ಶಿಕಾರಿಪುರ :ಹರ್ಷಹತ್ಯೆ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ – ಹಿಂದೂ ಜನಜಾಗೃತಿ ಸಮಿತಿ..!

ಶಿಕಾರಿಪುರ :ಹರ್ಷಹತ್ಯೆ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ – ಹಿಂದೂ ಜನಜಾಗೃತಿ ಸಮಿತಿ..!

ಶಿಕಾರಿಪುರ :ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷರವರ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಮತ್ತು ಹತ್ಯೆ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಶಿಕಾರಿಪುರದ ತಾಲೂಕು ಕಚೇರಿ ಆವರಣದಲ್ಲಿ ಯಲ್ಲಿ ಹಿಂದೂ ಜನ ಜಾಗೃತಿ ಸಮಿತಿ ಮತ್ತು ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾವೇರಿ ರಾಯ್ಕರ್ ಹರ್ಷರವರ ಹತ್ಯೆ ಪ್ರಕರಣವು ಅತ್ಯಂತ ಗಂಭೀರ ಪ್ರಕರಣವಾಗಿದ್ದು ಇದು ಕೇವಲ ಒಂದು ಕೊಲೆಯಲ್ಲದೇ ಇದೊಂದು ಭಯೋತ್ಪಾದನಾ ಕೃತ್ಯವಾಗಿದೆ.

ಇದುವರೆಗೆ ಕರ್ನಾಟಕ ರಾಜ್ಯದಲ್ಲಿ 35 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಡೆದಿದೆ. ಈ ಎಲ್ಲ ಹತ್ಯೆಗಳನ್ನು ಒಂದೇ ಸಮುದಾಯಕ್ಕೆ ಸೇರಿದವರು ಮಾಡಿದ್ದಾರೆ.

ಹಿಂದೂ ಕಾರ್ಯಕರ್ತ ಹರ್ಷ ಸೇರಿ, ಎಲ್ಲ ಹಿಂದೂ ಕಾರ್ಯಕರ್ತರನ್ನು ಹಿಂದುತ್ವದ ಕಾರ್ಯ ಮಾಡುತ್ತಿದ್ದರು ಎನ್ನುವ ಒಂದೇ ಕಾರಣಕ್ಕಾಗಿ ಅವರ ಹತ್ಯೆ ಮಾಡಲಾಗಿದೆ.

ಈ ಹಿಂದೆ ನಡೆದ ಎಲ್ಲ ಹಿಂದೂ ಕಾರ್ಯಕರ್ತರ ಹತ್ಯಾ ಪ್ರಕರಣದಲ್ಲಿ ಒಂದೇ ಗುಂಪು, ಒಂದೇ ಸಂಘಟನೆಯ ಸದಸ್ಯರು ಮತ್ತು ಒಂದೇ ಮಾದರಿಯಲ್ಲಿ ಹತ್ಯೆ ಮಾಡಿರುವುದು ಗಮನಕ್ಕೆ ಬರುತ್ತಿದೆ‌.

ಅಷ್ಟೇಅಲ್ಲದೇ ಹಿಂದಿನ ಹಿಂದೂ ಕಾರ್ಯಕರ್ತರ ಹತ್ಯೆಯ ಅಪರಾಧದ ತನಿಖಾ ವರದಿಯನ್ನು ಗಮನಿಸಿದಾಗ, ಭಾರತದಲ್ಲಿ ಇಸ್ಲಾಮಿಕ್ ಶಾಸನ ತರಲು ಮತಾಂಧ ಸಂಘಟನೆ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾ ದೇಶದಲ್ಲಿ ಹಿಂದೂ ನಾಯಕರ ಬರ್ಬರ ಹತ್ಯೆ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ ಎಂದರು

ಮತ್ತು ಬಹುತಾಂಶ ಪ್ರಕರಣದಲ್ಲಿ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಹೆಸರು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ.

ಅದಲ್ಲದೇ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾ ಬಲವಂತದ ಮತಾಂತರ, ಭಯೋತ್ಪಾದನೆ ತರಬೇತಿ, ಅಕ್ರಮ ಹಣ ವರ್ಗಾವಣೆ, ಕಪ್ಪುಹಣ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ದಂಗೆ ಮಾಡುವುದು, ಕೋಮು ಗಲಭೆ ಮಾಡುವುದು ಮುಂತಾದ ರೀತಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದೆ. ಅವರ ದ್ಯೇಯಕ್ಕೆ ಅಡ್ಡ ಬರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಮಾಡುತ್ತಿದೆ ಎಂದರು.

ಇದು ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಮಾತ್ರವಲ್ಲದೇ, ದೇಶದ ಸುರಕ್ಷತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಸಮಾಜದಲ್ಲಿ ಅಶಾಂತಿಯನ್ನು ಹರಡುವ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾದ ಮೇಲೆ ನಿಷೇಧವನ್ನು ಹಾಕಬೇಕು. ಹರ್ಷರವರ ಹತ್ಯೆ ಆರೋಪಿಗಳಿಗೆ ಕೂಡಲೇ ಕಠಿಣ ಶಿಕ್ಷೆ ನೀಡುವ ದೃಷ್ಟಿಯಿಂದ ತ್ವರಿತ ಪ್ರಯತ್ನ ಮಾಡಬೇಕು ಎಂದರು.

ಹರ್ಷರವರ ಹತ್ಯಾ ಪ್ರಕರಣದ ಆರೋಪಿಗಳ ಮೇಲೆ ಯುಎಪಿಎ ಮತ್ತು ಕೊಕಾ ಕಾಯಿದೆಯನ್ನು ಹಾಕಿ, ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯನ್ನು ಒಪ್ಪಿಸಬೇಕು

ಇದಲ್ಲದೇ ಈಗಲೂ ಸಹ ಅನೇಕ ಹಿಂದೂ ಕಾರ್ಯಕರ್ತರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಕೂಡಲೇ ಸರ್ಕಾರವು ಉಳಿದ ಹಿಂದೂ ಕಾರ್ಯಕರ್ತರರಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು‌.

ಈ ಸಂಧರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಕಾವೇರಿ ರಾಯ್ಕರ್, ಪರಶುರಾಮ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಭವರ್ ಸಿಂಗ್, ಉಪಾಧ್ಯಕ್ಷರಾದ ಪ್ರಕಾಶ್ ಎಂ.ಎಸ್. ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಬಿ.ವಿ. ಮಂಜುನಾಥ್, ನಾರಾಯಣ್ ರಾವ್, ಎಸ್.ಬಿ. ಮಠದ್ ಪುರಸಭಾ ಅಧ್ಯಕ್ಷರಾದ ಲಕ್ಷ್ಮೀ ಮಹಾಲಿಂಗಪ್ಪ, ಸದಸ್ಯರಾದ ರೂಪ ಮಂಜುನಾಥ್, ಪಾಲಕ್ಷಪ್ಪ, ವಿಶ್ವನಾಥ್, ಮರಾಠ ಸಮಾಜದ ತಾಲೂಕು ಅಧ್ಯಕ್ಷರಾದ ಗುರು ಜಗತಾಪ್, ಆನಂದ್,ಪ್ರವೀಣ್ ಬೆಣ್ಣೆ,ದರ್ಶನ್ ಕಪ್ಪನಹಳ್ಳಿ ರಾಜ್ ಭಜರಂಗಿ, ರಾಜು,ಮಂಜಪ್ಪ, ವಿ.ರಘು, ಈರೇಶ್, ಪುಷ್ಪ ಮತ್ತಿತರರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!