ಹರ್ನಿಯಾ ಗಡ್ಡೆಯಾಗಿದೆ, ಅದು ಕ್ಯಾನ್ಸರ್ ಆಗುತ್ತದಾ..?!

ಹರ್ನಿಯಾ ಗಡ್ಡೆಯಾಗಿದೆ, ಅದು ಕ್ಯಾನ್ಸರ್ ಆಗುತ್ತದಾ..?!

ಉತ್ತರ: ಖಂಡಿತಾ ಅದು ಗಡ್ಡೆಯಲ್ಲ, ಕ್ಯಾನ್ಸರ್ ಆಗಲ್ಲ.

ಉದರ, ವಂಕ್ಷಣ(ತೊಡೆ ಸಂದು), ಹೊಕ್ಕಳು, ವೃಷಣ… ಗಳಲ್ಲಿ ಕಾಣುವ “ಹರ್ನಿಯಾ” ಎಂಬ ಊತ ಗಡ್ಡೆಗಳಲ್ಲ. ವಾಸ್ತವದಲ್ಲಿ ಅದು ಜೀವಕೋಶಗಳ ಊತವೂ ಸಹ ಅಲ್ಲ.

ಏನಿದು ಹರ್ನಿಯಾ?:
ನಮ್ಮ ಕರುಳು, ಉದರದ ಪೊರೆಯ ಸಹಾಯದಿಂದ ಅದರೊಳಗೆ ಬಿಗಿಯಾಗಿಯೂ ಮತ್ತು ಸುರಕ್ಷಿತವಾಗಿಯೂ ನೆಲೆಸಿದ್ದು, ನಿರಂತರ ತನ್ನ ಗಾತ್ರದಲ್ಲಿ ಹಿಗ್ಗುತ್ತಾ, ಕುಗ್ಗುತ್ತಾ ಆಹಾರದ ಜೀರ್ಣಕ್ರಿಯೆಯಲ್ಲಿ ತೊಡಗಿರುತ್ತದೆ.

ಉದರದ ಈ ಪೊರೆಯು ಅಗಲವಾದ ಬಟ್ಟೆಯಂತಿದ್ದು, ಅದು ಮೃದುವಾಗಿಯೂ, ಆದರೆ ಹರಿಯದಂತೆ ದೃಢವಾಗಿಯೂ ಇರುತ್ತದೆ.

ಕರುಳಿನ ಒತ್ತಡದಿಂದ ಈ ಪೊರೆಯು ಕೆಲವು ಸ್ಥಳಗಳಲ್ಲಿ ಹರಿದು ರಂಧ್ರದಂತೆ ಆಗುತ್ತದೆ. ಆಗ ಆ ರಂಧ್ರದ ಹತ್ತಿರದ ಪದರಕ್ಕೆ ಹೊಂದಿಕೊಂಡಿರುವ ನಮ್ಮ ಕರುಳಿನ ಒಂದು ಭಾಗ ಹೊರಬರುವುದನ್ನೇ ಹರ್ನಿಯಾ ಎನ್ನುತ್ತಾರೆ.

ಮೃದು ನಲಿಕೆಯಾಕಾರದ ನಮ್ಮ‌ ಕರುಳು ಸ್ವಲ್ಪ ಮಡಿಚಿಕೊಂಡು ಈ ರಂಧ್ರದ ಮೂಲಕ ಹೊರಕ್ಕೆ ನುಗ್ಗುತ್ತದೆ. ಆದ್ದರಿಂದಲೇ ವ್ಯಕ್ತಿ ಮಲಗಿದಾಗ, ಹೊಟ್ಟೆ ಖಾಲಿಯಾದಾಗ ಹರ್ನಿಯಾ ಮಾಯವಾಗುತ್ತದೆ ಮತ್ತು ನಿಂತಾಗ ಹೊರ ಬರುತ್ತದೆ.

ಮತ್ತು ಗ್ಯಾಸ್ ಆದಾಗ, ಮಲಬದ್ಧತೆ ಆದಾಗ, ಹೊಟ್ಟೆ ಬಿರಿಯುವಂತೆ ತಿಂದಾಗ, ಒತ್ತಡದಿಂದ ಭಾರ ಎತ್ತಿದಾಗ, ಜೋರಾಗಿ ಕೂಗಿದಾಗ, ಉಸಿರು ಬಿಗಿ ಹಿಡಿವ ಪ್ರಾಣಾಯಾಮ ಮಾಡಿದಾಗ ಹೆಚ್ಚು ಊದಿಕೊಳ್ಳುತ್ತದೆ.

ಪರಿಹಾರ:?!
ಸದ್ಯಕ್ಕೆ ಶಸ್ತ್ರಚಿಕಿತ್ಸೆಯೇ ಪರಿಹಾರ ಎನ್ನುತ್ತಾರೆ.

