ಹೃದಯದ ಸ್ನಾಯುಗಳ ದೌರ್ಬಲ್ಯಕ್ಕೆ ಅಂತ್ಯಂತ ಪ್ರಬಲ ಕಾರಣಗಳು..!

ಹೃದಯದ ಸ್ನಾಯುಗಳ ದೌರ್ಬಲ್ಯಕ್ಕೆ ಅಂತ್ಯಂತ ಪ್ರಬಲ ಕಾರಣಗಳು..!

ಸ್ವಸ್ಥ ಜೀವನಕ್ಕೆ ಆಯುರ್ವೇದ,

ಇಂದಿನ ವಿಷಯ: ಹೃದಯದ ಸ್ನಾಯುಗಳ ದೌರ್ಬಲ್ಯಕ್ಕೆ ಅಂತ್ಯಂತ ಪ್ರಬಲ ಕಾರಣಗಳು

• ಮಲಬದ್ಧತೆ
• ತುಪ್ಪವಿಲ್ಲದ ಆಹಾರ
• ಮಧುರವಲ್ಲದ ಆಹಾರ
• ದ್ರವಾಂಶ ಕ್ಷೀಣ ಆಹಾರ
• ತಾಜಾ ಅಲ್ಲದ ಆಹಾರ
• ಅತ್ಯಂತ ಒಣಗಿಸುವ ಕೇವಲ ಪ್ರೋಟೀನ್ ಸೇವನೆ
• ತಡರಾತ್ರಿ ನಡುವೆ ನಿದ್ದೆ
• ಒತ್ತಡದ ಜೀವನ
• ಪ್ರೀತಿ ಇಲ್ಲದ ಸ್ವಾರ್ಥದ ಬದುಕು
• ಮಹತ್ವಾಕಾಂಕ್ಷೆ

ಎಲ್ಲವನ್ನೂ ಒಟ್ಟುಗೂಡಿಸಿ ಏನಾಗುತ್ತಿದೆ ಎಂದು ನೋಡೋಣ…

ಹೃದಯದ ಸ್ನಾಯುಗಳು ಪ್ರಾಣ ಇರುವವರೆಗೆ ಉತ್‌ಕ್ಷೇಪ-ಅವಕ್ಷೇಪಗಳ ರೂಪದಲ್ಲಿ ನಿರಂತರ ಚಲನೆಯಲ್ಲಿ ಇರುತ್ತವೆ. ಈ ಕಾರಣಕ್ಕಾಗಿಯೇ ಶರೀರದ ಬೇರೆ ಯಾವುದೇ ಸ್ನಾಯುಗಳಿಗಿಂತ ವಿಭಿನ್ನವಾಗಿ ರಚನೆಗೊಂಡಿವೆ.

ಹೃದಯದ ಸ್ನಾಯುಗಳಿಗೆ – ದೃಢತೆ ಎಷ್ಟು ಮುಖ್ಯವೋ ಮೆದುತನವೂ ಅಷ್ಟೇ ಮುಖ್ಯ.*
ಸ್ನಿಗ್ಧತೆ(ಜಿಡ್ಡು) ಎಷ್ಟು ಮುಖ್ಯವೋ ರೂಕ್ಷತೆ(ಒಣಗುವಿಕೆ)ಯೂ ಅಷ್ಟೇ ಮುಖ್ಯ.
ತಂಪು ಎಷ್ಟು ಮುಖ್ಯವೋ ಉಷ್ಣವೂ ಅಷ್ಟೇ ಮುಖ್ಯ.
ಶರೀರ ಎಷ್ಟು ಮುಖ್ಯವೋ ಅದಕ್ಕಿಂತ ನೂರುಪಟ್ಟು ಮನಸ್ಸು ಮುಖ್ಯ.

ಹೃದಯದ ಸ್ನಾಯುಗಳ ವಿಷಯದಲ್ಲಿ ನಾವು ಮಾಡುತ್ತಿರುವ ಮಹಾನ್ ತಪ್ಪು ಏನೆಂದರೆ, ಶರೀರದ ಇತರ ಸ್ನಾಯುಗಳಂತೆ ಅವುಗಳನ್ನೂ ಪರಿಗಣಿಸಿದ್ದೇವೆ ಮತ್ತು ಆ ಕಾರಣದಿಂದ ಎಲ್ಲರಿಗೂ ಜಿಡ್ಡನ್ನು ಬಿಡಿಸಿ ಪ್ರೋಟೀನ್ ಸೇವನೆಗೆ ಹೇಳುತ್ತಿರುವುದು. ಸಾಧಕ ಪಿತ್ತದ ದೃಢ ಉಷ್ಣದ ಸ್ಥಾನದಲ್ಲಿ ತೀಕ್ಷ್ಣ ಪಿತ್ತದ ಅತಂತ್ರ, ತಕ್ಷಣ ಉರಿದುಬಿಡುವಂತಹ ಪಿತ್ತ ಹೆಚ್ಚಿಸುವ ಆಹಾರ ಸೇವನೆಗೆ ಮುಂದಾಗಿರುವುದು. ಹೃದಯಕ್ಕೆ ಶಕ್ತಿ ತುಂಬದೇ ಮಹತ್ವಾಕಾಂಕ್ಷೆಯ ಬೆನ್ನು ಹತ್ತಿಸುವುದು.

