ಚಿಕ್ಕಮಗಳೂರು: ಗಣಪತಿ ಸೇವಾ ಸಮಿತಿಗೆ ಮುಸ್ಲಿಂ ಮಹಿಳೆ ಅಧ್ಯಕ್ಷೆ…!

ಚಿಕ್ಕಮಗಳೂರು : ಗಣೇಶ ಹಬ್ಬದ ಆಚರಣೆ ಎಂದರೆ ಹಿಂದುಗಳ ಶ್ರದ್ಧಾ ಭಕ್ತಿ ಸಂಭ್ರಮಕ್ಕೆ ಸಾಕ್ಷಿಯಾಗಿರುತ್ತದೆ.
ಇಡೀ ಜಗತ್ತೇ ಧರ್ಮಗಳ ನಡುವಿನ ವೈಶಮ್ಯಗಳನ್ನು ತೋರುತ್ತಿರುವ ದಿನಗಳಲ್ಲಿ ಸರ್ವಧರ್ಮದ ಸಮನ್ವಯತೆಯನ್ನು ಕಾಣುವ ವಿಶೇಷ ಚಿಕ್ಕಮಂಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನಲ್ಲಿ ನಡೆದಿದೆ.

ಹೌದು ಎನ್ ಆರ್ ಪುರ ಪಟ್ಟಣದ ರಾಜೀವ ನಗರದ ಗಣಪತಿ ಸೇವಾ ಸಮಿತಿಗೆ 13 ವರ್ಷಗಳಿಂದ ಮುಸ್ಲಿಂ ಸಮುದಾಯದ ಜಬೇದಾ ಎನ್ನುವ ಮಹಿಳೆ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಎನ್ಆರ್ ಪುರ ಪಟ್ಟಣದ ಪುರಸಭೆ ಅಧ್ಯಕ್ಷರಾಗಿದ್ದು ಅನೇಕ ಸಾಮಾಜಿಕ ಸೇವೆಯಲ್ಲಿ ಜಾತಿ ಧರ್ಮಗಳನ್ನು ಮೀರಿ ಕೆಲಸವನ್ನು ಮಾಡುತ್ತಿದ್ದಾರೆ.
ಈ ರೀತಿ ಸಮಾಜಿಕ ಕಾರ್ಯ ಸೌಹಾರ್ದತೆಗೆ ಹೆಸರಾಗಿರುವ ಜುಬೇದಾ ಅವರಿಗೆ ನಾಡಿನಾದ್ಯಂತ ಮೆಚ್ವುಗೆ ವ್ಯಕ್ತವಾಗಿದೆ.
News By: Raghu Shikari-7411515737