ವಾಸ್ತವ ಹಾಗಿಲ್ಲ ಮತ್ತು ಎಲ್ಲಾ ಹರ್ನಿಯಾಗಳಿಗೆ ಶಸ್ತ್ರಚಿಕಿತ್ಸೆ ಬೇಕಿಲ್ಲ. ಅದು ಅಪಾಯಕಾರಿಯೂ ಅಲ್ಲ, ಕೆಲವರಿಗೆ ಜೀವನ‌ಪರ್ಯಂತ ಇರುತ್ತದೆ, ಆದರೆ ಒಂದು ದಿನವೂ ತೊಂದರೆ ಕೊಡುವುದಿಲ್ಲ.

ಇಲ್ಲಿ ವೈದ್ಯನ ಪ್ರಪ್ರಥಮ ಕೆಲಸವೆಂದರೆ, ಹರ್ನಿಯಾ ತೊಂದರೆ ಆಗದಂತೆ ಮತ್ತು ಶಸ್ತ್ರಚಿಕಿತ್ಸೆ ಇಲ್ಲದಂತೆ ನೋಡಿಕೊಳ್ಳುವುದು. ಹರ್ನಿಯಾ ಎಂದ ತಕ್ಷಣ, ಕೇವಲ ಶೇ. 5 ರಷ್ಟು ಜನರಲ್ಲಿ ಮುಂದೊಮ್ಮೆ ಆಗಬಹುದಾದ ಕಾಂಪ್ಲಿಕೇಷನ್ ಸಾಧ್ಯತೆಗಳನ್ನೇ ಹೇಳಿ, ಭಯ ಹುಟ್ಟಿಸಿ, ಶಸ್ತ್ರಚಿಕಿತ್ಸೆಗೆ ತಯಾರು ಮಾಡುವುದಲ್ಲ.

ಆಯುರ್ವೇದದಲ್ಲಿ ಹರ್ನಿಯಾವು ಶಸ್ತ್ರಚಿಕಿತ್ಸೆ ಇಲ್ಲದೇ ಕೇವಲ ಔಷಧಿಗಳಿಂದ ಸರಿಯಾಗುತ್ತದೆಯೇ?:
ಇಲ್ಲ, ಅದು ಹಾಗಲ್ಲ, ಆಯುರ್ವೇದದಲ್ಲಿ —
• ಹರ್ನಿಯಾ ಬಾರದಂತೆ ತಡೆಯುತ್ತಾರೆ.
• ಹರ್ನಿಯಾ ಬಂದಾಗ ಒಂದು ಗುಳ್ಳೆಯಂತೆ ಇರುತ್ತದೆ, ಆಗ ಅದನ್ನು ಕೇವಲ ಔಷಧ ಮತ್ತು ಆಹಾರಗಳಿಂದ ಗುಣಪಡಿಸಬಹುದು.
• ಒಂದೊಮ್ಮೆ ಚಿಕಿತ್ಸೆ ಸಾಧ್ಯವಾಗದಿದ್ದಲ್ಲಿ, ಜೀವನಪೂರ್ತಿ ದೊಡ್ಡದಾಗದಂತೆ ಅದನ್ನು ಅಲ್ಲಿಗೇ ತಡೆದುಬಿಡುತ್ತಾರೆ.

• ಹರ್ನಿಯಾ ಬರುವ ಮತ್ತು ದೊಡ್ಡದಾಗುವ ಕಾರಣಗಳನ್ನು ಗುರುತಿಸಿ ತಡೆದುಬಿಡುತ್ತಾರೆ.
• ಆಗದಿದ್ದರೆ, ಆಯುರ್ವೇದದಲ್ಲಿಯೂ ಶಸ್ತ್ರಚಿಕಿತ್ಸೆ ಹೇಳುತ್ತಾರೆ ಮತ್ತು 5000 ವರ್ಷಗಳ ಹಿಂದೆಯೂ ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆದರೆ, ಅವರು ಅತ್ಯಂತ ವಿರಳವಾಗಿ ದೇಹವನ್ನು ಕತ್ತರಿಸುತ್ತಿದ್ದರು. ಈಗಿನಂತೆ ಸಣ್ಣ ಅವಕಾಶವನ್ನೂ ಬಿಡದೇ ದೇಹಕ್ಕೆ ಚಾಕು ಮತ್ತು ಕತ್ತರಿ ಪ್ರಯೋಗ ಮಾಡುತ್ತಿರಲಿಲ್ಲ.

ಹರ್ನಿಯಾ ತಡೆಯುವ ವಿಧಿವಿಧಾನಗಳನ್ನು ನಾಳೆ ನೋಡೋಣ…

ಡಾ. ಮಲ್ಲಿಕಾರ್ಜುನ ಡಂಬಳ
8792290274 9148702645
ATHARVA Ayurveda Hospital & Research Institute

Admin

Leave a Reply

Your email address will not be published. Required fields are marked *

error: Content is protected !!