ಹಾಗೆಯೇ, ಸಾಧಕರ ದೃಢ ಮನಸ್ಸಿಗೆ ಅವರ ಹೃದಯದ ಸ್ನಾಯುಗಳ ದೃಢತೆ ಕಾರಣ ಎಂಬುದನ್ನು ಮರೆಸಲಾಗಿದೆ.

ಆತ್ಮೀಯರೇ ಗಮನಿಸಿ,
ಸಿಟ್ಟು(ಕೋಪ) ಮತ್ತು ದೃಢತೆ ಎರಡೂ ಬೆಂಕಿಯೇ ಆದರೂ ಎರಡೂ ಪಿತ್ತಗಳೂ ಒಂದೇ ಅಲ್ಲ!

ಯಾರ LVEF 50% ಗಿಂತ ಕಡಿಮೆಯಾಗುತ್ತದೆಯೋ ಅವರಿಗೆ ಸಿಟ್ಟು, ಕಿರಿಕಿರಿ ಇರುತ್ತದೆಯೋ ದೃಢತೆ ಇರುತ್ತದೆಯೋ ಗಮನಿಸಿ…

ಈ ಸತ್ಯ ತಿಳಿಯದೇ ಆಹಾರ, ಔಷಧ-ಉಪಚಾರಗಳು ನಡೆಯುತ್ತಿರುವುದು ಭಯವೆಂಬ ನರಕ ಸೃಷ್ಠಿಗೆ ಕಾರಣವಾಗುತ್ತಿದೆ…

ತುಪ್ಪ, ಮಧುರ ರಸ ಮತ್ತು ಆಹಾರದಲ್ಲಿ ದ್ರವಾಂಶ ಹೇರಳವಾಗಿಲ್ಲದೇ ಹೃದಯದ ಸ್ನಾಯುಗಳಿಗೆ ಸ್ನಿಗ್ಧತೆ ಇಲ್ಲ.

ಮಲಬದ್ಧತೆ, ಕೇವಲ ಪ್ರೋಟೀನ್ ಸೇವನೆ, ತಡರಾತ್ರಿ ನಿದ್ದೆ, ಒತ್ತಡದ ಜೀವನ ಮತ್ತು ತರಬೇತಿ ಪಡೆಯದ, ಸಮಾಧಾನವಿಲ್ಲದ ಮಹತ್ವಾಕಾಂಕ್ಷೆ ಇವುಗಳು ಹೃದಯದ ಸ್ನಾಯುಗಳನ್ನು ಒಣಗಿಸುತ್ತವೆ! 🤔

ಒಂದೆಡೆ ಹೃದಯದ ಸ್ನಾಯುಗಳನ್ನು ಸೂಕ್ತವಾಗಿ ಪೋಷಣೆ ಮಾಡದಿರುವುದು ಇನ್ನೊಂದೆಡೆ ಅವುಗಳನ್ನು ಒಣಗಿಸುವುದು ನಡೆಯುತ್ತಿದೆ.

ಈ ರೀತಿಯ ಆಹಾರ ಮತ್ತು ಔಷಧಗಳ ಜೊತೆಗೆ ಜೀವನಶೈಲಿಯಲ್ಲಿ ಪ್ರೀತಿಯೇ ಇಲ್ಲದ ಬದುಕು, ತನ್ನದೇ ಹೆಚ್ಚೆಂಬ ಚಿಂತನೆ ಹೃದಯವನ್ನು ಇನ್ನಿಲ್ಲದಂತೆ ಘಾಸಿಗೊಳಿಸುತ್ತಿವೆ…

ನಮ್ಮ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೃದ್ರೋಗಿಗಳಲ್ಲಿ ಈ ಅಂಶಗಳನ್ನು ಪ್ರಧಾನವಾಗಿ ಗಮನಿಸುವ ಕಾರಣ ಎಷ್ಟು ಬೇಗ ಸ್ನಾಯುಗಳ ದೃಢತೆ ಬರುತ್ತಿದೆ ಎಂಬುದನ್ನು ಕಂಡು ಆಯುರ್ವೇದ ಆಚಾರ್ಯರ ಬಗ್ಗೆ ಹೃದಯದಲ್ಲಿ ಧನ್ಯತಾಭಾವ ಮೂಡುತ್ತದೆ. ಅವರ ಆ ಅತ್ಯುನ್ನತ ಜ್ಞಾನದ ಮೇರು ಪರ್ವತದ ಶಕ್ತಿಯನ್ನು ಗೌರವಿಸುತ್ತಾ ಅದರ ಉಪಯೋಗ ಪಡೆಯದ ಇಂದಿನ ಚಿಕಿತ್ಸಾ ವಿಧಾನಗಳ ಬಗ್ಗೆ ನೋವಾಗುತ್ತದೆ.

