ಶಿವಮೊಗ್ಗ: ತಾಳಗುಪ್ಪ- ಮೈಸೂರು, ಟಿಪ್ಪು ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ಹೆಸರು..!

ಶಿವಮೊಗ್ಗ: ತಾಳಗುಪ್ಪ- ಮೈಸೂರು, ಟಿಪ್ಪು ಎಕ್ಸ್‌ಪ್ರೆಸ್ ರೈಲುಗಳಿಗೆ ಹೊಸ ಹೆಸರು..!

ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಕುವೆಂಪು ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ.

ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ ಅವರು ನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ‌ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು ಅವರು ಪ್ರಯತ್ನದಿಂದ ತಾಳಗುಪ್ಪ -ಮೈಸೂರು ರೈಲಿಗೆ ಕುವೆಂಪು ಎಕ್ಸ್‌ಪ್ರೆಸ್ ‌ಎಂದು ಹೆಸರಿಡಲಾಗಿದೆ.

ಮೈಸೂರು ಮೂಲಕ ಹಾದು ಹೋಗುವ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಿಸಬೇಕು ಅನ್ನೋದು ಹಲವು ದಿನಗಳ ಬೇಡಿಕೆಯಾಗಿತ್ತು.

ಇದಕ್ಕೆ ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ನಡೆಸಿದ ಸತತ ಪ್ರಯತ್ನದಿಂದ ಇದೀಗ ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ.

ಟಿಪ್ಸು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಕೇಂದ್ರ ಸರ್ಕಾರ ಒಡೆಯರ್ ಎಕ್ಸ್‌ಪ್ರೆಸ್ ರೈಲು ಎಂದು ಮರುನಾಮಕರಣ ಮಾಡಿದೆ.

ಈ ಮೂಲಕ ಮೈಸೂರನ್ನು ಕಾಪಾಡಿದ, ಸಂಸ್ಕತಿಯನ್ನು ಉಳಿಸಿ ಬೆಳೆಸಿ, ವಿಶ್ವ ಪ್ರಸಿದ್ಧಿ ಮಾಡಿದ ಒಡೆಯರ್ ರಾಜಮನೆತನಕ್ಕೆ ಗೌರವ ನೀಡಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!