ಶಿಕಾರಿಪುರ:ಬಸವೇಶ್ವರ, ವಿಠಲ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಸಂಸದ ಬಿ.ವೈ.ಆರ್ ಗುದ್ದಲಿ ಪೂಜೆ..!

ಶಿಕಾರಿಪುರ:ಬಸವೇಶ್ವರ, ವಿಠಲ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಸಂಸದ ಬಿ.ವೈ.ಆರ್ ಗುದ್ದಲಿ ಪೂಜೆ..!

ಶಿಕಾಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಸಲಾಗುತ್ತಿರುವ ಶ್ರೀ ಬಸವೇಶ್ವರ ದೇವಾಲಯದ ಸಮುದಾಯ ಭವನ ಹಾಗೂ ಪಾಂಡುರಂಗ ವಿಠಲ ದೇವಾಲಯ ಸಮುದಾಯ ಭವನಗಳಿಗೆ ಸಂಸದ ಬಿ..ವೈ ರಾಘವೇಂದ್ರ ಗುದ್ದಲಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾಜಿ ಸಿಎಂ ಬಿ.ಎಸ್ ವೈ ಅವರ ಆರ್ಶಿವಾದದಿಂದ ತಾಲೂಕಿನ ಸಮಗ್ರ‌ ಅಭಿವೃದ್ಧಿ ಎಲ್ಲಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಹಣವನ್ನು ಮಂಜೂರು ಮಾಡಿಲಾಗಿದೆ.

ನಾಮದೇವ ಸಿಂಪಿ ಸಮಾಜ ಬಿ.ಎಸ್ ವೈ ಅವರಿಗೆ ರಾಜಕೀಯ ಶಕ್ತಿಯನ್ನು ನೀಡಿದೆ ಅವರ ಋಣ ತೀರಿಸಲು ಅಳಿಲು ಸೇವೆ ನಾವು ಮಾಡಿದ್ದೇವೆ.

ಸರ್ಕಾರದ ಜೊತೆಗೆ ಸಾರ್ವಜನಿಕವಾಗಿ ದೇಣಿಗೆ ಪಡೆದು ಇನ್ನೂ ಅದ್ಬುತವಾಗಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದರು‌

ದೊಡ್ಡ ಪೇಟ್ಟೆಯ ಬಸವೇಶ್ವರ ದೇವಸ್ಥಾನ ಸಮುದಾಯ ಭವನ ವಿಠಲ್ ದೇವಸ್ಥಾನದ ಸಮುದಾಯ ಭವನ ಸೇರಿ ಒಂದು ಕೋಟಿ ಅನುದಾನ ನೀಡಲಾಗಿದೆ.

ಸಮುದಾಯ ಭವನಗಳು ಸದ್ಬಳಕೆಯಾಗಬೇಕಾಗಿದೆ ಸಮಾಜದಲ್ಲಿ ಇರುವ ಬಡವರಿಗೆ ಮದುವೆ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗಿಲಿ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲಕ್ಷ್ಮಿ‌ಮಹಾದೇವಪ್ಪ, ಎಂಐಡಿಬಿ ಅಧ್ಯಕ್ಷ ಕೆ.ಎಸ್‌‌ ಗುರುಮೂರ್ತಿ, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ನಾರಾಯಣಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಪುರಸಬಾ ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಸ್ವಾಮಿ,ವೀರಶೈವ ಸಮಾಜದ ಮುಖಂಡರು ಮತ್ತಿತರ ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!