ಕೇವಲ 20 ದಿನಗಳಲ್ಲಿ 35% ಇದ್ದ LVEF 55% ದಾಟುವುದು ಆಯುರ್ವೇದದಲ್ಲಿ ಅತ್ಯಂತ ಸಹಜ, ಅದು ಅಲೋಪತಿಯಲ್ಲಿ ಹೆಚ್ಚು ಕಡಿಮೆ ಅಸಾಧ್ಯ…

ಮೇಲಿನ ಯಾವುದೇ ಕಾರಣಗಳು ಇದ್ದರೆ, ತಕ್ಷಣಕ್ಕೆ ಅವು ತೊಂದರೆ ಕೊಡುವುದಿಲ್ಲ ಎಂದು ಬಹುಕಾಲದವರೆಗೆ ಉಪೇಕ್ಷಿಸದೇ ಶುದ್ಧ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ.

ಮೇಲಿನ ಎಲ್ಲಾ ಕಾರಣಗಳು ನಮ್ಮ ತಪ್ಪುಗಳಿಂದ ಹೃದಯದ ಮೇಲೆ ಘಟಿಸುವ ಅನಿರೀಕ್ಷಿತ ತಿರುವುಗಳು.

ಮೇಲಿನ ಯಾವ ಕಾರಣಗಳೂ ಇಲ್ಲದ ಹೃದಯಸ್ಥಂಭನದ ವಿಷಯದಲ್ಲಿ
• ಸತ್ಯದ ಅರಿವು ಎಂಬುದು(ಹೃದಯದ ಸ್ನಾಯುಗಳ ವಿಚಾರದಲ್ಲಿ) ಬಹುಮುಖ್ಯ ಅಂಶ.

ಅಂದರೆ, ನಮ್ಮ ಶರೀರದಲ್ಲಿ ಪ್ರಾಣ-ಅಪಾನ ವಾಯುಗಳು ಪೂರ್ವನಿರ್ಧಾರಿತ ಆಯುಸ್ಸನ್ನು ಪಡೆದುಕೊಂಡು ಬಂದಿರುತ್ತವೆ. ಅವುಗಳ ಬೇರ್ಪಡುವಿಕೆಯ ಕಾರಣದಿಂದ ಹೃದಯ ಸ್ಥಂಭನ, ಮೆದುಳು ಸ್ಥಂಭನ, ಶ್ವಾಸಕೋಶಗಳ ನಿಷ್ಕ್ರಿಯತೆ ಅಕಾರಣವೆಂಬಂತೆ ಕ್ಷಣಮಾತ್ರದಲ್ಲಿ ಘಟಿಸಿಬಿಡುತ್ತವೆ…

ಈ ಸತ್ಯ ಎಲ್ಲರಲ್ಲೂ ಸಾಮಾನ್ಯ ಅಲ್ಲ “ಪುಣ್ಯದ ಸಾವು” ಎಂದು ಸಾಮಾನ್ಯವಾಗಿ ಕರೆಸಿಕೊಳ್ಳುವ ಹೃದಯ ಸ್ಥಂಭನಗಳು ಹೃದ್ರೋಗಗಳಲ್ಲ, ಅಲ್ಲಿ ಪ್ರಾಣಹರಣಕ್ಕೆ ಹೃದಯ ಒಂದು ಕಾರಣವೇ ಹೊರತು ಅದು ರೋಗಗ್ರಸ್ಥ ಹೃದಯವಲ್ಲ. ಹೃದ್ರೋಗ ಮನುಷ್ಯರನ್ನು ನರಳಿಸುತ್ತವೆ, ಆದರೆ ಈ ರೀತಿಯ ಸಾವುಗಳು ನರಳಿಸುವುದಿಲ್ಲ. ಹಾಗಾಗಿ, ಏನೂ ಅಪಥ್ಯ ಮಾಡದವನೂ ಹೃದಯ ಸ್ಥಂಭನದಿಂದ ಸಾಯುತ್ತಿಲ್ಲವೇ? ಎಂಬ ಅತಾರ್ಕಿಕ ಚರ್ಚೆಯಿಂದ ಆಹಾರ ವಿಹಾರಗಳನ್ನು ಕೆಡಿಸಿಕೊಳ್ಳುವುದು ಅನಗತ್ಯ.

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ ಶಿವಮೊಗ್ಗ.

Admin

Leave a Reply

Your email address will not be published. Required fields are marked *

error: Content is protected !!