ನಮೋ 72 ನೇ ಹುಟ್ಟುಹಬ್ಬಕ್ಕೆ 72 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿದ ಮೋದಿ ಅಭಿಮಾನಿ ಮಹೇಶ್ ವಿಕ್ರಮ ಹೆಗ್ಡೆ

ಪ್ರಧಾನಿ ನರೇಂದ್ರ ಮೋದಿ ಅವರ 72 ನೇ ಹುಟ್ಟುಹಬ್ಬಕ್ಕೆ ದೇಶದ 72 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೋದಿ ಅವರ ಅಭಿಮಾನಿ, ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಶ್ರಮಿಸುತ್ತಿರುವ ಮಹೇಶ್ ವಿಕ್ರಮ್ ಹೆಗ್ಡೆ ತಮ್ಮ ವಿಕ್ರಮ ಫೌಂಡೇಶನ್ ಮೂಲಕ ಮೋದಿ ಅವರ ಬರ್ತ್ ಡೇ ವಿಶೇಷವಾಗಿ ಆಚರಿಸಲು ಈ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಒಟ್ಟು 72 ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ, ರುಧ್ರಾಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನ ನೆರವೇರಿಸಲಾಯಿತು.

ಗೋಕರ್ಣ, ಶ್ರೀಶೈಲ, ಶಿರಡಿ ಸೇರಿದಂತೆ ರಾಜ್ಯದ 7 ದೇವಿ ಶಕ್ತಿ ಪೀಠಗಳಲ್ಲಿ ನಮೋ ಹೆಸರಲ್ಲಿ ಪ್ರಾರ್ಥನೆ ಸಲ್ಲಿಕೆಯಾಗಿದೆ.

ಇನ್ನ ಸಿದ್ದಗಂಗಾ ಮಠ, ಅನ್ನಪೂರ್ಣಶ್ವರಿ ದೇವಸ್ಥಾನದಲ್ಲಿ ಪೂಜೆ ಜತೆಗೆ ನರೇಂದ್ರ ಮೋದಿ ಅವರ ಹೆಸರಲ್ಲಿ ಅನ್ನಸಂತರ್ಪಣೆ ಸೇವಾ ಕಾರ್ಯ ನಡೆದಿದೆ.
News By: Raghu Shikari-7411515737