಿ ಅಪರಾಧ ಹಿನ್ನಲೆಯನ್ನು ಪತ್ತೆಹಚ್ಚಲಾಗುತ್ತದೆ.

ಈ ಕುರಿತು ಟ್ವಿಟ್ ಮಾಡಿರುವ ಶಿವಮೊಗ್ಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಈ ಆ್ಯಪ್ ಮೂಲಕ ಅಪರಾಧಿಕ ಹಿನ್ನಲೆ ಕಂಡು ಬಂದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು ಸಂಪೂರ್ಣ ಹಿನ್ನಲೆಯನ್ನು ಪರಿಶೀಲಿಸಿ ಕಾನೂನುಕ್ರಮ ಜರುಗಿಸಲಾಗುವುದು ಎಂದು ತಿಳಿಸಿರುತ್ತಾರೆ.

News by Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!